14ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ರಾಜ್ಯ ಗ್ರಂಥಪಾಲನೆಂದು ನೇಮಕ ಮಾಡಬೇಕಾದ ವ್ಯಕ್ತಿಯು, (1) ಮನ್ನಣೆ ಪಡೆದ ವಿಶ್ವವಿದ್ಯಾನಿಲಯದ ಸ್ನಾತಕ ಪದವಿ (2) ಒಂದು ಶೈಕ್ಷಣಿಕ ವರ್ಷದ ವ್ಯಾಸಂಗ ಕ್ರಮದ ತರುವಾಯ ಪಡೆದುಕೊಂಡ ಮನ್ನಣೆ ಪಡೆದ ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೋಮಾ ಅಥವಾ ಪದವಿ-ಸ್ನಾತಕೋತ್ತರ ಪದವಿಗೆ ಆದ್ಯತೆ ಮತ್ತು (3) ಮನ್ನಣೆ ಪಡೆದ ಗ್ರಂಥಾಲಯದಲ್ಲಿ ಕನಿಷ್ಠ ಪಕ್ಷ ಹತ್ತು ವರ್ಷಗಳಷ್ಟು ಕೆಲಸದ ಅನುಭವ ಮತ್ತು ಐದು ವರ್ಷಗಳ ಜವಾಬ್ದಾರಿಯುತ ಹುದ್ದೆಯಲ್ಲಿ ಗ್ರಂಥಪಾಲನಾಗಿ ಅನುಭವ-ವಯಸ್ಸು 40 ವರ್ಷಗಳಿಗೆ ಕಡಿಮೆ ಇರಬಾರದು-ಈ ಕನಿಷ್ಠ ಅರ್ಹತೆಗಳನ್ನು ಹೊಂದಿರತಕ್ಕದ್ದು.
Loading…