(1) ಲೇವಾದೇವಿದಾರನು 21ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ತನ್ನ ಪ್ರತಿಯೊಬ್ಬ ಸಾಲಗಾರನಿಗೆ ಕಳುಹಿಸುವ ವಾರ್ಷಿಕ ಲೆಕ್ಕಪತ್ರಗಳ ವಿವರ ಪತ್ರವು ನಮೂನೆ 7 ರಲ್ಲಿರತಕ್ಕದ್ದು.
(2) ಲೇವಾದೇವಿದಾರರು ಸಾಮಾನ್ಯವಾಗಿ ನಿರ್ವಹಿಸುವಂಥ ಲೆಕ್ಕಪತ್ರಗಳ ವಿವರಪತ್ರವನ್ನು ವರ್ಷದ ಮುಕ್ತಾಯದ ನಂತರದ ಅರವತ್ತು ದಿನಗಳೊಳಗಾಗಿ ಪ್ರತಿಯೊಬ್ಬ ಸಾಲಗಾರನಿಗೂ ಒದಗಿಸತಕ್ಕದ್ದು:
ಪರಂತು, ರಿಜಿಸ್ಟ್ರಾರನು, ಲೇವಾದೇವಿದಾರನ ಅರ್ಜಿಯ ಮೇಲೆ ಸದರಿ ಅರವತ್ತು ದಿನಗಳೊಳಗಾಗಿ ಒಟ್ಟು ವಿವರಣ ಪತ್ರಗಳ ಮೂರನೇ ಎರಡಷ್ಟಕ್ಕೆ ಕಡಿಮೆ ಇಲ್ಲದಷ್ಟು ವಿವರಪತ್ರಗಳನ್ನು ಒದಗಿಸಲಾಗುವುದು ಎಂಬುದನ್ನು ಲೇವಾದೇವಿದಾರನು ರಿಜಿಸ್ಟ್ರಾರನಿಗೆ ಮನದಟ್ಟಾಗುವಂತೆ ರುಜುವಾತುಪಡಿಸಿದರೆ, ಅಂಥ ಅವಧಿಯನ್ನು ಅಂಥ ವರ್ಷವು ಮುಕ್ತಾಯವಾದ ನಂತರ ಒಟ್ಟಿನಲ್ಲಿ ತೊಂಬತ್ತು ದಿನಗಳಿಗಿಂತ ಹೆಚ್ಚಿಲ್ಲದ ಅವಧಿಗೆ ವಿಸ್ತರಿಸಬಹುದು.
(3) 21ನೇ ಪ್ರಕರಣದ (2)ನೇ ಉಪ ಪ್ರಕರಣದ ಅಡಿಯಲ್ಲಿ ಲೆಕ್ಕದ ವಿವರಣ ಪತ್ರವನ್ನು ಒದಗಿಸಿದ್ದಕ್ಕಾಗಿ ಒಬ್ಬ ಸಾಲಗಾರನು ಒಬ್ಬ ಲೇವಾದೇವಿದಾರನಿಗೆ ಸಂದಾಯ ಮಾಡಬೇಕಾದ ಫೀಜು ಐವತ್ತು ಪೈಸೆಯಾಗಿರತಕ್ಕದ್ದು.
(4) 21ನೇ ಪ್ರಕರಣದ (3)ನೇ ಉಪಪ್ರಕರಣದ ಅಡಿಯಲ್ಲಿ ಒಬ್ಬ ಲೇವಾದೇವಿದಾರನು ಒಬ್ಬ ಸಾಲಗಾರನಿಗೆ ದಸ್ತಾವೇಜುಗಳ ಪ್ರತಿಗಳನ್ನು ಒದಗಿಸಿದ್ದಕ್ಕಾಗಿ ಅವನಿಂದ ವಸೂಲು ಮಾಡಬೇಕಾದ ಖರ್ಚುಗಳು ಈ ಮುಂದಿನ ಪ್ರಮಾಣಕ್ಕನುಗುಣವಾಗಿರತಕ್ಕದ್ದು,-
| 100 ಪದಗಳ ಅಥವಾ ಅವುಗಳ ಭಾಗದ ಪ್ರತಿ ತೆಗೆಯುವುದಕ್ಕಾಗಿ | 10 ಪೈಸೆ |
| ಕೋಷ್ಟಕ ರೂಪದಲ್ಲಿರುವ ವಿವರ ಪತ್ರದ 100 ಪದಗಳ ಅಥವಾ ಅವುಗಳ ಭಾಗದ ಪ್ರತಿ ತೆಗೆಯುವುದಕ್ಕಾಗಿ | 15 ಪೈಸೆ |