(1) 22ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿ ವಸೂಲು ಮಾಡಬೇಕಾದ ಫೀಜುಗಳ ದರವು, (ಎ) 20ನೇ ಪ್ರಕರಣದ (2)ನೇ ಉಪಪ್ರಕರಣದ ಮತ್ತು 21ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಸರಬರಾಜು ಮಾಡಿದ ಪ್ರತಿಯೊಂದು ವಿವರಣಪತ್ರ ಅಥವಾ ಅದರ ಒಂದು ಪ್ರತಿಗೆ 15 ಪೈಸೆ ಮತ್ತು (ಬಿ) 20ನೇ ಪ್ರಕರಣದ (2)ನೇ ಉಪ ಪ್ರಕರಣ ಮತ್ತು 21ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ, ರಕ್ಷಾಪುಟಗಳನ್ನು ಹೊರತುಪಡಿಸಿ ಎಂಟು ಪುಟಗಳಿಗೆ ಕಡಿಮೆಯಿಲ್ಲದ ಪುಟಗಳನ್ನು ಒಳಗೊಂಡ ಪ್ರತಿಯೊಂದು ಪಾಸ್ ಬುಕ್ಕಿಗೆ 75 ಪೈಸೆ.
(2) ಅಂಥ ಫೀಜುಗಳ ಲೆಕ್ಕದ ಮೇಲಿನ ಮೊಬಲಗನ್ನು ಸಾಲಗಾರರ ಲೆಕ್ಕದಲ್ಲಿ ಪ್ರತ್ಯೇಕವಾಗಿ ತೋರಿಸತಕ್ಕದ್ದು.