ಒಂದು ಲೈಸೆನ್ಸ್ ಚಾಲ್ತಿಯಲ್ಲಿರುವ ಅವಧಿಯಲ್ಲಿ, ಒಬ್ಬ ಹೊಸಪಾಲುಗಾರನನ್ನು ತೆಗೆದುಕೊಂಡಿದ್ದರೆ ಅಥವಾ ಒಬ್ಬ ವ್ಯಕ್ತಿಯನ್ನು ಲೇವಾದೇವಿ ವ್ಯವಹಾರದ ವ್ಯವಸ್ಥಾಪನೆಗೆ ಜವಾಬ್ದಾರನೆಂದು ನೇಮಕ ಮಾಡಿಕೊಂಡಿದ್ದರೆ, ಲೇವಾದೇವಿದಾರನು, ಹಾಗೆ ತೆಗೆದುಕೊಂಡ ಆ ಪಾಲುಗಾರನ ಅಥವಾ ಹಾಗೆ ನೇಮಕ ಮಾಡಿಕೊಂಡ ವ್ಯಕ್ತಿಯ ಹೆಸರನ್ನು ಏಳು ದಿನಗಳ ಒಳಗಾಗಿ ರಿಜಿಸ್ಟ್ರಾರನಿಗೆ ತಿಳಿಸತಕ್ಕದ್ದು ಮತ್ತು 8ನೇ ಪ್ರಕರಣದಲ್ಲಿ ನಮೂದಿಸಲಾಗಿರುವ ಯಾವುವೇ ಕಾರಣಗಳ ಮೇಲೆ ಸ್ವತಃ ಲೈಸೆನ್ಸ್ ಹೊಂದಿರಲು ಅನರ್ಹನಾಗಿರುವ ತಾನೆ ಆ ಹೊಸ ಪಾಲುಗಾರ ಅಥವಾ ಹಾಗೆ ನೇಮಕ ಮಾಡಿಕೊಂಡ ವ್ಯಕ್ತಿ ಅಲ್ಲವೆಂಬುದನ್ನು ರಿಜಿಸ್ಟ್ರಾರನಿಗೆ ಮನದಟ್ಟು ಮಾಡಿಕೊಡತಕ್ಕದ್ದು.
Loading…