(1) ಸಂದರ್ಭಾನುಸಾರ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಖ) ಖಂಡ ಅಥವಾ (ಗ) ಖಂಡದ ಮೇರೆಗೆ ನಡೆಸಬೇಕಾದ ಕರ್ನಾಟಕ ವಿಧಾನ ಸಭೆಯಿಂದ ನಾಲ್ಕು ವ್ಯಕ್ತಿಗಳ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಿಂದ ಇಬ್ಬರು ವ್ಯಕ್ತಿಗಳ ಚುನಾವಣೆಯು, ಏಕವರ್ಗಾವಣೀಯ ಮತದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯದ ತತ್ವಕ್ಕನುಸಾರವಾಗಿ ಇರತಕ್ಕದ್ದು.
(2) 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಘ) ಖಂಡದ ಮೇರೆಗೆ ರಾಜ್ಯದಲ್ಲಿನ ಪ್ರತಿಯೊಂದು ವಿಶ್ವವಿದ್ಯಾನಿಲಯದ ಸಿಂಡಿಕೇಟಿನಿಂದ ಚುನಾಯಿಸಬೇಕಾದ ಒಬ್ಬ ವ್ಯಕ್ತಿಯನ್ನು ವಿಶ್ವವಿದ್ಯಾನಿಲಯದ ಸಿಂಡಿಕೇಟಿನ ಸಭೆಯಲ್ಲಿ, ಅಂಥ ಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಸಾದಾ ಬಹುಮತದ ಮೂಲಕ ಚುನಾಯಿಸತಕ್ಕದ್ದು.
(3) 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಙ) ಖಂಡದ ಮೇರೆಗೆ ಕರ್ನಾಟಕ ಗ್ರಂಥಾಲಯ ಸಂಘದ ಕಾರ್ಯನಿರ್ವಾಹಕ ಸಮಿತಿಯು ಚುನಾಯಿಸಬೇಕಾದ ಒಬ್ಬ ವ್ಯಕ್ತಿಯನ್ನು, ಆ ಉದ್ದೇಶಕ್ಕಾಗಿ ಕರೆಯಲಾದ ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಅದರ ಸದಸ್ಯರಿಂದ ಅಂಥ ಸಭೆಯಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರ ಸಾದಾ ಬಹುಮತದ ಮೂಲಕ ಚುನಾಯಿಸತಕ್ಕದ್ದು.
(4) 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಚ) ಖಂಡದ ಮೇರೆಗೆ ಬೆಂಗಳೂರು ನಗರದ ನಗರ ಗ್ರಂಥಾಲಯ ಪ್ರಾಧಿಕಾರವು ಚುನಾಯಿಸಬೇಕಾದ ಒಬ್ಬ ವ್ಯಕ್ತಿಯನ್ನು, ಆ ಉದ್ದೇಶಕ್ಕಾಗಿ ಕರೆಯಲಾದ ಸದರಿ ಪ್ರಾಧಿಕಾರದ ಸಭೆಯಲ್ಲಿ, ಅಂಥ ಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಸಾದಾ ಬಹುಮತದ ಮೂಲಕ ಚುನಾಯಿಸತಕ್ಕದ್ದು.
(5) 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಛ) ಖಂಡದ ಮೇರೆಗೆ ನಗರ ಗ್ರಂಥಾಲಯ ಪ್ರಾಧಿಕಾರವು ಚುನಾಯಿಸಬೇಕಾದ ಒಬ್ಬ ವ್ಯಕ್ತಿಯನ್ನು, ಆ ಉದ್ದೇಶಕ್ಕಾಗಿ ಕರೆಯಲಾದ ಅಂಥ ಪ್ರಾಧಿಕಾರದ ಸಭೆಯಲ್ಲಿ, ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಸಾದಾ ಬಹುಮತದ ಮೂಲಕ ಚುನಾಯಿಸತಕ್ಕದ್ದು.
(6) 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಜ) ಖಂಡದ ಮೇರೆಗೆ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರವು ಚುನಾಯಿಸಬೇಕಾದ ಒಬ್ಬ ವ್ಯಕ್ತಿಯನ್ನು, ಆ ಉದ್ದೇಶಕ್ಕಾಗಿ ಕರೆಯಲಾದ ಅಂಥ ಪ್ರಾಧಿಕಾರದ ಸಭೆಯಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಸಾದಾ ಬಹುಮತದ ಮೂಲಕ ಚುನಾಯಿಸತಕ್ಕದ್ದು.