(1) ಅಧಿನಿಯಮದ ಪ್ರಕರಣ 39ರ ಮೇರೆಗೆ ರಿಜಿಸ್ಟ್ರಾರರ ತೀರ್ಮಾನಕ್ಕೆ ಯಾವುದೇ ವಿವಾದವನ್ನು ಲಿಖಿತ ಪತ್ರದ ಮೂಲಕ ಕಳುಹಿಸಿಕೊಡತಕ್ಕದ್ದು, ಮತ್ತು ಈ ಬಗ್ಗೆ ಸರ್ಕಾರವು ಅಧಿಸೂಚಿಸಿದ ಮೌಲ್ಯದ ಸ್ಟಾಂಪನ್ನು ಹಚ್ಚತಕ್ಕದ್ದು.
1 [(1ಎ) ಯಾವುದೇ ಸಹಕಾರಿಯು ಮತ್ತು ಸಂಯುಕ್ತ ಸಹಕಾರಿಯು ತಾನಾಗಿ ಅದರ ಯಾವುದೇ ಪ್ರತಿನಿಧಿಯ ಅಥವಾ ಆಡಳಿತ ಮಂಡಲಿಯ ಯಾವುದೇ ಸದಸ್ಯನ ಚುನಾವಣೆಗೆ ಸಂಬಂಧಪಟ್ಟಂತೆ ಯಾವುದೇ ಚುನಾವಣಾ ತಕರಾರು ವಿವಾದವನ್ನು ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದಲ್ಲ ಮತ್ತು ಸಹಕಾರಿಯ ನಿಧಿಗಳಿಂದ ಯಾವುದೇ ಮೊಬಲಗನ್ನು ವೆಚ್ಚ ಮಾಡತಕ್ಕದ್ದಲ್ಲ.]
(2) ಉಪನಿಯಮ (1)ಕ್ಕೆ ಅನುಸಾರವಾಗಿ ಅರ್ಜಿಯನ್ನು ಸ್ವೀಕರಿಸಿದ ಮೇಲೆ ರಿಜಿಸ್ಟ್ರಾರನು, ಪ್ರಕರಣ 41(1)(ಸಿ)ರ ಅಡಿಯಲ್ಲಿ ಮಧ್ಯಸ್ಥಿಕೆಯ ಮೂಲಕ ವಿಲೆ ಮಾಡಬೇಕೆಂದು ತೀರ್ಮಾನಿಸಿದರೆ, ತಾನು ನೇಮಕ ಮಾಡಿದ ಒಬ್ಬ ಮಧ್ಯಸ್ಥಗಾರನಿಗೆ ವಿವಾದವನ್ನು ತೀರ್ಮಾನಿಸಲು ಕಳುಹಿಸಿಕೊಡತಕ್ಕದ್ದು.
(3) (ಎ) ರಿಜಿಸ್ಟ್ರಾರನು, ಮಧ್ಯಸ್ಥಗಾರನು ಅಥವಾ ವಿವಾದವನ್ನು ತೀರ್ಮಾನಿಸುವ ಇತರ ವ್ಯಕ್ತಿಯು, ಸಂಬಂಧಪಟ್ಟ ಪಕ್ಷಕಾರರಿಗೆ ಸಮನುಗಳನ್ನು ಜಾರಿ ಮಾಡಿದ ತರುವಾಯ ಹಾಜರಾದ ಪಕ್ಷಕಾರರಿಂದ ಮತ್ತು ಸಾಕ್ಷಿಗಳಿಂದ ಪಡೆದ ಸಾಕ್ಷ್ಯದ ಸಂಕ್ಷಿಪ್ತ ಟಿಪ್ಪಣೆಯನ್ನು ದಾಖಲಿಸಿಕೊಳ್ಳಬೇಕು. ನಂತರ ಪಕ್ಷಕಾರರು ಕೊಟ್ಟ ದಾಖಲೆಗಳನ್ನು ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿ ನಂತರ ನ್ಯಾಯಸಮ್ಮತವಾದ ಮತ್ತು ಉತ್ತಮ ವಿವೇಚನೆಗೆ ಅನುಗುಣವಾಗಿ ತೀರ್ಮಾನ ಅಥವಾ ಅವಾರ್ಡನ್ನು ನೀಡತಕ್ಕದ್ದು.
(ಬಿ) ರಿಜಿಸ್ಟ್ರಾರನು ಅಥವಾ ಮಧ್ಯಸ್ಥಗಾರನು ನೀಡುವ ತೀರ್ಮಾನ ಅಥವಾ ಅವಾರ್ಡ ಲಿಖಿತದಲ್ಲಿರತಕ್ಕದ್ದು ಮತ್ತು ಅದನ್ನು ಬಹಿರಂಗ ನ್ಯಾಯಾಲಯದಲ್ಲಿ ಉದ್ಘೋಷಿಸತಕ್ಕದ್ದು. ವಿಧ್ಯುಕ್ತವಾಗಿ ಸಮನು ಮಾಡಲಾದ ಪಕ್ಷಕಾರರು ಹಾಜರಾಗಲು ತಪ್ಪಿದಲ್ಲಿ ವಿವಾದವನ್ನು ಏಕಪಕ್ಷೀಯವಾಗಿ ತೀರ್ಮಾನಿಸಬಹುದು. ಪಕ್ಷಕಾರರು ತಮ್ಮ ಗೈರು ಹಾಜರಿಯ ಬಗ್ಗೆ ಸಾಕಷ್ಟು ಕಾರಣವನ್ನು ತೋರಿಸಿದಲ್ಲಿ, ಅಂಥ ಏಕಪಕ್ಷೀಯ ತೀರ್ಮಾನ ಅಥವಾ ಅವಾರ್ಡುಗಳನ್ನು ರಿಜಿಸ್ಟ್ರಾರನು ತಳ್ಳಿ ಹಾಕಬಹುದು ಮತು ್ತ ವಿವಾದವನ್ನು ಪುನಃ ಕಡತದ ಮೇಲೆ ತೆಗೆದುಕೊಳ್ಳುವಂತೆ ಮತ್ತು ಇತ್ಯರ್ಥ ಮಾಡುವಂತೆ ಆದೇಶಿಸಬಹುದು:
ಪರಂತು ಏಕಪಕ್ಷೀಯ ತೀರ್ಮಾನವನ್ನು ಅಥವಾ ಅವಾರ್ಡನ್ನು ತಳ್ಳಿಹಾಕುವಂತೆ ಅಂಥ ಪಕ್ಷಕಾರರು ಸಲ್ಲಿಸುವ ಅರ್ಜಿಯನ್ನು ಯಾವ ಪಕ್ಷಕಾರನಿಗೆ ವಿವಾದದಲ್ಲಿ ವಿಧ್ಯುಕ್ತವಾಗಿ ಸಮನು ನೀಡಲಾಗಿತ್ತೋ ಆ ಪಕ್ಷಕಾರನ ಗೈರುಹಾಜರಿ ನಿಮಿತ್ತ ಅಂಥ ತೀರ್ಮಾನ ಅಥವಾ ಅವಾರ್ಡನ್ನು ನೀಡಿರುವ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಅಥವಾ ಇತರ ಸಂದರ್ಭಗಳಲ್ಲಿ ಆ ತೀರ್ಮಾನ ಅಥವಾ ಅವಾರ್ಡನ್ನು ನೀಡಲಾಗಿರುವುದೆಂಬ ಸಂಗತಿಯು ತಿಳಿದುಬಂದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ರಿಜಿಸ್ಟ್ರಾರರಿಗೆ ಸಲ್ಲಿಸತಕ್ಕದ್ದು ಮತ್ತು ಸದರಿ ಅರ್ಜಿಯ ಸಂಬಂಧದಲ್ಲಿ ಎದುರು ಪಕ್ಷಕಾರನಿಗೆ ಸೂಕ್ತ ರೀತಿಯಲ್ಲಿ ನೋಟೀಸು ಜಾರಿ ಮಾಡದ ಹೊರತು ಅಂಥ ತೀರ್ಮಾನ ಅಥವಾ ಅವಾರ್ಡನ್ನು ತಳ್ಳಿಹಾಕತಕ್ಕದ್ದಲ್ಲ.
(4) (ಎ) ರಿಜಿಸ್ಟ್ರಾರನು, ಪ್ರಕರಣ 41ರ ಉಪ ಪ್ರಕರಣ (1)ರ
(i) (ಎ) ಖಂಡಕ್ಕನುಸಾರವಾಗಿ ವಿವಾದವನ್ನು ತಾನೇ ತೀರ್ಮಾನಿಸಿದರೆ, ಅಥವಾ
(ii) (ಬಿ) ಖಂಡಕ್ಕನುಸಾರವಾಗಿ ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ಅಧಿಕಾರಗಳನ್ನು ನಿಹಿತಗೊಳಿಸಲಾಗಿರುವ ಯಾಮೊಬ್ಬ ವ್ಯಕ್ತಿಗೆ ವಿಲೆಗಾಗಿ ವಿವಾದವನ್ನು ಒಪ್ಪಿಸಿದರೆ, ಅಥವಾ
(iii) (ಸಿ) ಖಂಡಕ್ಕನುಸಾರವಾಗಿ ಒಬ್ಬ ಮಧ್ಯಸ್ಥಗಾರನಿಗೆ ವಿವಾದವನ್ನು ಒಪ್ಪಿಸಿದರೆ ತಾನು ನಿರ್ಧರಿಸಬಹುದಾದ ಶುಲ್ಕವನ್ನು ಸಂಬಂಧಪಟ್ಟ ಪಕ್ಷಕಾರನು ಮುಂಗಡವಾಗಿ ಠೇವಣಿ ಇಡುವಂತೆ ಕೇಳಲು ಅಧಿಕಾರ ಹೊಂದಿರತಕ್ಕದ್ದು.
(ಬಿ) ಪ್ರಕರಣ 41ಕ್ಕನುಸಾರ ವಿವಾದವನ್ನು ತೀರ್ಮಾನಿಸುವ ರಿಜಿಸ್ಟ್ರಾರನು ಅಥವಾ ಮಧ್ಯಸ್ಥಗಾರನು ಅಥವಾ ಇತರ ವ್ಯಕ್ತಿಯು ವಿವಾದವನ್ನು ತೀರ್ಮಾನಿಸಲು ತಗಲುವ ಫೀ ಮತ್ತು ವೆಚ್ಚಗಳನ್ನು ಸಹಕಾರಿಯ ಹಣದಿಂದ ಪಾವತಿ ಮಾಡುವಂತೆ ಅಥವಾ ತಾನು ಸೂಕ್ತವೆಂದು ಯೋಚಿಸುವಂಥ ವಿವಾದದ ಪಕ್ಷಕಾರ ಅಥವಾ ಪಕ್ಷಕಾರರು ಪಾವತಿ ಮಾಡುವಂತೆ ಆದೇಶ ನೀಡಲು ಅಧಿಕಾರ ಹೊಂದಿರತಕ್ಕದ್ದು.
(5) (ಎ) ವಿವಾದಕ್ಕೆ ಸಂಬಂಧಪಟ್ಟ ಪಕ್ಷಕಾರರಲ್ಲಿ ಒಬ್ಬನು ಅಪ್ರಾಪ್ತ ವಯಸ್ಸಿನವನಾಗಿದ್ದರೆ, ಅಥವಾ ಅಸ್ವಸ್ಥಚಿತ್ತನಾಗಿದ್ದರೆ ರಿಜಿಸ್ಟ್ರಾರನು ಅಪ್ರಾಪ್ತ ವಯಸ್ಕತೆ ಅಥವಾ ಅಸ್ವಸ್ಥಚಿತ್ತತೆ ಬಗ್ಗೆ ಮನಗಂಡ ಮೇಲೆ ಮತ್ತು ಅಂತಹ ಅಪ್ರಾಪ್ತ ವಯಸ್ಕನಿಗೆ ಅಥವಾ ಅಸ್ವಸ್ಥಚಿತ್ತನಿಗಾಗಿ ಸೂಕ್ತ ವ್ಯಕ್ತಿಯನ್ನು ಪಾಲಕನನ್ನಾಗಿ ಸದರಿ ಉದ್ದೇಶಿತ ಪಾಲಕನಿಗೆ ನೋಟೀಸು ನೀಡಿದ ನಂತರ ನೇಮಿಸಬಹುದು. ಹಾಗೆ ನೇಮಿಸಲಾದ ವ್ಯಕ್ತಿಯು ಸಾಕಷ್ಟು ಕಾರಣಗಳನ್ನು ತೋರಿಸಿದಲ್ಲಿ ಆತನು ನಿವೃತ್ತನಾಗಲು ಅನುಮತಿಸಬಹುದು ಅಥವಾ ಅವನನ್ನು ತೆಗೆದು ಹಾಕಬಹುದು ಮತ್ತು ಅವನ ಸ್ಥಾನದಲ್ಲಿ ಬೇರೊಬ್ಬ ಪಾಲಕನನ್ನು ನೇಮಿಸಬಹುದು.
(ಬಿ) ವಿವಾದವನ್ನು ತೀರ್ಮಾನಿಸಲು ರಿಜಿಸ್ಟ್ರಾರನು ನೇಮಿಸಿದ ಮಧ್ಯಸ್ಥಗಾರನ ಮುಂದಿರುವ ವಿವಾದಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕನ ಅಥವಾ ಅಸ್ವಸ್ಥಚಿತ್ತನ ಸಲುವಾಗಿ ಪಾಲಕನನ್ನು ನೇಮಿಸುವ ಅವಶ್ಯಕತೆ ಕಂಡು ಬಂದಲ್ಲಿ ಅಂತಹ ಕಡತವನ್ನು ಪಾಲಕನ ನೇಮಕಕ್ಕಾಗಿ ರಿಜಿಸ್ಟ್ರಾರನಿಗೆ ವಾಪಸು ಕಳಿಸತಕ್ಕದ್ದು.
(6) (ಎ) ಒಂದು ಅವಾರ್ಡು / ಆದೇಶ / ತೀರ್ಮಾನ / ಡಿಕ್ರಿಯನ್ನು ನೀಡಿರುವ ಸಂದರ್ಭದಲ್ಲಿ, ಅದನ್ನು ನೀಡಿದ ವ್ಯಕ್ತಿಯು ತನ್ನ ಮುಂದೆ ತೆಗದುಕೊಂಡ ಮತ್ತು ರುಜುವಾತುಪಡಿಸಲಾದ ಯಾವುದೇ ಹೇಳಿಕೆಗಳು ಮತ್ತು ದಸ್ತಾವೇಜುಗಳ ಸಹಿತ ಅದನ್ನು ರಿಜಿಸ್ಟ್ರಾರನ ಕಚೇರಿಯಲ್ಲಿ ಫೈಲು ಮಾಡಿ ಇಡುವಂತೆ ಮಾಡತಕ್ಕದ್ದು ಮತ್ತು ಪಕ್ಷಕಾರರಿಗೆ ಈ ಬಗ್ಗೆ ನೋಟೀಸನ್ನು ಕೊಡತಕ್ಕದ್ದು.
(ಬಿ) ತೀರ್ಮಾನ ಅಥವಾ ಅವಾರ್ಡು, ಹಣ ಸಂದಾಯ ಅಥವಾ ಧಾನ್ಯದ ನೀಡಿಕೆಯನ್ನು ಒಳಗೊಂಡಿದ್ದಲ್ಲಿ ಮತ್ತು ಅಂಥ ಸಂದಾಯವನ್ನು ಒಂದು ವಾರದೊಳಗೆ ಅಥವಾ ರಿಜಿಸ್ಟ್ರಾರನು ನೀಡಬಹುದಾದ ಹೆಚ್ಚಿನ ಅವಧಿಯೊಳಗೆ ಮಾಡದಿದ್ದಲ್ಲಿ, ಡಿಕ್ರಿದಾರನ ಅರ್ಜಿಯ ಮೇಲೆ ರಿಜಿಸ್ಟ್ರಾರನು ಅಧಿನಿಯಮದ 43ನೆಯ ಪ್ರಕರಣದಲ್ಲಿ ತಿಳಿಸಿದಂತೆ ಒಂದು ಪ್ರಮಾಣ ಪತ್ರವನ್ನು ಕೊಡತಕ್ಕದ್ದು. ಈ ಪ್ರಮಾಣಪತ್ರವು ಕೆಳಕಂಡ ನಮೂನೆಯಲ್ಲಿರತಕ್ಕದ್ದು. ಸಹಕಾರಿಗಳ ರಿಜಿಸ್ಟ್ರಾರರ ಕಛೇರಿ ................ ವಿವಾದದ ಸಂಖ್ಯೆ ................................ ದಿನಾಂಕ ........................................... ಇದರೊಡನೆ ಕಳುಹಿಸಿರುವ ಅಡಕಗಳಲ್ಲಿ ಹೇಳಿರುವಂತೆ ಮೇಲೆ ಹೇಳಿದ ವಿವಾದದಲ್ಲಿ ಒಂದು ಡಿಕ್ರಿ / ತೀರ್ಪು / ಅವಾರ್ಡನ್ನು ನೀಡಲಾಗಿದೆ ಎಂದು ಮತ್ತು ಸದರಿ ಡಿಕ್ರಿಯನ್ನು / ತೀರ್ಪನ್ನು / ಅವಾರ್ಡನ್ನು ಪಾಲಿಸಲಾಗಲಿಲ್ಲವೆಂದು (ಅಥವಾ ಭಾಗಶಃ ಪಾಲಿಸಲಾಗಿದೆಯೆಂದು) ಪ್ರಮಾಣೀಕರಿಸಲಾಗಿದೆ. ರಿಜಿಸ್ಟ್ರಾರನ ಮೊಹರು ರಿಜಿಸ್ಟ್ರಾರನ ಸಹಿ
(7) ಪಕ್ಷಕಾರರ ಕೋರಿಗೆ ಮೇರೆಗೆ ಸಮನ್ ಮಾಡಲಾದ ಸಾಕ್ಷಿದಾರರಿಗೆ ಸಂದಾಯ ಮಾಡಬೇಕಾದ ಭತ್ಯೆಯ ದರವು, ಈ ಕೆಳಗಿನಂತೆ ಇರತಕ್ಕದ್ದು. ಯಾವ ಪಕ್ಷಕಾರನ ಕೋರಿಕೆಯ ಮೇರೆಗೆ ಸಾಕ್ಷಿದಾರರನ್ನು ಸಮನ್ ಮಾಡಲಾಗಿರುವುದೋ ಆ ಪಕ್ಷಕಾರನು ಸದರಿ ಭತ್ಯೆಯನ್ನು ಸಂದಾಯ ಮಾಡತಕ್ಕದ್ದು. ಸಾಕ್ಷಿದಾರರನ್ನು ಎರಡು ವರ್ಗಗಳಾಗಿ ವಿಂಗಡಿಸತಕ್ಕದ್ದು. ವರ್ಗ - I ರೂ. 3,500 ಮತ್ತು ಅದಕ್ಕಿಂತ ಹೆಚ್ಚಿನ ಮಾಸಿಕ ವರಮಾನವಿರುವವರು. ವರ್ಗ - II ರೂ. 3,500ಕ್ಕಿಂತ ಕಡಿಮೆ ಮಾಸಿಕ ವರಮಾನವಿರುವವರು. ಭತ್ಯೆಯ ದರ ಸೂಚನೆ :-
-
ರೈಲು ಪ್ರಯಾಣ ಮಾಡಿದಲ್ಲಿ ಎರಡು ವರ್ಗದವರಿಗೂ ಒಂದು 2ನೇ ತರಗತಿಯ ಸ್ಲೀಪರ್ ಪ್ರಯಾಣ ದರ ಕೊಡತಕ್ಕದ್ದು. ಆದರೆ ವರ್ಗ 1ರ ಸಾಕ್ಷಿದಾರರಿಗೆ ಅವರ ಸ್ಥಾನಮಾನಕ್ಕೆ ಅನುಸಾರವಾಗಿ ಮೊದಲನೇ ದರ್ಜೆ ರೈಲ್ವೆ ಪ್ರಯಾಣದ ಒಂದು ದರವನ್ನು ಪಾವತಿಸಲು ಸಾಕ್ಷ್ಯ ನೀಡಲು ಕರೆ ಕಳುಹಿಸಿರುವ ಪ್ರಾಧಿಕಾರಿಯ ಒಪ್ಪಿಗೆ ನೀಡಬಹುದು.
-
ವಿಚಾರಣೆ ನಡೆಯುವ ಸ್ಥಳದಲ್ಲೇ ಸಾಕ್ಷಿದಾರನು ವಾಸವಾಗಿರುವಲ್ಲಿ ಸಾಕ್ಷಿದಾರನು ವಾಸಸ್ಥಳದಿಂದ ವಿಚಾರಣೆ ಸ್ಥಳಕ್ಕೆ ಹೋಗಿ ಬರಲು ಮೇಲ್ಕಾಣಿಸಿದ ದರದಂತೆ ಭತ್ಯೆಯನ್ನು ನೀಡಬಹುದು.
-
ಅನಾರೋಗ್ಯ ಅಥವಾ ವೃದ್ಧಾಪ್ಯ ಅಥವಾ ಮತ್ತಿತರ ಕಾರಣಗಳಿಂದಾಗಿ ಸಾಕ್ಷಿದಾರನು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದಿದ್ದಲ್ಲಿ, ಸಾಕ್ಷ್ಯ ನೀಡಲು ಕರೆ ಕಳುಹಿಸುವ ಪ್ರಾಧಿಕಾರಿಯು, ಪ್ರಯಾಣ ಭತ್ಯೆಯನ್ನು ಕೊಡಬೇಕಾಗಿರುವ ಪಕ್ಷಕಾರನ ಒಪ್ಪಿಗೆ ಪಡೆದು ಮೇಲಿನ 3ನೇ ಅಂಕಣದಲ್ಲಿ ತೋರಿಸಿದ ದರದಂತೆ ರಸ್ತೆ ಮೈಲೇಜನ್ನು ಅನುಮೋದಿಸಲು ಅಧಿಕಾರವಿರತಕ್ಕದ್ದು.
(8) (7)ನೇ ಉಪ ನಿಮಯದ ಮೇರೆಗಿನ ವೆಚ್ಚಗಳನ್ನು ವಿವಾದದ ಖರ್ಚುಗಳಂತೆ ಪರಿಗಣಿಸತಕ್ಕದ್ದು ಮತ್ತು ಅಂಥ ಖರ್ಚುಗಳು ಮತ್ತು ವಿವಾದಕ್ಕೆ ಪ್ರಾಸಂಗಿಕವಾದ ಎಲ್ಲ ಖರ್ಚುಗಳು ಯಾರಿಂದ ಅಥವಾ ಯಾವ ಸ್ವತ್ತಿನಿಂದ ಮತ್ತು ಎಷ್ಟರ ಮಟ್ಟಿಗೆ ಪಾವತಿ ಮಾಡಲ್ಪಡಬೇಕೆಂಬುದನ್ನು ನಿರ್ಧರಿಸಲು ಮತ್ತು ಮೇಲೆ ಹೇಳಿದ ಉದ್ದೇಶಗಳ ಬಗ್ಗೆ ಅವಶ್ಯವಿರುವ ಎಲ್ಲ ನಿರ್ದೇಶನಗಳನ್ನು ನೀಡಲು ವಿವಾದವನ್ನು ತೀರ್ಮಾನಿಸುವ ಪ್ರಾಧಿಕಾರಿಗಳಿಗೆ ಸಂಪೂರ್ಣ ಅಕಾರವಿರತಕ್ಕದ್ದು. ವಿವಾದವನ್ನು ತೀರ್ಮಾನಿಸುವ ಪ್ರಾಧಿಕಾರಿಯು ಯಾವುದೇ ಖರ್ಚುಗಳನ್ನು ಕೊಡಕೂಡದೆಂದು ನಿರ್ದೇಶಿಸಿದಲ್ಲಿ ಸದರಿ ಪ್ರಾಧಿಕಾರಿಯು, ಅದರ ಕಾರಣಗಳನ್ನು ಲಿಖಿತದಲ್ಲಿ ತಿಳಿಸತಕ್ಕದ್ದು. ಖರ್ಚಿನ ಮೇಲೆ ವರ್ಷಕ್ಕೆ ಶೇಕಡಾ ಆರಕ್ಕೆ ಮೀರದ ಯಾವುದೇ ದರದ ಬಡ್ಡಿಯನ್ನು ಸಂದಾಯ ಮಾಡಬೇಕೆಂದು ಅವಾರ್ಡು ನೀಡಬಹುದು ಮತ್ತು ಅಂಥ ಬಡ್ಡಿಯನ್ನು ಖರ್ಚಿನ ಲೆಕ್ಕಕ್ಕೆ ಸೇರಿಸತಕ್ಕದ್ದು ಮತ್ತು ಹಾಗೆ ವಸೂಲ್ಮಾಡತಕ್ಕದ್ದು.