42ನೇ ಪ್ರಕರಣದ ಮೇರೆಗೆ ರಚಿಸಿದ ಪ್ರತಿಯೊಂದು ಉಪವಿಧಿಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಜೊತೆಗೆ,-
(i) ಸಂದರ್ಭಾನುಸಾರ ರಾಜ್ಯದಾದ್ಯಂತ, ನಗರದಲ್ಲಿ ಅಥವಾ ಜಿಲ್ಲೆಯಲ್ಲಿ ಪ್ರಸಾರವಾಗುವ ಕನ್ನಡ ದಿನಪತ್ರಿಕೆಯ ಎರಡು ಸಂಚಿಕೆಗಳಲ್ಲಿ;
(ii) ಸಂದರ್ಭಾನುಸಾರ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಅಥವಾ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಕಛೇರಿಯ ನೋಟೀಸು ಬೋರ್ಡಿನ ಮೇಲೆ ಉಪವಿಧಿಯ ಪ್ರತಿಗಳನ್ನು ಅಂಟಿಸುವುದರ ಮೂಲಕ ಸಂದರ್ಭಾನುಸಾರ ಕರ್ನಾಟಕ ರಾಜ್ಯ ಕೇಂದ್ರ ಗ್ರಂಥಾಲಯ ಮತ್ತು ನಗರ ಅಥವಾ ಜಿಲ್ಲೆಯಲ್ಲಿನ ಸಾರ್ವಜನಿಕ ಗ್ರಂಥಾಲಯಗಳ ನೋಟೀಸು ಬೋರ್ಡಿನ ಮೇಲೆ ಉಪವಿಧಿಗಳನ್ನು ಅಂಟಿಸುವುದರ ಮೂಲಕವೂ ಸಹ ಪ್ರಕಟಿಸತಕ್ಕದ್ದು.