(1) ಒಂದು ಲೈಸೆನ್ಸನ್ನು ನೀಡಲು ನಿರಾಕರಿಸುವ ಅಥವಾ ಲೈಸೆನ್ಸನ್ನು ರದ್ದುಗೊಳಿಸುವ ರಿಜಿಸ್ಟ್ರಾರನ ಆದೇಶದ ವಿರುದ್ಧ 8ನೇ ಪ್ರಕರಣದ (3)ನೇ ಉಪಪ್ರಕರಣ ಅಥವಾ 9ನೇ ಪ್ರಕರಣದ (3)ನೇ ಉಪಪ್ರಕರಣದ ಅಡಿಯಲ್ಲಿನ ಒಂದು ಅಪೀಲನ್ನು ಲೈಸೆನ್ಸನ್ನು ನಿರಾಕರಿಸುವ ಅಥವಾ ರದ್ದುಗೊಳಿಸುವ ಆದೇಶವನ್ನು ಲೇವಾದೇವಿದಾರನಿಗೆ ತಿಳಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು. ರಿಜಿಸ್ಟ್ರಾರನ ಆದೇಶದ ವಿರುದ್ಧ 13ನೇ ಪ್ರಕರಣದ (4)ನೇ ಉಪ ಪ್ರಕರಣದ ಅಡಿಯಲ್ಲಿನ ಒಂದು ಅಪೀಲನ್ನು, ಆ ಆದೇಶವನ್ನು ಲೇವಾದೇವಿದಾರನಿಗೆ ಅಥವಾ ಅರ್ಜಿದಾರನಿಗೆ ತಿಳಿಸಿದ ದಿನಾಂಕದಿಂದ 30 ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು. ಅಂಥ ಅಪೀಲಿನ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ಫೀಜಿನ ಮೊತ್ತವು 10 ರೂಗಳಾಗಿರತಕ್ಕದ್ದು ಮತ್ತು ಅದನ್ನು 10ನೇ ನಿಯಮದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವಿಧಾನದಲ್ಲಿ ಸಂದಾಯ ಮಾಡತಕ್ಕದ್ದು.
(2) ರಿಜಿಸ್ಟ್ರಾರ್ ಜನರಲ್ಲನು, ಅಪೀಲುದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಒಂದು ಸೂಕ್ತ ಅವಕಾಶವನ್ನು ಕೊಟ್ಟ ತರುವಾಯ ಅಪೀಲಿನ ಬಗ್ಗೆ ತೀರ್ಮಾನಿಸತಕ್ಕದ್ದು.