(1) ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ 6ನೇ ಪ್ರಕರಣದ ಅಡಿಯಲ್ಲಿ 1 [ಸಂದಾಯ ಮಾಡಬೇಕಾದ ಲೈಸೆನ್ಸ್ ಫೀಜನ್ನು ನಗದು ರೂಪದಲ್ಲಿ ಅಥವಾ ಸಹಾಯಕ ರಿಜಿಸ್ಟ್ರಾರನ ವಿಳಾಸಕ್ಕೆ ಅಂಚೆಯ ಮನಿ ಅರ್ಡರ್ ಕಳುಹಿಸುವ ಮೂಲಕ ಅಥವಾ ಖಜಾನೆಯಲ್ಲಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಸರ್ಕಾರದ ಲೆಕ್ಕಕ್ಕೆ ಜಮೆ ಮಾಡುವ ಮೂಲಕ ಸಂದಾಯ ಮಾಡತಕ್ಕದ್ದು ಮತ್ತು ಅಂಚೆ ಮನಿಯಾರ್ಡರಿನ ರಸೀದಿ ಅಥವಾ ಚಲನ್ ರಸೀದಿಯನ್ನು ಅರ್ಜಿಯೊಂದಿಗೆ ಸಹಾಯಕ ರಿಜಿಸ್ಟ್ರಾರನಿಗೆ ಕಳುಹಿಸತಕ್ಕದ್ದು.
- ಜಿಎಸ್ಆರ್ 222, ದಿನಾಂಕ 12/13.9.1985ರ ಮೂಲಕ ‘‘10 ರೂಪಾಯಿ ಮತ್ತು 3 ರೂಪಾಯಿ'' ಎಂಬ ಪದಗಳು ಮತ್ತು ಅಂಕಿಗಳಿಗೆ ಬದಲಾಗಿ ಪ್ರತಿಯೋಜಿಸಲಾಗಿದೆ. (2) ರಿಜಿಸ್ಟ್ರಾರನು, ಲೈಸೆನ್ಸಿನ ಪ್ರತಿಗಳನ್ನು ಪ್ರಧಾನ ಸ್ಥಳಕ್ಕೆ ಕಳುಹಿಸುವಾಗ ಮತ್ತು ಅರ್ಜಿಯನ್ನು ರಿಜಿಸ್ಟ್ರಾರ್ ಅಥವಾ ಇತರ ರಿಜಿಸ್ಟ್ರಾರ್ಗಳಿಗೆ ಕಳುಹಿಸುವಾಗ ಅಗತ್ಯಪಡಿಸಿದ ಲೈಸೆನ್ಸ್ ಫೀಜನ್ನು ಸ್ವೀಕರಿಸಿದ್ದರ ಗುರುತಾಗಿ ಒಂದು ಹಿಂಬರಹವನ್ನು ಮಾಡತಕ್ಕದ್ದು.