Chapter ಅಧ್ಯಾಯ VII (ಲೆಕ್ಕ ಪತ್ರಗಳು, ಲೆಕ್ಕ ಪರಿಶೋಧನೆ ಮತ್ತು ವಾರ್ಷಿಕ ವರದಿ)
Section 21ಲೆಕ್ಕ ಪತ್ರಗಳನ್ನು ಇಟ್ಟುಕೊಂಡು ಬರುವುದು
ರಾಜ್ಯ ಗ್ರಂಥಾಲಯ ಪ್ರಾಧಿಕಾರ ಮತ್ತು ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಗಳು, ಕಾಲಕಾಲಕ್ಕೆ ರಾಜ್ಯ ಸರ್ಕಾರದ ರಾಜ್ಯ ಲೆಕ್ಕಪತ್ರಗಳ ಇಲಾಖೆಯ ನಿಯಂತ್ರಕನು ಹೊರಡಿಸಿದಂಥ ಸೂಚನೆಗಳಿಗನುಸಾರವಾಗಿ ಆದಾಯ ಮತ್ತು ವೆಚ್ಚದ ಮತ್ತು ಜಮೆಗಳು ಮತ್ತು ವೆಚ್ಚಗಳ ಲೆಕ್ಕವನ್ನು ಇಟ್ಟುಕೊಂಡು ಬರತಕ್ಕದ್ದು.