(1) ಯಾವುದೇ ಪ್ರದೇಶದಲ್ಲಿ ಲೇವಾದೇವಿ ವ್ಯವಹಾರ ನಡೆಸಲು ಇಚ್ಫಿಸುವ ಒಬ್ಬ ಲೇವಾದೇವಿದಾರನು, ಸಂಬಂಧಪಟ್ಟ ಸಹಾಯಕ ರಿಜಿಸ್ಟ್ರಾರರಿಗೆ ನಮೂನೆ 2ರಲ್ಲಿ ಒಂದು ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿಯನ್ನು, ಕಚೇರಿಯ ಕೆಲಸದ ವೇಳೆಯಲ್ಲಿ ಅರ್ಜಿದಾರನು ತಾನೇ ಸ್ವತಃ ಅಥವಾ ಈ ಸಂಬಂಧದಲ್ಲಿ ಲಿಖಿತದಲ್ಲಿ ಯುಕ್ತವಾಗಿ ಪ್ರಾಧಿಕೃತನಾದ ಏಜೆಂಟನ ಮೂಲಕ, ಸಹಾಯಕ ರಿಜಿಸ್ಟ್ರಾರನ ಕಚೇರಿಗೆ ತಲುಪಿಸತಕ್ಕದ್ದು ಅಥವಾ ನೋಂದಾಯಿತ ಅಂಚೆ ಮೂಲಕ ಸಹಾಯಕ ರಿಜಿಸ್ಟ್ರಾರನ ವಿಳಾಸಕ್ಕೆ ಕಳುಹಿಸತಕ್ಕದ್ದು.
(2) ಮೊದಲ ಬಾರಿ ಲೈಸೆನ್ಸಿನ ಮಂಜೂರಾತಿಗಾಗಿ ಒಂದು ಅರ್ಜಿಯನ್ನು ಯಾವುದೇ ದಿನದಂದು ಸಲ್ಲಿಸಬಹುದು ಮತ್ತು 1 [ತರುವಾಯದ ವರ್ಷಕ್ಕಾಗಿ ಹೊಸ ಲೈಸೆನ್ಸಿನ ಮಂಜೂರಾತಿಗಾಗಿ ಒಂದು ಅರ್ಜಿಯನ್ನು 2 [ಪ್ರತಿವರ್ಷದ ಅಕ್ಟೋಬರ್ ತಿಂಗಳ ಕೊನೆಯ ದಿನಕ್ಕೆ ಮುಂಚೆ ಸಲ್ಲಿಸತಕ್ಕದ್ದು:
- ಜಿಎಸ್ಆರ್ 222, ದಿನಾಂಕ: 12/13.9.1998ರ ಮೂಲಕ ‘‘ಲೈಸೆನ್ಸಿನ ನವೀಕರಣ'' ಎಂಬ ಪದಗಳಿಗೆ ಪ್ರತಿಯೋಜಿಸಲಾಗಿದೆ. (ಕರ್ನಾಟಕ ರಾಜ್ಯಪತ್ರ, ಭಾಗ IV 2 ಸಿ (i) (ವಿಶೇಷ ಸಂಚಿಕೆ) ಸಂಖ್ಯೆ 498, ದಿನಾಂಕ 17.9.1985) 2. ಜಿ ಎಸ್ ಆರ್ 76, ದಿನಾಂಕ 10.3.1988ರ ಮೂಲಕ ‘‘ಲೈಸೆನ್ಸಿನ ಅವಧಿಯು ಮುಕ್ತಾಯ ವಾಗುವುದಕ್ಕೆ ಮುಂಚೆ ಎರಡು ತಿಂಗಳೊಳಗೆ ಯಾವುದೇ ದಿನಾಂಕದಂದು'' ಎಂಬ ಪದಗಳಿಗೆ ಪ್ರತಿಯೋಜಿಸಲಾಗಿದೆ. (ಕರ್ನಾಟಕ ರಾಜ್ಯಪತ್ರ, ಭಾಗ IV 2ಸಿ (i) (ವಿಶೇಷ ಸಂಚಿಕೆ) ಸಂಖ್ಯೆ 168, ದಿನಾಂಕ 19.3.1998) 1 [ಪರಂತು, ಮೊದಲ ಬಾರಿ ಒಂದು ಲೈಸೆನ್ಸಿನ ಮಂಜೂರಾತಿಗಾಗಿ ಒಂದು ಅರ್ಜಿಯನ್ನು ವರ್ಷದ ನವೆಂಬರ್ ಮೊದಲ ದಿನದ ಮತ್ತು ಡಿಸೆಂಬರ್ ಮೂವತ್ತೊಂದನೆಯ ದಿನದ ನಡುವೆ ಸಲ್ಲಿಸಿದ್ದರೆ, ತರುವಾಯದ ವರ್ಷದ ಒಂದು ಹೊಸ ಲೈಸೆನ್ಸಿಗಾಗಿನ ಅರ್ಜಿಯನ್ನು ಲೈಸೆನ್ಸಿನ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ಸಲ್ಲಿಸತಕ್ಕದ್ದು .
- ಜಿಎಸ್ಆರ್ 76 ದಿನಾಂಕ 10.3.1988ರ ಮೂಲಕ ಸೇರಿಸಲಾಗಿದೆ. (ಕರ್ನಾಟಕ ರಾಜ್ಯಪತ್ರ ಭಾಗ IV 2ಸಿ (i) (ವಿಶೇಷ ಸಂಚಿಕೆ) ಸಂಖ್ಯೆ 168, ದಿನಾಂಕ 16.3.1998)