(1) ಯಾವುದೇ ಗ್ರಂಥಾಲಯ ಪ್ರಾಧಿಕಾರದಿಂದ ಅದರ ಮೌಲ್ಯ ಏನೇ ಆಗಿರಬಹುದಾಗಿದ್ದರೂ, ಯಾವುದೇ ಸ್ಥಿರ ಸ್ವತ್ತಿನ ಉಚಿತ ಕೊಡುಗೆ, ನಿಗದಿತ ಕನಿಷ್ಟ ಬೆಲೆಗಾಗಿನ ಯಾವುದೇ ಕೊಡುಗೆ ಮತ್ತು ಐದು ವರ್ಷಗಳನ್ನು ಮೀರುವ ಅವಧಿಗಾಗಿನ ಯಾವುದೇ ಗೇಣಿ ಮತ್ತು ಸ್ಥಿರ ಸ್ವತ್ತಿನ ಯಾವುದೇ ಮಾರಾಟ ಅಥವಾ ಇತರ ವರ್ಗಾವಣೆಯು ಸರ್ಕಾರದ ಪೂರ್ವ ಮಂಜೂರಾತಿಯನ್ನು ಪಡೆದಿದ್ದ ಹೊರತು ಸಿಂಧುವಾಗತಕ್ಕದ್ದಲ್ಲ.
(2) (ಕ) ಒಂದು ವರ್ಷ ಮೀರುವ ಅವಧಿಗಾಗಿನ ಗೇಣಿ ಅಥವಾ ಯಾವುದೇ ಸ್ಥಿರ ಸ್ವತ್ತಿನ ಮಾರಾಟ ಅಥವಾ ಇತರ ವರ್ಗಾವಣೆ ಅಥವಾ ಖರೀದಿಗಾಗಿನ ಕರಾರಿನ;
(ಖ) ಬಜೆಟ್ ಮಂಜೂರಾತಿಯ ಮೂಲಕ ಒಳಗೊಂಡಿರದ ವೆಚ್ಚವನ್ನು ಒಳಗೊಳ್ಳುವಂಥ ಪ್ರತಿಯೊಂದು ಕರಾರಿನ; ಮತ್ತು
(ಗ) ಯಾವ ಕರಾರಿನ ನೆರವೇರಿಕೆಯನ್ನು ಕರಾರಿನ ದಿನಾಂಕದಂದು ಚಾಲ್ತಿಯಲ್ಲಿರುವ ಸರ್ಕಾರಿ ವರ್ಷದೊಳಗೆ ಪೂರ್ಣಗೊಳಿಸಲಾಗುವುದಿಲ್ಲಮೋ ಆ ಪ್ರತಿಯೊಂದು ಕರಾರಿನ ಸಂದರ್ಭದಲ್ಲಿ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಮೂಲಕ ಗ್ರಂಥಾಲಯ ಪ್ರಾಧಿಕಾರದ ಮಂಜೂರಾತಿಯು ಅಗತ್ಯವಾಗಿರತಕ್ಕದ್ದು.
(3) ಪ್ರಾಧಿಕಾರಕ್ಕೆ ಸೇರಿದ ಚರ ಸ್ವತ್ತಿನ ಖರೀದಿಗಾಗಿನ ಯಾವುದೇ ಸ್ಥಿರ ಸ್ವತ್ತಿನ ಮಾರಾಟಕ್ಕಾಗಿನ ಕರಾರಿನ ಸಂದರ್ಭದಲ್ಲಿ, ಖರೀದಿಯಿಂದ ಉಂಟಾಗಬಹುದಾದಂಥ ವೆಚ್ಚವು ಅಥವಾ ಯಾವುದೇ ಗ್ರಂಥಾಲಯ ಪ್ರಾಧಿಕಾರದ ಲೆಕ್ಕಪತ್ರಗಳಲ್ಲಿ ಅಂದಾಜು ಮಾಡಿದಂತೆ ಮಾರಾಟ ಮಾಡಬೇಕಾಗಿರುವ ಸ್ವತ್ತಿನ ಮೌಲ್ಯವು ಒಂದು ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಸಂದರ್ಭದಲ್ಲಿ ನೂರು ರೂಪಾಯಿಗಳನ್ನು ಮತ್ತು ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸಂದರ್ಭದಲ್ಲಿ ಇನ್ನೂರ ಐವತ್ತು ರೂಪಾಯಿಗಳನ್ನು ಮೀರಿದರೆ, ಸಮುತ ಗ್ರಂಥಾಲಯ ಪ್ರಾಧಿಕಾರದ ಮಂಜೂರಾತಿಯು ಅಗತ್ಯವಿರತಕ್ಕದ್ದು.
(4) ಇನ್ನೂರ ಐವತ್ತು ರೂಪಾಯಿಗಳನ್ನು ಮೀರುವ ವೆಚ್ಚವನ್ನು ಒಳಗೊಳ್ಳುವ ಸಾಮಗ್ರಿಗಳು ಅಥವಾ ಸರಕುಗಳ ಸರಬರಾಜಿಗಾಗಿನ ಅಥವಾ ಯಾವುದೇ ಕೆಲಸವನ್ನು ಮಾಡುವುದಕ್ಕಾಗಿನ ಯಾವುದೇ ಕರಾರನ್ನು ಮಾಡಿಕೊಳ್ಳುವುದಕ್ಕೆ ಮುಂಚೆ ಅಂಥ ಕರಾರನ್ನು ಮಾಡಿಕೊಳ್ಳಲು ಇಚ್ಛಿಸುವ ವ್ಯಕ್ತಿಗಳಿಂದ, ಸಮುಚಿತ ಗ್ರಂಥಾಲಯ ಪ್ರಾಧಿಕಾರವು ಕಾಲ ಕಾಲಕ್ಕೆ ನಿರ್ಧರಿಸಲಾದಂಥ ರೀತಿಯಲ್ಲಿ ಟೆಂಡರುಗಳನ್ನು ಕರೆಯತಕ್ಕದ್ದು ಮತ್ತು ಅಂದಾಜು ಮಾಡಿದ ಮೌಲ್ಯವು ಐದು ನೂರು ರೂಪಾಯಿಗಳನ್ನು ಮೀರಿದಾಗ ಯಾವುದೇ ಅಂಥ ಕರಾರನ್ನು ರಾಜ್ಯ ಸರ್ಕಾರದ ಅಥವಾ ಈ ಬಗ್ಗೆ ರಾಜ್ಯ ಸರ್ಕಾರವು ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಅಧಿಕಾರಿಯ ಪೂರ್ವಾನುಮೋದನೆಯಿಲ್ಲದೆ ಮಾಡಿಕೊಳ್ಳತಕ್ಕದ್ದಲ್ಲ.