ಸಹಾಯಕ ರಿಜಿಸ್ಟ್ರಾರನು, ಅರ್ಜಿದಾರನ ಪ್ರಾಮಾಣಿಕತೆ ಬಗ್ಗೆ ಮತ್ತು ಲೇವಾದೇವಿ ವ್ಯವಹಾರವನ್ನು ನಡೆಸಿಕೊಂಡು ಹೋಗುವಲ್ಲಿ ಅವನ ಸಾಮಥ್ರ್ಯವನ್ನು ಮನದಟ್ಟು ಮಾಡಿಕೊಳ್ಳುವ ದೃಷ್ಟಿಯಿಂದ, ಅರ್ಜಿದಾರನಿಂದ ಅಂಥ ಮಾಹಿತಿಯನ್ನು ತರಿಸಿಕೊಳ್ಳುವ ಮತ್ತು ತಾನು ಸೂಕ್ತವೆಂದು ಭಾವಿಸಬಹುದಾದಂಥ ವ್ಯಕ್ತಿಗಳನ್ನು ಪರೀಕ್ಷಿಸುವ ಮೂಲಕ 7ನೇ ಪ್ರಕರಣದ ಅಡಿಯಲ್ಲಿ ಸಂಕ್ಷಿಪ್ತ ವಿಚಾರಣೆಯನ್ನು ನಡೆಸತಕ್ಕದ್ದು. ಒದಗಿಸಲಾದ ಮಾಹಿತಿಯಿಂದ ಮತ್ತು ಮಾಡಿದ ಪರೀಕ್ಷೆಯಿಂದ ಸಹಾಯಕ ರಿಜಿಸ್ಟ್ರಾರನಿಗೆ ಹಾಗೆ ಮನದಟ್ಟಾಗದಿದ್ದರೆ, ಅವನು ಅರ್ಜಿದಾರನನ್ನು ಸ್ವತಃ ಪರೀಕ್ಷಿಸಬಹುದು. ಸಹಾಯಕ ರಿಜಿಸ್ಟ್ರಾರನು, ತಾನು ಯುಕ್ತವಾಗಿ ಸಹಿ ಮಾಡಿದ ವಿಚಾರಣೆಯ ಒಂದು ದಾಖಲೆಯನ್ನು ನಿರ್ವಹಿಸತಕ್ಕದ್ದು. ಆ ದಾಖಲೆಯು, ಪಡೆದುಕೊಂಡ ಸಾಕ್ಷ್ಯದ ಒಂದು ಸಂಕ್ಷಿಪ್ತ ಟಿಪ್ಪಣಿಯನ್ನು ಮತ್ತು ವಿಚಾರಣೆಯ ಅವಧಿಯಲ್ಲಿ ಹೊರಬಿದ್ದ ಸಂಗತಿಗಳನ್ನು ಕುರಿತು ನಿರ್ಣಯಗಳ ಒಂದು ಸಾರಾಂಶವನ್ನು ಒಳಗೊಂಡಿರತಕ್ಕದ್ದು.
Loading…