(1) ನಗರ ಗ್ರಂಥಾಲಯ ಪ್ರಾಧಿಕಾರವು, ಅದರ ಅಧಿಕಾರ ವ್ಯಾಪ್ತಿಯಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವುದಕ್ಕಾಗಿ ಮತ್ತು ಗ್ರಂಥಾಲಯ ಸೇವೆಯನ್ನು ವಿಸ್ತರಿಸುವುದಕ್ಕಾಗಿ 27ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ಅದು ತಯಾರಿಸಬೇಕಾದ ನಗರ ಗ್ರಂಥಾಲಯ ಅಭಿವೃದ್ಧಿ ಯೋಜನೆಯು, ಅನುಬಂಧ-1ರಲ್ಲಿ ಒಳಗೊಂಡ ನಮೂನೆಯಲ್ಲಿರುವಂತೆ ಇರತಕ್ಕುದು ಮತ್ತು ಅದನ್ನು ಈ ಕೆಳಕಂಡ ರೀತಿಯಲ್ಲಿ ತಯಾರಿಸತಕ್ಕದ್ದು, ಎಂದರೆ:-
(ಕ) ನಗರದ ಸ್ಥಳೀಯ ನಿಕಾಯವು ಇಟ್ಟುಕೊಂಡು ಬರುವ ಸಾರ್ವಜನಿಕ ಗ್ರಂಥಾಲಯಗಳು;
(ಖ) ಇತರ ಸಹಕಾರಿ ಏಜೆನ್ಸಿಗಳು ಇಟ್ಟುಕೊಂಡು ಬರುವ ಸಾರ್ವಜನಿಕರಿಗೆ ಮುಕ್ತವಾಗಿರುವ ಇತರ ಗ್ರಂಥಾಲಯಗಳು;
(ಗ) ನಗರದ ಸ್ಥಳೀಯ ನಿಕಾಯವು ಇಟ್ಟುಕೊಂಡು ಬರುವ ಶಾಲಾ ಗ್ರಂಥಾಲಯಗಳು ;
(ಘ) ಇತರ ನಿಗಮಿತ ಏಜೆನ್ಸಿಗಳು ಇಟ್ಟುಕೊಂಡು ಬರುವ ಶಾಲಾ ಗ್ರಂಥಾಲಯಗಳು; ಮತ್ತು
(ಙ) ಆಸ್ಪತ್ರೆ ಗ್ರಂಥಾಲಯಗಳು.
(2) (1)ನೇ ಉಪ ಪ್ರಕರಣದ ಮೇರೆಗೆ ತಯಾರಿಸಬೇಕಾದ ನಗರ ಗ್ರಂಥಾಲಯ ಅಭಿವೃದ್ಧಿ ಯೋಜನೆಯು, ಅನುಬಂಧ-1ರಲ್ಲಿರುವಂಥ ವಿವರಗಳನ್ನು ಒಳಗೊಂಡಿರತಕ್ಕದ್ದು.