7ನೇ ಪ್ರಕರಣದ ಅಡಿಯಲ್ಲಿನ ವಿಚಾರಣೆಗೆ ಸಂಬಂಧಿಸಿದಂತೆ 14ನೇ ಪ್ರಕರಣದ ಅಡಿಯಲ್ಲಿ ಯಾರೇ ವ್ಯಕ್ತಿಯ ಹಾಜರಾತಿಯನ್ನು ಒತ್ತಾಯಿಸಲು ಜಾರಿ ಮಾಡಬೇಕಾದ ಸಮನುಗಳ ನಮೂನೆ 14 ಅಥವಾ ಸಂದರ್ಭಾನುಸಾರ ನಮೂನೆ 15 ರಲ್ಲಿರತಕ್ಕದ್ದು.
ನಮೂನೆ - 1 [3ನೇ ನಿಯಮವನ್ನು ನೋಡಿ] ಲೇವಾದೇವಿದಾರನ ರಿಜಿಸ್ಟರ್ ಸಹಾಯಕ ರಿಜಿಸ್ಟ್ರಾರ್ ರವರ ಕಚೇರಿ . . . . . . ತಾಲ್ಲೂಕು. . . . . . . ಜಿಲ್ಲೆ
| ಕ್ರಮ ಸಂಖ್ಯೆ | *ಲೇವಾದೇವಿ ದಾರನ ಹೆಸರು, ತಂದೆಯ ಅಥವಾ ಗಂಡನ ಹೆಸರು ಮತ್ತು ಲೇವಾದೇವಿದಾರನ ಪೂರ್ಣ ವಿಳಾಸ | ವ್ಯವಹಾರದ ವ್ಯವಸ್ಥಾಪನೆಗೆ ಜವಾಬ್ದಾರನಾದ ವ್ಯಕ್ತಿ ಅಥವಾ ವ್ಯಕ್ತಿಗಳು ಯಾರೇ ಇದ್ದರೆ, ಅವರ ಹೆಸರು, ತಂದೆಯ ಹೆಸರು ಮತ್ತು ಪೂರ್ಣ ವಿಳಾಸ | ಪ್ರಧಾನ ವ್ಯವಹಾರದ ಅಥವಾ ಅದರ ಶಾಖೆಗಳ ಪೂರ್ಣ ವಿವರಗಳು | ಹಿಂದಿನ ಲೈಸೆನ್ಸು ಯಾವುದೇ ಇದ್ದರೆ, ಅದರ ದಿನಾಂಕ ಮತ್ತು ಕ್ರಮಸಂಖ್ಯೆ | ಪ್ರಸ್ತುತ ನೀಡಿದ ದಿನಾಂಕ |
| (1) | (2) | (2)(ಎ) | (3) | (4) | (5) |
| ಅರ್ಜಿಯ ಕ್ರಮ ಸಂಖ್ಯೆ | **ಯಾವುದೇ ಲೈಸೆನ್ಸ್ ರದ್ದಾಗಿದ್ದರೆ ಅದರ ದಿನಾಂಕ ಮತ್ತು ವಿವರಗಳು | ಅಪೀಲು ಪ್ರಾಧಿಕಾರದ ಆದೇಶಗಳು, ಯಾವುವಾದರೂ ಇದ್ದರೆ ಆ ಆದೇಶ | 14 (ii)(ಎ) ಪ್ರಕರಣದ ಅಡಿಯಲ್ಲಿ ರದ್ದಾದ ಅಥವಾ 14(ii) (ಎಚ್) ಪ್ರಕರಣದ ಅಡಿಯಲ್ಲಿ ಅನರ್ಹಗೊಂಡ ಲೈಸೆನ್ಸಿನ ವಿವರಗಳು | ನೀಡಲಾದ ದ್ವಿಪ್ರತಿ ಲೈಸೆನ್ಸುಗಳ ಸಂಖ್ಯೆ ಮತ್ತು ದಿನಾಂಕ | ಸಹಾಯಕ ರಿಜಿಸ್ಟ್ರಾರನ ಸಹಿ | ಷರಾ |
| (6) | (7) | (8) | (9) | (10) | (11) | (12) |
ನಮೂನೆ 2
[5ನೇ ನಿಯಮವನ್ನು ನೋಡಿ] ಲೈಸೆನ್ಸ್ ನೀಡಿಕೆಗೆ ಲೇವಾದೇವಿದಾರನ ಅರ್ಜಿ . . . . . . . . . . . .ಸಹಾಯಕ ರಿಜಿಸ್ಟ್ರಾರರ ಕಚೇರಿ.
. . . . . . . . . . ಅಂಚೆ . . . . . . . . . . ತಾಲ್ಲೂಕು . . . . .. . . . . . ಜಿಲ್ಲೆ 1. ಅರ್ಜಿದಾರನ ಹೆಸರು, ತಂದೆ ಅಥವಾ ಗಂಡನ ಹೆಸರು, ಅಡ್ಡ ಹೆಸರು, ವಾಸಸ್ಥಳ ಮತ್ತು ಪೂರ್ಣ ವಿಳಾಸ.
ಹಿಂದೂ ಅವಿಭಕ್ತ ಕುಟುಂಬದ ವ್ಯವಸ್ಥಾಪಕನ ಮತ್ತು ವಯಸ್ಕ ದಾಯಾದಿಗಳ ಹೆಸರು, ಅವರ ತಂದೆಯ ಹೆಸರು, ಅಡ್ಡ ಹೆಸರು, ವಾಸಸ್ಥಳ ಮತ್ತು ಪೂರ್ಣ ವಿಳಾಸ.
ಬ್ಯಾಂಕ್ ಅಥವಾ ಕಂಪನಿಯ ಆಡಳಿತವನ್ನು ನಿರ್ವಹಿಸುವ ನಿರ್ದೇಶಕ, ವ್ಯವಸ್ಥಾಪಕ ಅಥವಾ ಪ್ರಧಾನ ಅಧಿಕಾರಿಯ ಹೆಸರು ಹಾಗೂ ಅವರ ತಂದೆ ಅಥವಾ ಗಂಡನ ಹೆಸರು, ಅಡ್ಡ ಹೆಸರು, ವಾಸಸ್ಥಳ ಮತ್ತು ಪೂರ್ಣ ವಿಳಾಸ.
ನಿಗಮಿತವಲ್ಲದ ನಿಕಾಯದ ಎಲ್ಲ ವ್ಯಕ್ತಿಗಳ ಹೆಸರು ಹಾಗೂ ಅವರ ತಂದೆ ಅಥವಾ ಗಂಡನ ಹೆಸರು, ಅಡ್ಡ ಹೆಸರು, ವಾಸಸ್ಥಳ ಮತ್ತು ಪೂರ್ಣ ವಿಳಾಸ. 2. ಅರ್ಜಿದಾರನು ನಡೆಸುತ್ತಿರುವ ಅಥವಾ ನಡೆಸಲು ಉದ್ದೇಶಿಸಿರುವ ಲೇವಾದೇವಿ ವ್ಯವಹಾರದ ಹೆಸರು. 3. ಅರ್ಜಿಯ ದಿನಾಂಕದಂದು ಅರ್ಜಿದಾರನು ತನ್ನ ಲೇವಾದೇವಿ ವ್ಯವಹಾರವನ್ನು ನಡೆಸುತ್ತಿರುವ ಪ್ರದೇಶದ ಹೆಸರು. 4. ಅರ್ಜಿದಾರನ ಲೇವಾದೇವಿ ವ್ಯವಹಾರದ ವ್ಯವಸ್ಥಾಪನೆಗೆ ಜವಾಬ್ದಾರರಾದ ಅಥವಾ ಜವಾಬ್ದಾರರಾಗಿರಲು ಉದ್ದೇಶಿಸಿದ ವ್ಯಕ್ತಿಗಳ ಹೆಸರು ಹಾಗೂ ಅವರ ತಂದೆಯ ಅಥವಾ ಗಂಡನ ಹೆಸರು, ಅಡ್ಡ ಹೆಸರು, ವಾಸಸ್ಥಳ ಮತ್ತು ಪೂರ್ಣ ವಿಳಾಸ. 5. ಅರ್ಜಿದಾರನ ವ್ಯವಹಾರದ ಸ್ಥಳ ಅಥವಾ ವ್ಯವಹಾರದ ಪ್ರಧಾನ ಸ್ಥಳ ಹಾಗೂ ಅವುಗಳ ಪೂರ್ಣ ವಿವರಗಳು ಮತ್ತು ಪ್ರಭಾರದಲ್ಲಿನ ವ್ಯಕ್ತಿಯ ಹೆಸರು, ತಂದೆ ಅಥವಾ ಗಂಡನ ಹೆಸರು, ಅಡ್ಡ ಹೆಸರು ಮತ್ತು ವಿಳಾಸ. 6. ಅರ್ಜಿಗೆ ಸಹಿ ಮಾಡುವ ವ್ಯಕ್ತಿಯು ಅಥವಾ ಯಾರ ಪರವಾಗಿ ಅರ್ಜಿ ಸಲ್ಲಿಸಲಾಗಿದೆಯೋ ಆ ಹಿಂದೂ ಅವಿಭಕ್ತ ಕುಟುಂಬದ ಯಾರೇ ವಯಸ್ಕ ದಾಯಾದಿಯು ಅಥವಾ ಬ್ಯಾಂಕಿನ ಅಥವಾ ಕಂಪನಿಯ ಯಾರೇ ನಿರ್ದೇಶಕ, ವ್ಯವಸ್ಥಾಪಕ ಅಥವಾ ಪ್ರಧಾನ ಅಧಿಕಾರಿಯು ಅಥವಾ ಸಂದರ್ಭಾನುಸಾರ ಆ ನಿಗಮಿತವಲ್ಲದ ನಿಕಾಯದ ಯಾರೇ ಸದಸ್ಯನು, ಅರ್ಜಿಯ ದಿನಾಂಕದ ನಿಕಟ ಪೂರ್ವದ ಮಾರ್ಚ್ 31 ರಂದು ಕೊನೆಗೊಳ್ಳುವ ವರ್ಷದಲ್ಲಿ, ಆ ಪ್ರದೇಶದಲ್ಲಿ ತಾನೇ ಪ್ರತ್ಯೇಕವಾಗಿ ಅಥವಾ ಯಾರೇ ದಾಯಾದಿಯೊಂದಿಗೆ ಅಥವಾ ಯಾರೇ ಇತರ ವ್ಯಕ್ತಿಯೊಂದಿಗೆ ಪಾಲುದಾರಿಕೆಯಲ್ಲಿ ಅಥವಾ ಜಂಟಿಯಾಗಿ ಮತ್ತು ಅದೇ ಹೆಸರಿನಲ್ಲಿ ಅಥವಾ ಯಾವುದೇ ಇತರ ಹೆಸರಿನಲ್ಲಿ ಲೇವಾದೇವಿ ವ್ಯವಹಾರವನ್ನು ನಡೆಸುತ್ತಿದ್ದಾನೆಯೇ? 7. ಅರ್ಜಿದಾರನು ಅಥವಾ ಅರ್ಜಿಯನ್ನು ಯಾರ ಪರವಾಗಿ ಸಲ್ಲಿಸಲಾಗಿದೆಯೋ ಆ ಯಾರೇ ಇತರ ವ್ಯಕ್ತಿಯು ಲೇವಾದೇವಿ ವ್ಯವಹಾರವನ್ನು ಆ ಪ್ರದೇಶದ ಇತರ ಯಾವುದೇ ಸ್ಥಳದಲ್ಲಿ ನಡೆಸುತ್ತಿರುವನೇ? ಅಥವಾ ನಡೆಸಲು ಉದ್ದೇಶಿಸಿರುವನೇ? ಹಾಗಿದ್ದಲ್ಲಿ, ಅಂಥ ಕಚೇರಿಯ ಪ್ರಭಾರದಲ್ಲಿರುವ ವ್ಯಕ್ತಿಯ ಹೆಸರು, ತಂದೆ ಅಥವಾ ಗಂಡನ ಹೆಸರು, ಅಡ್ಡ ಹೆಸರು ಮತ್ತು ವಿಳಾಸದೊಂದಿಗೆ ಇತರೆ ಪೂರ್ಣ ವಿವರಗಳನ್ನು ನೀಡಬೇಕು. ಅಂಥ ಪ್ರತಿಯೊಂದು ಕಚೇರಿ ಇರುವ ಸ್ಥಳದ ಮತ್ತು ಯಾವ ಪ್ರದೇಶದಲ್ಲಿ ಆ ಲೇವಾದೇವಿ ವ್ಯವಹಾರವನ್ನು ನಡೆಸಲಾಗುತ್ತಿದೆಯೋ ಅಥವಾ ನಡೆಸಲು ಉದ್ದೇಶಿಸಲಾಗಿದೆಯೋ ಆ ಪ್ರದೇಶದ ವಿವರಗಳನ್ನು ನೀಡಬೇಕು. 8. ಮಾರ್ಚ್ 31 ರಂದು ಅರ್ಜಿದಾರನ ಒಟ್ಟು ವ್ಯವಹಾರದ ವ್ಯಾಪ್ತಿ ಎಷ್ಟು? 9. ಅರ್ಜಿದಾರನು ಯಾವ ವರ್ಷಕ್ಕಾಗಿ ಅರ್ಜಿ ಸಲ್ಲಿಸಿರುವನೋ ಆ ವರ್ಷದಲ್ಲಿ ಲೇವಾದೇವಿ ವ್ಯವಹಾರದಲ್ಲಿ ತೊಡಗಿಸಲು ಉದ್ದೇಶಿಸಿರುವ ಬಂಡವಾಳದ ಒಟ್ಟು ಮೊಬಲಗು ಎಷ್ಟು? 9ಎ. ಅರ್ಜಿದಾರನ ಲೆಕ್ಕಗಳನ್ನು ಯಾವ ವರ್ಷಕ್ಕಾಗಿ ಇಟ್ಟುಕೊಂಡು ಬರಲಾಗಿದೆ? 10. ಅರ್ಜಿದಾರನು ಈ ಹಿಂದೆ ಲೇವಾದೇವಿ ವ್ಯವಹಾರವನ್ನು ನಡೆಸಿದ್ದನೆ? ನಡೆಸಿದ್ದರೆ ಯಾವಾಗಿನಿಂದ? 11. ಲೈಸೆನ್ಸಿಗಾಗಿ ಈ ಹಿಂದೆ ಯಾವುದೇ ಅರ್ಜಿ ಸಲ್ಲಿಸಲಾಗಿತ್ತೆ? ಸಲ್ಲಿಸಿದ್ದರೆ ಯಾವಾಗ, ಎಲ್ಲಿ ಮತ್ತು ಅದರ ಫಲಿತಾಂಶವೇನು? 12. ಈ ಹಿಂದಿನ ಅರ್ಜಿಗೆ ಲೈಸೆನ್ಸ್ ಮಂಜೂರಾಗಿದ್ದಲ್ಲಿ, ಲೈಸೆನ್ಸಿನ ಪೂರ್ಣ ವಿವರಗಳನ್ನು ನೀಡಿ. 13. ಅರ್ಜಿದಾರನಿಗೆ ಈ ಹಿಂದೆ ಮಂಜೂರು ಮಾಡಲಾಗಿದ್ದ ಯಾವುದೇ ಲೈಸೆನ್ಸನ್ನು ರದ್ದು ಪಡಿಸಲಾಗಿತ್ತೇ ಅಥವಾ ಅಮಾನತ್ತುಗೊಳಿಸಲಾಗಿತ್ತೇ ಅಥವಾ ಅದು ನ್ಯಾಯಾಲಯದ ಯಾವುವೇ ಹಿಂಬರಹಗಳನ್ನು ಒಳಗೊಂಡಿದೆಯೆ? ಅಥವಾ ನ್ಯಾಯಾಲಯವು ಯಾವುವಾದರೂ ಅನರ್ಹತೆಗಳನ್ನು ವಿಧಿಸಿದೆಯೆ? ಹಾಗಿದ್ದರೆ, ಅಧಿಕಾರಿಯ ಮತ್ತು/ಅಥವಾ ನ್ಯಾಯಾಲಯದ ಹೆಸರನ್ನು ಮತ್ತು ಆದೇಶದ ದಿನಾಂಕ ಹಾಗೂ ಅದರ ನಿಬಂಧನೆಗಳನ್ನೊಳಗೊಂಡ ಪೂರ್ಣ ವಿವರಗಳನ್ನು ನೀಡಬೇಕು. 14. ಲೇವಾದೇವಿ ವ್ಯವಹಾರವು ಅರ್ಜಿದಾರನ ಏಕ ಮಾತ್ರ ವ್ಯವಹಾರವಾಗಿದೆಯೆ? ಅಥವಾ ಅವನು ಇತರ ಯಾವುದೇ ವ್ಯವಹಾರ, ವೃತ್ತಿ ಅಥವಾ ಉದ್ಯೋಗದಲ್ಲಿ ತೊಡಗಿರುವನೆ? 15. (i) ಅರ್ಜಿದಾರನು, ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಉದ್ಯೋಗದಲ್ಲಿ ಪೂರ್ಣಕಾಲಿಕ ನೌಕರನಾಗಿದ್ದಾನೆಯೇ? ಹಾಗಿದ್ದರೆ ಅವನು ಹೊಂದಿರುವ ಹುದ್ದೆಯ ಪದನಾಮವನ್ನು ತಿಳಿಸುವುದು; ಮತ್ತು (ii) ಅವನಿಗೆ ಅನ್ವಯವಾಗುವ ಲೇವಾದೇವಿ ವ್ಯವಹಾರ ಸಂಬಂಧಪಟ್ಟ ನಿಯಮಗಳ ಮೂಲಕ ಅವನು ಆ ಲೇವಾದೇವಿ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ನಡೆಸಲು ಹಕ್ಕುಳ್ಳವನಾಗಿರುವನೆ? . . . . . . . . . ಪ್ಯಾರಾಗಳನ್ನು ಹೊರತುಪಡಿಸಿ ಅರ್ಜಿಯಲ್ಲಿ ನಿರೂಪಿಸಲಾದ ಎಲ್ಲ ಸಂಗತಿಗಳು ನನ್ನ ತಿಳುವಳಿಕೆಯ ಮಟ್ಟಿಗೆ ಸತ್ಯವಾದವು ಮತ್ತು ಅವು . . . . . . . ಇವರಿಂದ ಒದಗಿಸಲಾದ ಮಾಹಿತಿಯನ್ನು ಆಧರಿಸಿದ್ದು ನಾನು ನಂಬಿರುವಷ್ಟರ ಮಟ್ಟಿಗೆ ನಿಜವಾದವುಗಳೆಂದು ಪ್ರಮಾಣೀಕರಿಸಲಾಗಿದೆ.
ಅರ್ಜಿದಾರನ ಸಹಿ ಹಾಗೂ ದಿನಾಂಕ.
ನಮೂನೆ 3
[9ನೇ ನಿಯಮವನ್ನು ನೋಡಿ] ಲೇವಾದೇವಿದಾರನ ಲೈಸೆನ್ಸ್ ......................................... ಜಿಲ್ಲೆ ......................................... ತಾಲ್ಲೂಕು ......................................... ಸ್ಥಳ ......................................... ಅಂಚೆ ಲೈಸೆನ್ಸ್ ಸಂಖ್ಯೆ .........................................
1 [ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಉಪಬಂಧಗಳಿಗೆ ಮತ್ತು ಈ ಮುಂದಿನ ಷರತ್ತುಗಳಿಗೊಳಪಟ್ಟು ಲೇವಾದೇವಿ ವ್ಯವಹಾರವನ್ನು ನಡೆಸಲು . . . . . . ಇವರಿಗೆ ಈ ಲೈಸೆನ್ಸನ್ನು ನೀಡಲಾಗಿದೆ, ಎಂದರೆ:-
- ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. (1) ಈ ಲೈಸೆನ್ಸ್ 31 ಜುಲೈ . . . . . . ರ ವರೆಗೆ ಸಿಂಧುವಾಗಿರತಕ್ಕದ್ದು.
(2) * . . . . . ಇಲ್ಲಿ ಲೇವಾದೇವಿದಾರನು ತನ್ನ ಲೇವಾದೇವಿ ವ್ಯವಹಾರವನ್ನು ನಡೆಸಲು ಹಕ್ಕುಳ್ಳವನನ್ನಾಗಿಸತಕ್ಕದ್ದು.
(3) ಲೈಸೆನ್ಸನ್ನು ನೀಡುವ ರಿಜಿಸ್ಟ್ರಾರ್ ಅಥವಾ ರಿಜಿಸ್ಟ್ರಾರ್ ಜನರಲ್ ಅಥವಾ ನ್ಯಾಯಾಲಯವು ಲೈಸೆನ್ಸನ್ನು ಹಿಂದಿರುಗಿಸಬೇಕೆಂದು ಆದೇಶ ಮಾಡಿದಾಗ ಅದನ್ನು ಹಾಗೆ ಹಿಂದಿರುಗಿಸತಕ್ಕದ್ದು.
(ರಿಜಿಸ್ಟಾರನ ಮೊಹರು) ದಿನಾಂಕ ರಿಜಿಸ್ಟಾರ್. ಲು (ರಿಜಿಸ್ಟ್ರಾರನ ಮೊಹರು) ದಿನಾಂಕ ರಿಜಿಸ್ಟ್ರಾರ್.
- ಇಲ್ಲಿ ಪ್ರದೇಶವನ್ನು ನಮೂದಿಸಿ (ಹಿಂಬದಿ) ಹಿಂಬರಹ, ಯಾವುದಾದರೂ ಇದ್ದರೆ, ಹಿಂಬರಹ, ಯಾವುದಾದರೂ ಇದ್ದರೆ, ಸಹಿ ಷರಾ.
ನಮೂನೆ-4 [15ನೇ ನಿಯಮವನ್ನು ನೋಡಿ] ನಗದಿ ಪುಸ್ತಕ
ನಮೂನೆ-4-ಎ [15ನೇ ನಿಯಮವನ್ನು ನೋಡಿ] ನಗದಿ ಪುಸ್ತಕಡಿಆರ್ ಸ್ವೀಕೃತಿಗಳು ಬಟವಾಡೆ ಸಿಆರ್ ದಿನಾಂಕ ವಿವರಗಳು ಲೆಡ್ಜರ್ ಮೊಬಲಗು ಪುಟ ರೂ.ಪೈ ರೂ.ಪೈ ದಿನಾಂಕ ವಿವರಗಳು ಲೆಡ್ಜರ್ ಪುಟ ಮೊಬಲಗು ರೂ.ಪೈ ರೂ.ಪೈ
ಸೂಚನೆ: ಲೆಡ್ಜರ್ ಪುಟ ಸಂಖ್ಯೆಯನ್ನು ಯಾವುದೇ ಅನುಕೂಲಕರ ರೀತಿಯಲ್ಲಿ ನಮೂದಿಸತಕ್ಕದ್ದು. ನಮೂನೆ- 5 [15ನೇ ನಿಯಮವನ್ನು ನೋಡಿ] ಸಾಲಗಾರ ...........................................ದಿನಾಂಕ ಸಾಲಕೊಟ್ಟವನು ಸಾಲಗಾರ ಮೊಬಲಗು ವಿವರಗಳು ಮೊಬಲಗು ವಿವರಗಳು ಪ್ರಾರಂಭ ಶಿಲ್ಕನ್ನು ಮುಂದಕ್ಕೆ ತರಲಾಗಿದೆ ಮುಕ್ತಾಯ ಶಿಲ್ಕನ್ನು ಮುಂದಕ್ಕೆ ತರಲಾಗಿದೆ
ಸಾಲಗಾರನ ಹೆಸರು ಮತ್ತು ವಿಳಾಸ .................................. ಲೆಡ್ಜರ್ ಖಾತೆ .......................
ಲೆಡ್ಜರ್ ಸಂಖ್ಯೆ ........................
| ದಿನಾಂಕ | ಸಾಲ ಪಡೆದ ಅಥವಾ ಖರ್ಚು ಹಾಕಲಾದ ಅಸಲು ಮೊಬಲಗು | ಸಾಲಗಳ ವಿವರಣ ಪತ್ರವನ್ನು ಒದಗಿಸುವ ಸಂಬಂಧದಲ್ಲಿ ಬಾಕಿ ಮೊಬಲಗು | ಮರು ಸಂದಾಯಮಾಡಿದ ಆಥವಾ ಜಮೆ ಮಾಡಿದ ಮೊಬಲಗು | ||
| ಅಸಲು | ಬಡ್ಡಿ | ಸಾಲಗಳ ವಿವರಣ ಪತ್ರಗಳ ಸಂಬಂಧದ ಫೀಜುಗಳು | |||
| (1) | (2) | (3) | (4) | (5) | (6) |
| ಪ್ರತಿಯೊಂದು ವಹಿವಾಟಿಗಾಗಿ ಬರಬೇಕಾದ ಬಾಕಿ | ಬಡ್ಡಿ ಲೆಕ್ಕಾಚಾರದ ವಿವರಗಳು | ||||||
| ಒಟ್ಟು | ಅಸಲು | ಬಡ್ಡಿ | ಸಾಲಗಳ ವಿವರಣ ಪತ್ರಗಳ ಸಂಬಂಧದ ಫೀಜುಗಳು | ಅಸಲಿನ ಬಾಕಿ | ತಿಂಗಳುಗಳು | ವಸೂಲಿ ಮಾಡಲಾದ ಬಡ್ಡಿಯ ಮೊಬಲಗು | ಷರಾ |
| (7) | (8) | (9) | (10) | (11) | (12) | (13) | (14) |
ಸಾಲಗಾರನ ಹೆಸರು:
ಸಾಲಗಾರನ ಪೂರ್ಣ ವಿಳಾಸ:
| ಸಾಲ ಕೊಟ್ಟವನು | ಸಾಲಗಾರ | ||||||
| ಮೊಬಲಗು | ದಿನಾಂಕ | ನಗದಿ ಪುಸ್ತಕದಲ್ಲಿ ಸಂವಾದಿ ನಮೂದಿನ ಪುಟಸಂಖ್ಯೆ | ವಿವರಗಳು | ಮೊಬಲಗು | ದಿನಾಂಕ | ನಗದಿ ಪುಸ್ತಕದಲ್ಲಿ ಸಂವಾದಿ ನಮೂದಿನ ಪುಟ ಸಂಖ್ಯೆ | ಭದ್ರತೆ ಇತ್ಯಾದಿಗಳ ವಿವರಗಳು |
| (1) | (2) | (3) | (4) | (5) | (6) | (7) | (8) |
| ಒಟ್ಟು ಸ್ವೀಕೃತಿ | ಒಟ್ಟು ಸಂದಾಯ | ||||||
ಲೇವಾದೇವಿದಾರನ ಹೆಸರು ಮತ್ತು ವಿಳಾಸ ದಿನಾಂಕ. . . . . . . . . . . . . . .
ಸೂಚನೆ.- ಪ್ರತಿಯೊಂದು ಸಾಲದ ವ್ಯವಹಾರದ ಸಂಬಂಧದಲ್ಲಿ ಪ್ರತ್ಯೇಕ ವಿವರಣ ಪತ್ರವನ್ನು ಒದಗಿಸತಕ್ಕದ್ದು. ವಸ್ತು ರೂಪದ ಸಾಲವಾಗಿದ್ದಲ್ಲಿ ಮುಂಗಡವಾಗಿ ನೀಡಲಾದ ಸರಕಿಗೆ ಪ್ರತಿಯೊಂದು ವ್ಯವಹಾರದ ದಿನಾಂಕದಂದು ಅದಕ್ಕೆ ಇದ್ದ ಮಾರುಕಟ್ಟೆ ಮೌಲ್ಯವನ್ನು ಉಲ್ಲೇಖಿಸಿರಬೇಕು.
ನಮೂನೆ - 7 [16(1)ನೇ ನಿಯಮವನ್ನು ನೋಡಿ] 21ನೇ ಪ್ರಕರಣದ (1)ನೇ ಉಪ - ಪ್ರಕರಣದ ಅಡಿಯಲ್ಲಿ ಲೇವಾದೇವಿದಾರನು ತನ್ನ ಸಾಲಗಾರರಿಗೆ ನೀಡಬೇಕಾದ ಲೆಕ್ಕಪತ್ರಗಳ ವಾರ್ಷಿಕ ವಿವರಣ ಪತ್ರ
| ಸಾಲಗಾರನ ಹೆಸರು | |
| ವೃತ್ತಿ | |
| ವಿಳಾಸ | |
| ಲೆಡ್ಜರ್ ಖಾತೆಯ ಸಂಖ್ಯೆ ಅಥವಾ ಲೆಡ್ಜರ್ ಪುಟ ಸಂಖ್ಯೆ | |
| ಲೇವಾದೇವಿದಾರನಿಗೆ ಬಾಕಿಯಿರುವ ಅಸಲು ಮತ್ತು ಬಡ್ಡಿಯ ಪ್ರತ್ಯೇಕ ಮೊಬಲಗು ಮತ್ತು ಸಾಲಗಳ ವಿವರಣ ಪತ್ರವನ್ನು ಒದಗಿಸಿದ ಸಂಬಂಧದಲ್ಲಿ ಬಾಕಿಯಿರುವ ಫೀಜಿನ ಮೊಬಲಗು | |
| ಸಾಲದ ಸಂಬಂಧದಲ್ಲಿ ವರ್ಷದ ಅವಧಿಯಲ್ಲಿ ಲೇವಾದೇವಿದಾರನು ಈಗಾಗಲೇ ಸ್ವೀಕರಿಸಿದ ಪ್ರತಿಯೊಂದು ಸಂದಾಯದ ಮೊಬಲಗು ಹಾಗೂ ಪ್ರತಿಯೊಂದು ಸಂದಾಯವನ್ನು ಮಾಡಿದ ದಿನಾಂಕ | |
| ಬಡ್ಡಿಯ ಲೆಕ್ಕಕ್ಕೆ ಮೊದಲು ಜಮೆ ಮಾಡಲಾದ ಎಲ್ಲ ಸಂದಾಯಗಳು ಮತ್ತು ಆ ಸಮಯದಲ್ಲಿ ಬಾಕಿ ಇದ್ದ ಬಡ್ಡಿಯ ಶಿಲ್ಕನ್ನು ತೀರಿಸಲು ಸಾಕಾಗುವುದಕ್ಕಿಂತ ಹೆಚ್ಚಿನದಾದ ಯಾವುದೇ ಸಂದಾಯದ ಉಳಿಕೆ ಇದ್ದರೆ, ಸಾಲಗಾರನ ಅಸಲಿನ ಲೆಕ್ಕಕ್ಕೆ ಜಮೆ ಮಾಡತಕ್ಕ ಆ ಉಳಿಕೆ ಹಣ | |
| *ಲೇವಾದೇವಿದಾರನು ಅಸಲಿನ ಲೆಕ್ಕಕ್ಕೆ ಮೊದಲು ಜಮೆ ಮಾಡಿದ ಸಂದಾಯಗಳು; ಮತ್ತು ಕಡಿಮೆಯಾಗುತ್ತ ಹೋಗುವ ಅಸಲಿನ ಶಿಲ್ಕಿನ ಆಧಾರದ ಮೇಲೆ ಲೆಕ್ಕ ಹಾಕಲಾದ ಬಡ್ಡಿಯ ಲೆಕ್ಕದಲ್ಲಿ ಜಮೆ ಮಾಡಿದ ಉಳಿದ ಸಂದಾಯಗಳು; ಮತ್ತು ಬಾಕಿ ಬಡ್ಡಿಯನ್ನು ಸಂಪೂರ್ಣವಾಗಿ ಸಂದಾಯ ಮಾಡಿದಾಗ, ಮತ್ತೆ ಅಸಲು ಲೆಕ್ಕಕ್ಕೆ ಜಮೆ ಮಾಡತಕ್ಕ ಯಾವುದೇ ಸಂದಾಯದ ಉಳಿಕೆ | |
| ಸಾಲಗಳ ವಿವರಣ ಪತ್ರಗಳನ್ನು ಒದಗಿಸಿದ ಬಗ್ಗೆ ಬಾಕಿ ಇರುವ ಫೀಜುಗಳ ಸಂಬಂಧದಲ್ಲಿ ಮಾಡಿದ ಸಂದಾಯಗಳು | |
| ಸಂದಾಯವಾಗದೆ ಉಳಿದಿರುವ ಅಸಲಿನ ಮೊಬಲಗು, ಅದರ ಮೇಲಿನ ಬಡಿ,್ಡ ಮತ್ತು ಸಾಲಗಳ ವಿವರಣಪತ್ರಗಳ ಸಂಬಂಧದಲ್ಲಿ ಫೀಜುಗಳು ಬಾಕಿ ಇರುವ ಕಾರಣದಿಂದಾಗಿ ಸಂದಾಯವಾಗದೆ ಉಳಿದಿರುವ ಮೊಬಲಗು |
ನಮೂನೆ 8 [18ನೇ ನಿಯಮವನ್ನು ನೋಡಿ] ಪಾಸ್ ಬುಕ್ಕು ಲೇವಾದೇವಿದಾರನ ಹೆಸರು :
ಅವನ ವಿಳಾಸ :
1 [ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ ಅಡಿಯಲ್ಲಿ ಲೈಸೆನ್ಸ್ ಪಡೆದ ಲೇವಾದೇವಿದಾರ 1. ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973 ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
ಪಾಸ್ ಬುಕ್ಕಿನ ಒಳಾಂಶಗಳು ಪಾಸ್ ಬುಕ್ಕು ಲೇವಾದೇವಿದಾರನ ಹೆಸರು : ಸಾಲಗಾರನ ಹೆಸರು:
ಅವನ ವಿಳಾಸ : ವಿಳಾಸ :
| ಕ್ರ.ಸಂ. | ದಿನಾಂಕ, ತಿಂಗಳು ಮತ್ತು ವರ್ಷ | ಮುಂಗಡ ನೀಡಿದ ಸಾಲದ ಮೊತ್ತ | ಭದ್ರತೆಯ ಸ್ವರೂಪ ದಸ್ತಾವೇಜುಗಳ ವಿವರಗಳು ಮತ್ತು ವಿಶೇಷ ಷರತ್ತುಗಳು ಯಾವುವಾದರೂ ಇದ್ದರೆ, ಅವು | ಬಡ್ಡಿಯ ದರ | ಅವಧಿ ಮುಕ್ತಾಯ ವಾಗುವ ದಿನಾಂಕ | ಸಾಲಗಾರನು ಮರುಸಂದಾಯ ಮಾಡಿದ ಒಟ್ಟು ಮೊತ್ತ |
| (1) | (2) | (3) | (4) | (5) | (6) | (7) |
| ಸಾಲಗಾರನಿಂದ ಮರುಸಂದಾಯವಾದ ಮೊತ್ತವನ್ನು ಜಮೆ ಮಾಡಿದ ರೀತಿ | ಸಾಲಗಾರನಿಂದ ವಸೂಲಿ ಮಾಡಬೇಕಾದ ಬಾಕಿ | ಲೇವಾದೇವಿದಾರನ ಸಹಿ | ಷರಾ | ||
| ಅಸಲು | ಬಡ್ಡಿ | ಅಸಲು | ಬಡ್ಡಿ | ||
| (8) | (9) | (10) | (11) | (12) | (13) |
ಪಾಸ್ ಬುಕ್ಕಿನ ಒಳಾಂಶಗಳು ಲೇವಾದೇವಿದಾರನ ಹೆಸರು. . . . . . . . . . . . . . . . . . . . . . . . . . . ಅವನ ವಿಳಾಸ . . . . . . . . . . . . . . . . . . . . . . . . . . . . . . . . ಸಾಲಗಾರನ ಹೆಸರು . . . . . . . . . . . . . . . . . . . . . . . . . . . . . . ಅವನ ವಿಳಾಸ . . . . . . . . . . . . . . . . . . . . . . . . . . . . . . . . . ಸಾಲ ನೀಡಿದ ದಿನಾಂಕ . . . . . . . . . . . . . . . . . . . . . . . . . . . . ಸಾಲದ ಮೊಬಲಗು. . . . . . . . . . . . . . . . . . . . . . . . . . . . . . . ವಾರ್ಷಿಕ ಬಡ್ಡಿಯ ದರ . . . . . . . . . . . . . . . . . . . . . . . . . . . . . ಭದ್ರತೆಯ ಸ್ವರೂಪ. . . . . . . . . . . . . . . . . . . . . . . . . . . . . . . ದಸ್ತಾವೇಜಿನ ವಿವರ. . . . . . . . . . . . . . . . . . . . . . . . . . . . . . ಸಾಲ ನೀಡುವಾಗ ವಿಧಿಸಿದ ಆ ಯಾವುದೇ ವಿಶೇಷ ಷರತ್ತುಗಳು. . . . . . . . . . . .
| ಸಾಲ ಕೊಟ್ಟವನು | ಸಾಲಗಾರ | ||||
| ಮೊಬಲಗು | ದಿನಾಂಕ | ವಿವರಗಳು | ಮೊಬಲಗು | ದಿನಾಂಕ | ವಿವರಗಳು |
| ಒಟ್ಟು ಸ್ವೀಕೃತಿ | ಒಟ್ಟು ಸಂದಾಯ | ||||
| ಸಂಕ್ಷಿಪ್ತಿ | ಅಸಲು, ಬಡ್ಡಿ | ||||
- ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973 ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
ಶ್ರೀ . . . . . . . . . ವಿಳಾಸ . . . . . . . . . ಅವರಿಗೆ ನೀಡಲಾದ
ಸಾಲದ ಮೇಲಿನ ಬಡ್ಡಿಯ ಬಾಕಿ ನಾನು ಮಾಡಿಕೊಂಡ ಒಪ್ಪಂದಕ್ಕೆ ಅನುಸಾರವಾಗಿ ಸಾಲದ ಮೊತ್ತದ ಮೇಲೆ ಪ್ರಾಪ್ತವಾದ ಬಡ್ಡಿ / ಬಡ್ಡಿಯ ಬಾಕಿ ಮತ್ತು ಸಾಲಗಾರನಿಗೆ ನೀಡಲಾದ ಮೇಲೆ ಹೇಳಿದ ಸಾಲದ ಮೇರೆಗಿನ ಒಪ್ಪಂದದ ಪ್ರಯೋಜನಗಳು ಹಾಗೂ ಸಾಲಕ್ಕೆ / ಸಾಲದ ಬಡ್ಡಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಭದ್ರತೆಯ ಸಂಬಂಧದಲ್ಲಿ . . . . . . . . ರಿಂದ ಜಾರಿಗೆ ಬರುವಂತೆ ನೀವು ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 ರ ಉಪಬಂಧಗಳಿಗೆ ಒಳಪಡುತ್ತೀರಿ. ಲೇವಾದೇವಿದಾರನ ಸಹಿ ಲೇವಾದೇವಿದಾರನ ಹಿಂದಿನ ಹಸ್ತಾಂತರಣ ಪಡೆದವನು ದಿನಾಂಕ:ಸಾಲ ಸಾಲದ ಬಾಕಿ ಇವುಗಳನ್ನು ಹಸ್ತಾಂತರಣ ಮಾಡಲು ನಿಮ್ಮೊಂದಿಗೆ ಸಾಲದ ಮೇಲಿನ ಬಡ್ಡಿ
ನಮೂನೆ 11 [19 ನೇ ನಿಯಮವನ್ನು ನೋಡಿ] 1 [ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ 30 ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಖಂಡದ ಅಡಿಯಲ್ಲಿ ಹಸ್ತಾಂತರ ಪಡೆದವನಿಗೆ ಒದಗಿಸಬೇಕಾದ ವಿವರಣ ಪತ್ರ ಅಥವಾ ಮಾಹಿತಿ. 1. ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973 ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
ತರುವಾಯ ಹಸ್ತಾಂತರ ಪಡೆದವರು ಯಾರಾದರೂ ಇದ್ದರೆ ಅವರೂ ಸೇರಿದಂತೆ ಲೇವಾದೇವಿದಾರನ ಹೆಸರು ಮತ್ತು ಅವನ/ ಅವರ ವಿಳಾಸ/ ವಿಳಾಸಗಳು. ಸಾಲಗಾರನ ಹೆಸರು:
ವಿಳಾಸ:
- ಸಾಲದ ದಿನಾಂಕ 2. ಸಾಲದ ಮೊತ್ತ 3. ವಾರ್ಷಿಕ ಬಡ್ಡಿಯ ದರ 3ಎ. ಸಾಲ ನೀಡಿದ ಸಂಬಂಧದಲ್ಲಿ ಬಾಕಿಯಿರುವ ಫೀಜುಗಳ ಮೊಬಲಗು 4. ಇಂದಿನವರೆಗೆ ಸಾಲಗಾರನು ಮಾಡಿದ ಒಟ್ಟು ಮರುಸಂದಾಯಗಳು: (ಎ) ಅಸಲು (ಬಿ) ಬಡ್ಡಿ (ಬಿಬಿ) ಸಾಲದ ವಿವರಣ ಪತ್ರಗಳನ್ನು ಒದಗಿಸುವುದಕ್ಕಾಗಿ ಇರುವ ಫೀಜು (ಸಿ) ಒಟ್ಟು 5. ಈ ಮುಂದಿನವುಗಳ ಮೇಲೆ ಬಾಕಿ ಇರುವ ಮೊಬಲಗು: (ಎ) ಅಸಲು (ಬಿ) ಬಡ್ಡಿ (ಬಿಬಿ) ಸಾಲದ ವಿವರಣ ಪತ್ರಗಳನ್ನು ಒದಗಿಸುವುದಕ್ಕಾಗಿನ ಫೀಜು (ಸಿ) ಒಟ್ಟು 6. ಭದ್ರತೆಯ ಸ್ವರೂಪ ಮತ್ತು ಮೌಲ್ಯ 7. ಹಿಂದಿನ ಹಸ್ತಾಂತರಣಗಳು ಯಾವುವಾದರೂ ಇದ್ದರೆ ಅವೂ ಸೇರಿದಂತೆ ದಸ್ತಾವೇಜುಗಳ ವಿವರಗಳು 8. ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಷರತ್ತು 9. ದಸ್ತಾವೇಜುಗಳ ಪ್ರತಿಗಳನ್ನು ಲಗತ್ತಿಸಿದ್ದರೆ ಅವುಗಳ ಪಟ್ಟಿ 10. ಇತರ ಮಾಹಿತಿ, ಯಾವುವಾದರೂ ಇದ್ದರೆ. ಹಸ್ತಾಂತರಕಾರನ/ ಲೇವಾದೇವಿದಾರರ ಸಹಿ. ವಿಳಾಸ : ದಿನಾಂಕ :
ನಮೂನೆ 12 [19ನೇ ನಿಯಮವನ್ನು ನೋಡಿ] .......................... ಸಾಲಗಾರ ಇವರಿಗೆ ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 ರ 30ನೇ ಪ್ರಕರಣದ (1)ನೇ ಉಪಪ್ರಕರಣದ (ಸಿ) ಖಂಡದ ಅಡಿಯಲ್ಲಿ ಈ ಮೂಲಕ ತಮಗೆ ಸೂಚನೆ ನೀಡುವುದೇನೆಂದರೆ. ...................................ರಂದು ನಾನು ನಿಮಗೆ ನೀಡಿದ ಸಾಲದ ಸಂಬಂಧದಲ್ಲಿ.
| ಸಾಲ | |
| ಸಾಲದ ಬಾಕಿ | ಇವುಗಳನ್ನು |
| ಸಾಲದ ಮೇಲಿನ ಬಡ್ಡಿ | |
| ಸಾಲದ ಮೆಲಿನ ಬಡ್ಡಿಯ ಬಾಕಿ |
- ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. ಲೇವಾದೇವಿದಾರನ ಸಹಿ ವಿಳಾಸ:
ಲೇವಾದೇವಿದಾರನ ಹಿಂದಿನ ಹಸ್ತಾಂತರಣ ಪಡೆದವನ ಸಹಿ ಮತ್ತು ವಿಳಾಸ.
ನಮೂನೆ 13 [20 ನೇ ನಿಯಮವನ್ನು ನೋಡಿ] (ಲೆಕ್ಕಗಳನ್ನು ತೆಗೆದುಕೊಳ್ಳುವುದಕ್ಕಾಗಿ 33ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ) . . . . . . . . . . . . . . . .. ನ್ಯಾಯಾಲಯದಲ್ಲಿ ಸಂಕೀರ್ಣ ಪ್ರಕರಣ ಸಂ. . . . . . . . . . . 200 ಈ ಮುಂದೆ ನಮೂದಿಸಲಾದ ಸಾಲಗಾರನು, ಈ ಮುಂದೆ ವಿವರಿಸಲಾದ ಸಾಲದ ಲೆಕ್ಕಪತ್ರಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮತ್ತು ಲೇವಾದೇವಿದಾರನಿಗೆ ಬಾಕಿ ಇರುವ ಮೊತ್ತವನ್ನು ಘೋಷಿಸುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ.
ಸಾಲದ ವಿವರಗಳು 1. ದಸ್ತಾವೇಜುಗಳು, ಯಾವುವಾದರೂ ಇದ್ದರೆ, ಅವುಗಳ ವಿವರಗಳು: 2. ಮೊಬಲಗು: 3. ಲೇವಾದೇವಿದಾರನ ವಿವರಣೆ: (ಎ) ಹೆಸರು
(ಬಿ) ತಂದೆಯ / ಗಂಡನ ಹೆಸರು
(ಸಿ) ವಿಳಾಸ 4. ಸಾಲಗಾರನ ವಿವರಣೆ:
(ಎ) ಹೆಸರು
(ಬಿ) ತಂದೆಯ / ಗಂಡನ ಹೆಸರು
(ಸಿ) ವಿಳಾಸ ದಿನಾಂಕ:
ದಿನಾಂಕ: ಸಹಿ.
ನಮೂನೆ 14 [15ನೇ ನಿಯಮವನ್ನು ನೋಡಿ] ಲೇವಾದೇವಿದಾರನಿಗೆ ಸಮನು ಸಂಖ್ಯೆ:
...............................
...............................
.............................. ಇವರಿಗೆ, ಕಚೇರಿಯ ಹೆಸರು . . . . . . . . . .
1 [ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ ಅಡಿಯಲ್ಲಿ ಒಂದು ಲೈಸೆನ್ಸ್ ನೀಡಿಕೆಗಾಗಿ ಸಲ್ಲಿಸಿರುವ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆ, ಸದರಿ ಅರ್ಜಿಗೆ ಸಂಬಂಧಿಸಿದಂತೆ ನಿಮ್ಮನ್ನು ಪರೀಕ್ಷಿಸುವ ಸಂಬಂಧವಾಗಿ 200...............ರ .................... ತಿಂಗಳ .................... ದಿನದಂದು .......................... ಗಂಟೆಗೆ ಮೇಲ್ಕಂಡ ವಿಳಾಸದಲ್ಲಿ ನನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ಸದರಿ ಅಧಿನಿಯಮದ 14ನೇ ಪ್ರಕರಣದ ಅನುಸಾರವಾಗಿ ಈ ಮೂಲಕ ನಿಮಗೆ ಸಮನು ನೀಡಲಾಗಿದೆ; ಮತ್ತು ನೀವು ಆ ದಿನ ನಿಮ್ಮ ಅರ್ಜಿಯ ಸಮರ್ಥನೆಗಾಗಿ ನೀವು ಉತ್ತರಿಸಲು ಉದ್ದೇಶಿಸಿದ ಎಲ್ಲ ದಸ್ತಾವೇಜುಗಳನ್ನು ಹಾಜರುಪಡಿಸುವಂತೆ ನಿಮಗೆ ನಿರ್ದೇಶನ ನೀಡಲಾಗಿದೆ. 1. ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973 ರ ಮೂಲಕ 1.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
ಮೇಲೆ ನಮೂದಿಸಲಾದ ದಿನದಂದು ನೀವು ಹಾಜರಾಗಲು ತಪ್ಪಿದಲ್ಲಿ, ಸದರಿ ಅಧಿನಿಯಮದ ಅಡಿಯಲ್ಲಿ ಲೈಸೆನ್ಸ್ ನೀಡಿಕೆಗಾಗಿ ಸಲ್ಲಿಸಲಾಗಿರುವ ನಿಮ್ಮ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಗಮನಿಸುವುದು.
200 ............ ರ ............... ತಿಂಗಳ ........................ ದಿನದಂದು ನನ್ನ ಸಹಿ ಮತ್ತು ಮೊಹರಿನೊಂದಿಗೆ ನೀಡಲಾಗಿದೆ.
ಮೊಹರು.
ಅಧಿಕಾರಿಯ ಸಹಿ.
ಮೊಹರು. ಅಧಿಕಾರಿಯ ಸಹಿ.
ನಮೂನೆ 15 [22ನೇ ನಿಯಮವನ್ನು ನೋಡಿ] ಸಾಕ್ಷಿದಾರನಿಗೆ ಸಮನು ಸಂಖ್ಯೆ:
................................ ಕಚೇರಿಯ ಹೆಸರು . . . . . . . . . . . . . . .
................................
................................ ಇವರಿಗೆ, 1 [ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ ಅಡಿಯಲ್ಲಿ ಒಂದು ಲೈಸೆನ್ಸ್ ನೀಡುವಂತೆ ಕೋರಿ ಶ್ರೀ............................ ಅವರು ಸಲ್ಲಿಸಿದ ಅರ್ಜಿಯ ಸಂಬಂಧದಲ್ಲಿ ನಿಮ್ಮನ್ನು ಪರೀಕ್ಷಿಸುವುದು ಅವಶ್ಯಕವಾಗಿರುವುದರಿಂದ, ನೀವು 200 . . . . . . . . ರ. . . . . . . . . ತಿಂಗಳ. . . . . . . . . ದಿನದಂದು . . . . . . . . . ಪೂರ್ವಾಹ್ನ / ಅಪರಾಹ್ನ . . . . . . . . . ಗಂಟೆಗೆ ಮೇಲ್ಕಂಡ ವಿಳಾಸದಲ್ಲಿ ನನ್ನ ಮುಂದೆ ಖುದ್ದಾಗಿ ಹಾಜರಾಗಲು, ಸದರಿ ಅಧಿನಿಯಮದ 14ನೇ ಪ್ರಕರಣದ ಅನುಸಾರವಾಗಿ ನಿಮಗೆ ಸಮನು ಮಾಡಿದೆ ಮತ್ತು ನೀವು ಒದಗಿಸಿದ ಮಾಹಿತಿಗೆ ಸಮರ್ಥನೆಯಾಗಿ ನಿಮ್ಮ ಸ್ವಾಧೀನದಲ್ಲಿರಬಹುದಾದ ಯಾವುವೇ ದಸ್ತಾವೇಜುಗಳನ್ನು ಹಾಜರುಪಡಿಸುವಂತೆ ನಿಮಗೆ ನಿರ್ದೇಶನ ನೀಡಲಾಗಿದೆ.
- ಕರ್ನಾಟಕ ಕಾನೂನುಗಳ ಅಳವಡಿಕೆಗಳ ಆದೇಶ, 1973ರ ಮೂಲಕ 1.11.1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. ನೀವು ಕಾನೂನು ಸಮ್ಮತ ಕಾರಣವಿಲ್ಲದೆ ಈ ಆದೇಶವನ್ನು ಪಾಲಿಸಲು ತಪ್ಪಿದರೆ, ನೀವು ಐದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಗುರಿಯಾಗುತ್ತೀರಿ ಎಂಬುದನ್ನು ಗಮನಿಸುವುದು. 200. . . . . . . . . ರ . . . . . . . . ತಿಂಗಳ. . . . . . . .ದಿನದಂದು ನನ್ನ ಸಹಿ ಮತ್ತು ಮೊಹರಿನೊಂದಿಗೆ ನೀಡಲಾಗಿದೆ.
ಮೊಹರು.
ಅಧಿಕಾರಿಯ ಪದನಾಮ ಮೊಹರು. ಅಧಿಕಾರಿಯ ಪದನಾಮ [ಸಂ. ಎ ಎಫ್ 41 ಸಿಸಿಎಸ್ 62]
1 [ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ನಿಯಮಗಳು, 1985 ಜಿ.ಎಸ್.ಆರ್ 222.- ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ (1962ರ ಕರ್ನಾಟಕ ಅಧಿನಿಯಮ 12) 44 ನೇ ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಕರ್ನಾಟಕ ಲೇವಾದೇವಿದಾರರ ನಿಯಮಗಳು, 1965 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ನಿಯಮಗಳ ಒಂದು ಕರಡನ್ನು, ಅಧಿಸೂಚನೆ ಸಂಖ್ಯೆ ಸಿಎಂ ಡಬ್ಲ್ಯೂ 1 ಸಿಎಂಎಲ್ 85, ದಿನಾಂಕ 31ನೇ ಮೇ 1985ರಲ್ಲಿ, ದಿನಾಂಕ 1ನೇ ಜೂನ್ 1985ರ ವಿಶೇಷ ರಾಜ್ಯಪತ್ರದ ಭಾಗ iv, ಪ್ರಕರಣ 2-ಸಿ (i) ಪುಟ 13 (ಜಿಎಸ್ಆರ್ 137) ರಲ್ಲಿ ಪ್ರಕಟಿಸುವುದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ, ಇದರ ಪ್ರಕಟಣೆಯ ದಿನಾಂಕದಿಂದ 14 ದಿನಗಳ ಅವಧಿಯೊಳಗಾಗಿ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ;
- ಕರ್ನಾಟಕ ರಾಜ್ಯಪತ್ರ ಭಾಗ IV 2ಸಿ (i) ವಿಶೇಷ ಸಂಚಿಕೆ ಸಂಖ್ಯೆ 498, ದಿನಾಂಕ 17.9.85ರಲ್ಲಿ ಪ್ರಕಟಿಸಲಾಗಿದೆ. (ಅಧಿಸೂಚನೆ ಸಂ. ಸಿಎಂಡಬ್ಲ್ಯೂ 1 ಸಿ ಎಂ ಎಲ್ 185, ದಿನಾಂಕ 12/13.9.1985). ಮತ್ತು, 1ನೇ ಜೂನ್ 1985ರಂದು ಸದರಿ ರಾಜ್ಯಪತ್ರವು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದುದರಿಂದ;
ಮತ್ತು ಸದರಿ ಕರಡಿನ ಮೇಲೆ ಯಾವುವೇ ಆಕ್ಷೇಪಣೆಗಳು ಅಥವಾ ಸಲಹೆಗಳು ಬಾರದಿರುವುದರಿಂದ;
ಈಗ, ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ (1962ರ ಕರ್ನಾಟಕ ಅಧಿನಿಯಮ 12) 44ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ, ಈ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ನಿಯಮಗಳು, 1985 ಎಂದು ಕರೆಯತಕ್ಕದ್ದು. (2) ಅವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 5ನೇ ನಿಯಮದ ತಿದ್ದುಪಡಿ.- ಕರ್ನಾಟಕ ಲೇವಾದೇವಿದಾರರ ನಿಯಮಗಳು, 1956ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5ನೇ ನಿಯಮದ (2)ನೇ ಉಪನಿಯಮದಲ್ಲಿ ‘‘ಲೈಸೆನ್ಸಿನ ನವೀಕರಣ'' ಎಂಬ ಪದಗಳಿಗೆ ‘‘ತರುವಾಯದ ವರ್ಷಕ್ಕಾಗಿ ಹೊಸ ಲೈಸೆನ್ಸಿನ ಮಂಜೂರಾತಿ'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
- 10ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 10 ನೇ ನಿಯಮದ (1) ನೇ ಉಪನಿಯಮದಲ್ಲಿ ‘‘10 ರೂಪಾಯಿ ಮತ್ತು 3 ರೂಪಾಯಿ'' ಎಂಬ ಅಂಕಿಗಳು ಮತ್ತು ಪದಗಳಿಗೆ ‘‘ಸಂದಾಯಮಾಡಬೇಕಾದ'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
- 14ಎ, 14ಬಿ, 14ಸಿ, 14ಡಿ ಮತ್ತು 14ಇ ಹೊಸ ನಿಯಮಗಳ ಸೇರ್ಪಡೆ.- ಸದರಿ ನಿಯಮಗಳ 14ನೇ ನಿಯಮದ ತರುವಾಯ, ಈ ಮುಂದಿನ ನಿಯಮಗಳನ್ನು ಸೇರಿಸತಕ್ಕದ್ದು, ಎಂದರೆ:- ‘‘14ಎ. ಭದ್ರತಾ ಮೊಬಲಗಿನ ಸಂದಾಯ.- (1) ಪ್ರತಿಯೊಬ್ಬ ಲೈಸೆನ್ಸ್ದಾರನು, ರಿಜಿಸ್ಟ್ರಾರ್ ಜನರಲ್ಲನು ಅಧಿಸೂಚಿಸಿದ ಲೆಕ್ಕ ಶೀರ್ಷಿಕೆಯಡಿಯಲ್ಲಿ 7ಎ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಭದ್ರತಾ ಮೊಬಲಗನ್ನು ನಗದಾಗಿ ಸರ್ಕಾರದ ಖಜಾನೆಯಲ್ಲಿ ಠೇವಣಿ ಇಡತಕ್ಕದ್ದು.
(2) ಭದ್ರತಾ ಮೊಬಲಗನ್ನು ಠೇವಣಿಯಾಗಿಟ್ಟ ಬಗ್ಗೆ ಖಜಾನೆ ರಸೀದಿಯನ್ನು ಸಂಬಂಧಿಸಿದ ಸಹಾಯಕ ರಿಜಿಸ್ಟ್ರಾರನಿಗೆ ಕಳುಹಿಸತಕ್ಕದ್ದು.
14ಬಿ. 7ಎ ಪ್ರಕರಣದ ಅಡಿಯಲ್ಲಿ ಮೊಬಲಗಿನ ಘೋಷಣೆ.- 7ಎ ಪ್ರಕರಣದ ಅಡಿಯಲ್ಲಿ ಪ್ರತಿಯೊಂದು ಘೋಷಣೆಯ ನಮೂನೆ 3ಎ ಯಲ್ಲಿರತಕ್ಕದ್ದು.
14ಸಿ. 7ಬಿ ಪ್ರಕರಣದ ಅಡಿಯಲ್ಲಿ ಆದೇಶದ ಬಗ್ಗೆ ತಿಳಿಸುವುದು.- 7ಬಿ ಪ್ರಕರಣದ ಅಡಿಯಲ್ಲಿ ರಿಜಿಸ್ಟ್ರಾರನು ಮಾಡಿದ ಪ್ರತಿಯೊಂದು ಅದೇಶವನ್ನು ಲೈಸೆನ್ಸ್ದಾರನಿಗೆ ಖುದ್ದಾಗಿ ಅಥವಾ ಅವನ ಏಜೆಂಟನಿಗೆ ಅಥವಾ ಲೈಸೆನ್ಸ್ದಾರನ ವಾಸದ ಮನೆ ಅಥವಾ ವ್ಯವಹಾರದ ಸ್ಥಳ ಅಥವಾ ಕೊನೆಯದಾಗಿ ಇದ್ದನೆಂದು ತಿಳಿದುಬಂದ ವಾಸಸ್ಥಳದ ಅಥವಾ ವ್ಯವಹಾರ ಸ್ಥಳದ ವಿಳಾಸಕ್ಕೆ ತಲುಪೊಪ್ಪಿಗೆ ಸಹಿತ ನೋಂದಾಯಿತ ಅಂಚೆಯ ಮೂಲಕ ತಿಳಿಸತಕ್ಕದ್ದು.
14ಡಿ. ಮುಟ್ಟುಗೋಲು ಹಾಕಿಕೊಳ್ಳಲಾದ ಮೊಬಲಗಿನಿಂದ ಸಂದಾಯ.- (1) ಒಬ್ಬ ಲೈಸೆನ್ಸುದಾರನ ಕೃತ್ಯಗಳಿಂದ ಬಾಧಿತನಾದ ಒಬ್ಬ ಸಾಲಗಾರನು ಕ್ಲೇಮಿನ ಸ್ವರೂಪ ಮತ್ತು ಅಂಥ ಲೈಸೆನ್ಸುದಾರನಿಂದ ಬರಬೇಕಾದ ಮೊಬಲಗನ್ನು ನಿರ್ದಿಷ್ಟಪಡಿಸಿ ಒಂದು ಅರ್ಜಿಯನ್ನು ರಿಜಿಸ್ಟ್ರಾರರಿಗೆ ಸಲ್ಲಿಸತಕ್ಕದ್ದು.
(2) (1)ನೇ ಉಪನಿಯಮದ ಅಡಿಯಲ್ಲಿ ರಿಜಿಸ್ಟ್ರಾರನು ಅರ್ಜಿಯನ್ನು ಸ್ವೀಕರಿಸಿದ ಮೇಲೆ, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ಮುಟ್ಟುಗೋಲು ಹಾಕಿಕೊಳ್ಳಲಾದ ಮೊಬಲಗಿನಿಂದ ಅರ್ಜಿದಾರನಿಗೆ ಸಂದಾಯ ಮಾಡಬೇಕಾದ ಮೊಬಲಗನ್ನು ನಿರ್ಧರಿಸತಕ್ಕದ್ದು:
ಪರಂತು, ಅರ್ಜಿದಾರರು ಒಬ್ಬರಿಗಿಂತ ಹೆಚ್ಚಾಗಿದ್ದರೆ, ಅರ್ಜಿದಾರರಿಗೆ ಸಂದಾಯವಾಗಬೇಕೆಂದು ನಿರ್ಧರಿಸಿದ ಮೊಬಲಗನ್ನು ಪ್ರಮಾಣಾನುಸಾರವಾಗಿ ಸಂದಾಯ ಮಾಡತಕ್ಕದ್ದು.
14ಇ. ಭದ್ರತಾ ಮೊಬಲಗು ಮರುಪಾವತಿ.- (1) ತನ್ನ ವ್ಯವಹಾರವನ್ನು ಸಮಾಪನಗೊಳಿಸಿದ ಅಥವಾ ತನ್ನ ಲೈಸೆನ್ಸಿನ ಅವಧಿಯು ಮುಕ್ತಾಯವಾದ ತರುವಾಯ ಹೊಸ ಲೈಸೆನ್ಸಿಗಾಗಿ ಅರ್ಜಿ ಹಾಕದಿರುವ ಲೈಸೆನ್ಸುದಾರನು, 7ಎ ಪ್ರಕರಣದ ಅಡಿಯಲ್ಲಿ ಠೇವಣಿ ಇಟ್ಟ ಮೊಬಲಗಿನ ಮರುಪಾವತಿಗಾಗಿ ರಿಜಿಸ್ಟ್ರಾರನಿಗೆ ಅರ್ಜಿ ಸಲ್ಲಿಸಬಹುದು.
(2) ರಿಜಿಸ್ಟ್ರಾರನು, (1)ನೇ ಉಪನಿಯಮದ ಅಡಿಯಲ್ಲಿ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸ್ದಾರನು ತನ್ನ ವ್ಯವಹಾರವನ್ನು ಸಮಾಪನಗೊಳಿಸಿದ್ದಾನೆಂದು ಅಥವಾ ಮುಂಬರುವ ವರ್ಷಕ್ಕಾಗಿ ಹೊಸ ಲೈಸೆನ್ಸ್ಗಾಗಿ ಅರ್ಜಿ ಹಾಕಿಲ್ಲವೆಂದು ಮತ್ತು ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಯಾವುದೇ ಉಪಬಂಧವನ್ನು ಉಲ್ಲಂಘಿಸಿರುವುದರ ಸಂಬಂಧದಲ್ಲಿ ಅವನ ವಿರುದ್ಧ ಯಾವುದೇ ಮೊಕದ್ದಮೆ ಇತ್ಯರ್ಥದಲ್ಲಿಲ್ಲವೆಂದು ಮನದಟ್ಟು ಮಾಡಿಕೊಂಡ ತರುವಾಯ, 7ಎ ಪ್ರಕರಣದ ಅಡಿಯಲ್ಲಿ ಠೇವಣಿಯಾಗಿಟ್ಟ ಮೊಬಲಗನ್ನು ಅಥವಾ 7ಬಿ ಪ್ರಕರಣದ ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ತರುವಾಯ, ಅದರ ಬಾಕಿ ಯಾವುದಾದರೂ ಇದ್ದರೆ ಆ ಬಾಕಿ ಇರುವಷ್ಟು ಮೊಬಲಗನ್ನು ಮರು ಪಾವತಿ ಮಾಡುವಂತೆ ಆದೇಶಿಸಬಹುದು.''
ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ನಿಯಮಗಳು, 1988 ಜಿ.ಎಸ್.ಆರ್ 76.- ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 (1962ರ ಕರ್ನಾಟಕ ಅಧಿನಿಯಮ 12) 44ನೇ ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ ಕರ್ನಾಟಕ ಲೇವಾದೇವಿದಾರರ ನಿಯಮಗಳು, 1965 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ಕರಡು ನಿಯಮಗಳನ್ನು ಅಧಿಸೂಚನೆ ಸಂಖ್ಯೆ ಜಿಎಸ್ಆರ್ 29 (ಸಿಎಂಡಬ್ಯ್ಲೂ 1 ಸಿಎಂಎಲ್ 88, ದಿನಾಂಕ 3ನೇ ಫೆಬ್ರವರಿ 1988) ಕರ್ನಾಟಕ ವಿಶೇಷ ರಾಜ್ಯಪತ್ರ, ದಿನಾಂಕ 6ನೇ ಫೆಬ್ರವರಿ 1988ರ ಭಾಗ iv, ಪ್ರಕರಣ 2ಸಿ (i) ಪುಟ 1- 2 ರಲ್ಲಿ ಪ್ರಕಟಿಸುವುದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಇದು ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ;
ಮತ್ತು ಸದರಿ ರಾಜ್ಯಪತ್ರವು 6ನೇ ಫೆಬ್ರವರಿ 1988ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;
ಮತ್ತು ಸದರಿ ಕರಡಿನ ಸಂಬಂಧದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುವೇ ಆಕ್ಷೇಪಣೆಗಳು ಅಥವಾ ಸಲಹೆಗಳು ಬಾರದಿರುವುದರಿಂದ;
ಈಗ, ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961ರ (1962ರ ಕರ್ನಾಟಕ ಅಧಿನಿಯಮ 12) 44ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ನಿಯಮಗಳು, 1988 ಎಂದು ಕರೆಯತಕ್ಕದ್ದು. (2) ಅವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 5ನೇ ನಿಯಮದ ತಿದ್ದುಪಡಿ.- ಕರ್ನಾಟಕ ಲೇವಾದೇವಿದಾರರ ನಿಯಮಗಳು, 1965ರ 5ನೇ ನಿಯಮದಲ್ಲಿ,- (i) (2)ನೇ ಉಪನಿಯಮದಲ್ಲಿ ‘‘ಲೈಸೆನ್ಸಿನ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ಎರಡು ತಿಂಗಳೂಳಗಿನ ಯಾವುದೇ ದಿನಾಂಕದಂದು'' ಎಂಬ ಪದಗಳಿಗೆ ‘‘ಪ್ರತಿ ವರ್ಷ ಅಕ್ಟೋಬರ್ ತಿಂಗಳ ಕೊನೆಯ ದಿನಕ್ಕೆ ಮುಂಚೆ'' ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) ಹಾಗೆ ತಿದ್ದುಪಡಿಯಾದ (2)ನೇ ಉಪನಿಯಮದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
‘‘ಪರಂತು, ಮೊದಲ ಬಾರಿಗೆ ಲೈಸೆನ್ಸಿನ ಮಂಜೂರಾತಿಗಾಗಿ ಒಂದು ಅರ್ಜಿಯನ್ನು ಆ ವರ್ಷದ ನವೆಂಬರ್ ಮೊದಲ ದಿನದ ಮತ್ತು ಡಿಸೆಂಬರ್ ಮೂವತ್ತೊಂದನೆಯ ದಿನದ ನಡುವೆ ಸಲ್ಲಿಸಿದ್ದರೆ ತರುವಾಯದ ವರ್ಷದ ಒಂದು ಹೊಸ ಲೈಸೆನ್ಸಿಗಾಗಿನ ಅರ್ಜಿಯನ್ನು ಲೈಸೆನ್ಸಿನ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ಸಲ್ಲಿಸತಕ್ಕದ್ದು.''
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ವಿ. ವಿಠ್ಠಲರಾವ್, ವಿಶೇಷ ಕರ್ತವ್ಯಾಧಿಕಾರಿ, ಸಹಕಾರ ಇಲಾಖೆ.
The above translation of the Karnataka Money Lenders Act, 1961 (Act 12 of 1962) and the Karnataka Money Lenders Rules, 1965 shall be authoritative text in the Kannada Language under section 5A of the Karnataka Official Language Act, 1963 (Karnataka Act 26 of 1963).
GOVERNOR OF KARNATAKA
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಜಿ.ಕೆ. ಬೋರೇಗೌಡ
ಪಿ.ಆರ್. 970
ಸರ್ಕಾರದ ಕಾರ್ಯದರ್ಶಿ, ಅವಿ ದ ದ ae
ಪಿ.ಆರ್. 970 ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.