(1) ಒಬ್ಬ ಲೇವಾದೇವಿದಾರನಿಗೆ ನೀಡಲಾದ ಒಂದು ಲೈಸೆನ್ಸು ಕಳೆದುಹೋಗಿದ್ದರೆ ಅಥವಾ ನಾಶವಾಗಿದ್ದರೆ ಅಥವಾ ಹರಿದು ಹೋಗಿದ್ದರೆ ಅಥವಾ ಅದು ಓದಲಾಗದಂಥ ರೀತಿಯಲ್ಲಿ ಅನ್ಯಥಾ ವಿರೂಪಗೊಂಡಿದ್ದರೆ, ಲೇವಾದೇವಿದಾರನು ದ್ವಿಪ್ರತಿ ಲೈಸೆನ್ಸಿನ ನೀಡಿಕೆಗಾಗಿ ಸಂಬಂಧಪಟ್ಟ ಸಹಾಯಕ ರಿಜಿಸ್ಟ್ರಾರನ ಮೂಲಕ ರಿಜಿಸ್ಟ್ರಾರನಿಗೆ ಒಂದು ಅರ್ಜಿಯನ್ನು ಸಲ್ಲಿಸತಕ್ಕದ್ದು.
(2) ಮೂಲ ಲೈಸೆನ್ಸು ಹರಿದುಹೋದ ಅಥವಾ ವಿರೂಪವಾದ ಕಾರಣದ ಮೇಲೆ ಒಂದು ದ್ವಿಪ್ರತಿ ಲೈಸೆನ್ಸ್ ಅಗತ್ಯವಿದ್ದಾಗ, ಲೇವಾದೇವಿದಾರನು (1)ನೇ ಉಪನಿಯಮದ ಅಡಿಯಲ್ಲಿನ ಅರ್ಜಿಯೊಂದಿಗೆ ಮೂಲ ಲೈಸೆನ್ಸನ್ನು ರಿಜಿಸ್ಟ್ರಾರನಿಗೆ ಒಪ್ಪಿಸತಕ್ಕದ್ದು.
(3) (1)ನೇ ಉಪ-ನಿಯಮದ ಅಡಿಯಲ್ಲಿನ ಅರ್ಜಿಯ ಜೊತೆಗೆ ಒಂದು ರೂಪಾಯಿ ಫೀಜಿನ ಒಂದು ರಸೀದಿ ಇರತಕ್ಕದ್ದು. ಆ ಫೀಜನ್ನು 10 ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ ಸಂದಾಯ ಮಾಡತಕ್ಕದ್ದು.
(4) ಅಂಥ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ರಿಜಿಸ್ಟ್ರಾರನು ಅಗತ್ಯವೆಂದು ಭಾವಿಸಬಹುದಾದಂಥ ವಿಚಾರಣೆಯನ್ನು ನಡೆಸಿದ ಮೇಲೆ ಲೇವಾದೇವಿದಾರನಿಗೆ ಒಂದು ದ್ವಿಪ್ರತಿ ಲೈಸೆನ್ಸನ್ನು ನೀಡಬಹುದೆಂದು ಮನದಟ್ಟಾದರೆ, ಅವನು ಒಂದು ದ್ವಿಪ್ರತಿ ಲೈಸೆನ್ಸನ್ನು ನೀಡತಕ್ಕದ್ದು ಮತ್ತು ಅಂಥ ದ್ವಿಪ್ರತಿ ಲೈಸೆನ್ಸ್ ನೀಡಿಕೆಯ ಬಗ್ಗೆ ರಿಜಿಸ್ಟರಿನಲ್ಲಿ ಅವನ ಹೆಸರಿನ ಮುಂದೆ ಒಂದು ಟಿಪ್ಪಣಿಯನ್ನು ಮಾಡಬೇಕೆಂದು ಸಹಾಯಕ ರಿಜಿಸ್ಟ್ರಾರನಿಗೆ ನಿರ್ದೇಶಿಸತಕ್ಕದ್ದು.
(5) ಹಾಗೆ ನೀಡಿದ ದ್ವಿಪ್ರತಿ ಲೈಸೆನ್ಸಿನ ಮೇಲ್ಭಾಗದಲ್ಲಿ ಮೂಲ ಲೈಸೆನ್ಸಿನ ಸಂಖ್ಯೆ ಮತ್ತು ದಿನಾಂಕ ಇರತಕ್ಕದ್ದು ಮತ್ತು ‘‘ದ್ವಿಪ್ರತಿ'' ಎಂಬ ಪದವೂ ಸಹ ಇರತಕ್ಕದ್ದು.
1 [14ಎ. ಭದ್ರತಾ ಮೊಬಲಗಿನ ಸಂದಾಯ.- (1) ಪ್ರತಿಯೊಬ್ಬ ಲೈಸೆನ್ಸ್ದಾರನು, ರಿಜಿಸ್ಟ್ರಾರ್ ಜನರಲ್ಲನು ಅಧಿಸೂಚಿಸಿದ ಲೆಕ್ಕ ಶೀರ್ಷಿಕೆಯಡಿಯಲ್ಲಿ 7ಎ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಭದ್ರತಾ ಮೊಬಲಗನ್ನು ನಗದಾಗಿ ಸರ್ಕಾರದ ಖಜಾನೆಯಲ್ಲಿ ಠೇವಣಿಯಿಡತಕ್ಕದ್ದು.
- 14ಎ ಯಿಂದ 14ಇ ವರೆಗಿನ ನಿಯಮಗಳನ್ನು ಜಿ ಎಸ್ ಆರ್ 222, ದಿನಾಂಕ 12/13.9.1985ರ ಮೂಲಕ ಸೇರಿಸಲಾಗಿದೆ (ಕರ್ನಾಟಕ ರಾಜ್ಯಪತ್ರ ಭಾಗ - IV 2ಸಿ (i) (ವಿಶೇಷ ಸಂಚಿಕೆ) ಸಂ. 498 ದಿನಾಂಕ 17.9.1985). (2) ಭದ್ರತಾ ಮೊಬಲಗನ್ನು ಠೇವಣಿಯಾಗಿಟ್ಟ ಬಗ್ಗೆ ಖಜಾನೆ ರಸೀದಿಯನ್ನು ಸಂಬಂಧಿಸಿದ ಸಹಾಯಕ ರಿಜಿಸ್ಟ್ರಾರನಿಗೆ ಕಳುಹಿಸತಕ್ಕದ್ದು.
14ಬಿ. 7ಎ ಪ್ರಕರಣದ ಅಡಿಯಲ್ಲಿ ಮೊಬಲಗಿನ ಘೋಷಣೆ.- 7ಎ ಪ್ರಕರಣದ ಅಡಿಯಲ್ಲಿನ ಪ್ರತಿಯೊಂದು ಘೋಷಣೆ ನಮೂನೆ 3ಎ ಯಲ್ಲಿರತಕ್ಕದ್ದು.
14ಸಿ. 7ಬಿ ಪ್ರಕರಣದ ಅಡಿಯಲ್ಲಿ ಆದೇಶದ ಬಗ್ಗೆ ತಿಳಿಸುವುದು.- 7ಬಿ ಪ್ರಕರಣದ ಅಡಿಯಲ್ಲಿ ರಿಜಿಸ್ಟ್ರಾರನು ಮಾಡಿದ ಪ್ರತಿಯೊಂದು ಅದೇಶವನ್ನು ಲೈಸೆನ್ಸ್ದಾರನಿಗೆ ಖುದ್ದಾಗಿ ಅಥವಾ ಅವನ ಏಜೆಂಟನಿಗೆ ಅಥವಾ ಲೈಸೆನ್ಸ್ದಾರನ ವಾಸದ ಮನೆ ಅಥವಾ ವ್ಯವಹಾರದ ಸ್ಥಳ ಅಥವಾ ಕೊನೆಯದಾಗಿ ಇದ್ದನೆಂದು ತಿಳಿದು ಬಂದ ವಾಸಸ್ಥಳದ ಅಥವಾ ವ್ಯವಹಾರ ಸ್ಥಳದ ವಿಳಾಸಕ್ಕೆ ತಲುಪೊಪ್ಪಿಗೆ ಸಹಿತ ನೋಂದಾಯಿತ ಅಂಚೆಯ ಮೂಲಕ ತಿಳಿಸತಕ್ಕದ್ದು.
14ಡಿ. ಮುಟ್ಟುಗೋಲು ಹಾಕಿಕೊಳ್ಳಲಾದ ಮೊಬಲಗಿನಿಂದ ಸಂದಾಯ.- (1) ಒಬ್ಬ ಲೈಸೆನ್ಸುದಾರನ ಕೃತ್ಯಗಳಿಂದ ಬಾಧಿತನಾದ ಸಾಲಗಾರನು ಕ್ಲೇಮಿನ ಸ್ವರೂಪ ಮತ್ತು ಅಂಥ ಲೈಸೆನ್ಸುದಾರನಿಂದ ಬರಬೇಕಾದ ಮೊಬಲಗನ್ನು ನಿರ್ದಿಷ್ಟಪಡಿಸಿ ಒಂದು ಅರ್ಜಿಯನ್ನು ರಿಜಿಸ್ಟ್ರಾರನಿಗೆ ಸಲ್ಲಿಸತಕ್ಕದ್ದು.
(2) (1)ನೇ ಉಪನಿಯಮದ ಅಡಿಯಲ್ಲಿ ರಿಜಿಸ್ಟ್ರಾರನು ಒಂದು ಅರ್ಜಿಯನ್ನು ಸ್ವೀಕರಿಸಿದ ಮೇಲೆ, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ಮುಟ್ಟುಗೋಲು ಹಾಕಿಕೊಳ್ಳಲಾದ ಮೊಬಲಗಿನಿಂದ ಅರ್ಜಿದಾರನಿಗೆ ಸಂದಾಯವಾಗಬೇಕಾದ ಮೊಬಲಗನ್ನು ನಿರ್ಧರಿಸತಕ್ಕದ್ದು:
ಪರಂತು, ಒಬ್ಬರಿಗಿಂತ ಹೆಚ್ಚಿಗೆ ಅರ್ಜಿದಾರರಿದ್ದರೆ, ಅರ್ಜಿದಾರರಿಗೆ ಸಂದಾಯ ಮಾಡಬೇಕೆಂದು ನಿರ್ಧರಿಸಿದ ಮೊಬಲಗುಗಳ ದಾಮಾಷಾ ಅನುಸಾರವಾದ ದರಗಳಲ್ಲಿ ಸಂದಾಯ ಮಾಡತಕ್ಕದ್ದು.
14ಇ. ಭದ್ರತಾ ಮೊಬಲಗಿನ ಮರುಪಾವತಿ.- (1) ತನ್ನ ವ್ಯವಹಾರವನ್ನು ಸಮಾಪನಗೊಳಿಸಿದ ಅಥವಾ ತನ್ನ ಲೈಸೆನ್ಸಿನ ಅವಧಿಯು ಮುಕ್ತಾಯವಾದ ತರುವಾಯ ಒಂದು ಹೊಸ ಲೈಸೆನ್ಸಿಗಾಗಿ ಅರ್ಜಿ ಹಾಕದಿರುವ ಒಬ್ಬ ಲೈಸೆನ್ಸುದಾರನು, 7ಎ ಪ್ರಕರಣದ ಅಡಿಯಲ್ಲಿ ಠೇವಣಿ ಇಟ್ಟ ಮೊಬಲಗಿನ ಮರುಪಾವತಿಗಾಗಿ ರಿಜಿಸ್ಟ್ರಾರನಿಗೆ ಅರ್ಜಿ ಸಲ್ಲಿಸಬಹುದು.
(2) ರಿಜಿಸ್ಟ್ರಾರನು, (1)ನೇ ಉಪನಿಯಮದ ಅಡಿಯಲ್ಲಿನ ಒಂದು ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಲೈಸೆನ್ಸ್ದಾರನು ತನ್ನ ವ್ಯವಹಾರವನ್ನು ಸಮಾಪನಗೊಳಿಸಿದ್ದಾನೆಂದು ಅಥವಾ ಮುಂಬರುವ ವರ್ಷಕ್ಕೆ ಒಂದು ಹೊಸ ಲೈಸೆನ್ಸ್ಗಾಗಿ ಅರ್ಜಿ ಹಾಕಿಲ್ಲವೆಂಬ ಬಗ್ಗೆ ಮತ್ತು ಅಧಿನಿಯಮದ ಅಥವಾ ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಯಾವುದೇ ಉಪಬಂಧವನ್ನು ಉಲ್ಲಂಘಿಸಿರುವುದರ ಸಂಬಂಧದಲ್ಲಿ ಅವನ ವಿರುದ್ಧ ಯಾವುದೇ ಮೊಕದ್ದಮೆ ಇತ್ಯರ್ಥದಲ್ಲಿಲ್ಲವೆಂಬ ಬಗ್ಗೆ ಮನದಟ್ಟು ಮಾಡಿಕೊಂಡ ತರುವಾಯ, 7ಎ ಪ್ರಕರಣದ ಅಡಿಯಲ್ಲಿ ಠೇವಣಿಯಾಗಿಟ್ಟ ಮೊಬಲಗನ್ನು ಅಥವಾ 7ಬಿ ಪ್ರಕರಣದ ಅಡಿಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ತರುವಾಯ ಅದರ ಬಾಕಿ ಯಾವುದಾದರೂ ಇದ್ದರೆ ಆ ಬಾಕಿ ಇರುವಷ್ಟು ಮೊಬಲಗನ್ನು ಮರು ಪಾವತಿ ಮಾಡುವಂತೆ ಆದೇಶಿಸಬಹುದು.