(1) 18ನೇ ಪ್ರಕರಣದ (1)ನೇ ಉಪ ಪ್ರಕರಣದ (ಗ) ಖಂಡದ ಮೇರೆಗೆ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಚುನಾಯಿಸಬೇಕಾದ ಇಬ್ಬರು ವ್ಯಕ್ತಿಗಳನ್ನು, ಜಿಲ್ಲೆಯ ಜಿಲ್ಲಾ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ, ಅಂಥ ಸಭೆಯಲ್ಲಿ ಹಾಜರಿರುವ ಮತ ಚಲಾಯಿಸುವ ಅಂಥ ಪರಿಷತ್ತಿನ ಸದಸ್ಯರ ಸಾದಾ ಬಹುಮತದ ಮೂಲಕ ಚುನಾಯಿಸತಕ್ಕುದು.
(2) 18ನೇ ಪ್ರಕರಣದ (1)ನೇ ಉಪಪ್ರಕರಣದ (ಘ) ಖಂಡದ ಮೇರೆಗೆ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಚುನಾಯಿಸಬೇಕಾದ ವ್ಯಕ್ತಿಯನ್ನು ಜಿಲ್ಲೆಯಲ್ಲಿನ ಪ್ರತಿಯೊಂದು ಮುನ್ಸಿಪಲ್ ಕೌನ್ಸಿಲ್ ಅಥವಾ ಇತರ ಪೌರ ನಿಕಾಯವು, ಸಂದರ್ಭಾನುಸಾರ, ಅಂಥ ಪ್ರತಿಯೊಂದು ಕೌನ್ಸಿಲ್ ಅಥವಾ ನಿಕಾಯದ ಸಭೆಯಲ್ಲಿ, ಅಂಥ ಸಭೆಯಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಅಂಥ ಕೌನ್ಸಿಲ್ ಅಥವಾ ನಿಕಾಯದ ಸದಸ್ಯರ ಸಾದಾ ಬಹುಮತದ ಮೂಲಕ ಚುನಾಯಿಸತಕ್ಕದ್ದು.
(3) 18ನೇ ಪ್ರಕರಣದ (1)ನೇ ಉಪ ಪ್ರಕರಣದ (ಖ) ಖಂಡದ ಮೇರೆಗೆ ಕರ್ನಾಟಕ ಗ್ರಂಥಾಲಯ ಸಂಘದ ಜಿಲ್ಲಾ ಶಾಖೆಯ ಪರಿಷತ್ತು ನಾಮನಿರ್ದೇಶನ ಮಾಡಬೇಕಾದ ಒಬ್ಬ ವ್ಯಕ್ತಿಯನ್ನು ಆ ಉದ್ದೇಶಕ್ಕಾಗಿ ಕರೆಯಲಾದ ಅಂಥ ಶಾಖಾ ಸಂಘದ ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಅಂಥ ಶಾಖಾ ಸಂಘದ ಸದಸ್ಯರಿಂದ ಅಂಥ ಸಭೆಯಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರ ಸಾದಾ ಬಹುಮತದ ಮೂಲಕ ಆಯ್ಕೆ ಮಾಡತಕ್ಕದ್ದು.