(1) ಪ್ರತಿಯೊಂದು ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ಸಮಿತಿ ಮತ್ತು ಹಣಕಾಸು ಸಮಿತಿ ಮತ್ತು ಸದಸ್ಯರಿಂದ ಚುನಾವಣೆಯ ಮೂಲಕ ರಚಿಸಬೇಕಾಗಿರುವಂಥ ಸ್ಥಳೀಯ ಪ್ರಾಧಿಕಾರದ ಅಂತಹ ಇತರ ಸಮಿತಿಗಳಿಗೆ ಸದಸ್ಯರ ಚುನಾವಣೆಯನ್ನು ಅಂತಹ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ನಡೆಸತಕ್ಕದ್ದು.
(2) ಅಂತಹ ಸಮಿತಿಗಳಿಗೆ ಚುನಾವಣೆಯ ದಿನಾಂಕಕ್ಕೆ ಮುಂಚೆ ಪೂರ್ಣ ಐದು ದಿವಸಗಳಿಗೆ ಕಡಿಮೆಯಿಲ್ಲದ ನೋಟೀಸನ್ನು ಪ್ರಾಧಿಕಾರದ ಸದಸ್ಯರಿಗೆ ಕೊಡತಕ್ಕದ್ದು.
(3) ಚುನಾವಣೆಗಾಗಿ ನಿಲ್ಲಲು ಉದ್ದೇಶಿಸಿರುವ ವ್ಯಕ್ತಿಗಳ ಹೆಸರುಗಳನ್ನು ಸ್ವತಃ ಅಭ್ಯರ್ಥಿಯನ್ನು ಹೊರತುಪಡಿಸಿ ಪ್ರಾಧಿಕಾರದ ಸದಸ್ಯನು ಆ ಸಭೆಯಲ್ಲಿ ಕ್ರಮಬದ್ಧವಾಗಿ ಸೂಚಿಸತಕ್ಕುದು ಮತ್ತು ಸೂಚಕನನ್ನು ಹೊರತುಪಡಿಸಿ ಯಾವನೇ ಇತರ ಸದಸ್ಯನು ಅವನನ್ನು ಅನುಮೋದಿಸತಕ್ಕದ್ದು.
(4) ಸೂಚಿಸಲಾಗಿರುವ ಮತ್ತು ಅನುಮೋದಿಸಲಾಗಿರುವ ಅಭ್ಯರ್ಥಿಯು ಅವನ ಅಭ್ಯರ್ಥಿಕೆಯನ್ನು ಆ ಸಭೆಯಲ್ಲಿ ಆ ಬಗ್ಗೆ ಹೇಳಿಕೆಯನ್ನು ಕೊಡುವ ಮೂಲಕ ವಾಪಸ್ಸು ತೆಗೆದುಕೊಳ್ಳಬಹುದು. ಸೂಚಿಸಲಾಗಿರುವ ಮತ್ತು ಅನುಮೋದಿಸಲಾಗಿರುವ ಮತ್ತು ಅವರ ಅಭ್ಯರ್ಥಿಕೆಯನ್ನು ವಾಪಸ್ಸು ಪಡೆಯದೇ ಇರುವ ಎಲ್ಲ ಅಭ್ಯರ್ಥಿಗಳ ಹೆಸರುಗಳನ್ನು ಅಧ್ಯಕ್ಷತೆ ವಹಿಸುವ ವ್ಯಕ್ತಿಯು ಓದಿ ಹೇಳತಕ್ಕದ್ದು.
(5) ಹಾಗೆ ಓದಿ ಹೇಳಲಾದ ಅಭ್ಯರ್ಥಿಗಳ ಹೆಸರುಗಳ ಸಂಖ್ಯೆಯು ಚುನಾಯಿಸಬೇಕಾದ ವ್ಯಕ್ತಿಗಳ ಸಂಖ್ಯೆಗೆ ಸಮನಾಗಿದ್ದರೆ ಅಧ್ಯಕ್ಷತೆ ವಹಿಸುವ ವ್ಯಕ್ತಿಯು ಎಲ್ಲ ಅಂತಹ ಅಭ್ಯರ್ಥಿಗಳನ್ನು ಕ್ರಮಬದ್ಧವಾಗಿ ಚುನಾಯಿಸಲಾಗಿದೆ ಎಂದು ಘೋಷಿಸತಕ್ಕದ್ದು.
(6) ಅಂತಹ ಅಭ್ಯರ್ಥಿಗಳ ಸಂಖ್ಯೆಯು ಚುನಾಯಿತರಾಗಬೇಕಾಗಿರುವ ವ್ಯಕ್ತಿಗಳ ಸಂಖ್ಯೆಗಿಂತ ಕಡಿಮೆಯಿದ್ದರೆ ಅಧ್ಯಕ್ಷತೆ ವಹಿಸುವ ವ್ಯಕ್ತಿಯು, ಎಲ್ಲ ಅಂತಹ ಅಭ್ಯರ್ಥಿಗಳನ್ನು ಕ್ರಮಬದ್ಧವಾಗಿ ಚುನಾಯಿಸಲಾಗಿದೆ ಎಂದು ಘೋಷಿಸತಕ್ಕದ್ದು ಮತ್ತು ಹೊಸ ನಾಮಪತ್ರಗಳನ್ನು ಕರೆಯತಕ್ಕುದು ಅಥವಾ ಉಳಿದಿರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಪ್ರಾಧಿಕಾರದ ಮುಂದಿನ ಸಭೆಗೆ ಚುನಾವಣೆಯನ್ನು ಮುಂದೂಡತಕ್ಕದ್ದು.
(7) ಅಭ್ಯರ್ಥಿಗಳ ಸಂಖ್ಯೆಯು ಚುನಾವಣೆಯಾಗಬೇಕಾಗಿರುವ ವ್ಯಕ್ತಿಗಳ ಸಂಖ್ಯೆಯನ್ನು ಮೀರಿದರೆ, ಸಭೆಯಲ್ಲಿ ಹಾಜರಿರುವ ಸದಸ್ಯರ ಮತಗಳನ್ನು ಮತಪತ್ರದ ಮೂಲಕ ತೆಗೆದುಕೊಳ್ಳತಕ್ಕದ್ದು.
(8) ಮತ ಚಲಾಯಿಸಲು ಇಚ್ಛಿಸುವ ಪ್ರತಿಯೊಬ್ಬ ಸದಸ್ಯನಿಗೆ ಒಂದು ಮತ ನೀಡುವ ಪತ್ರವನ್ನು ಒದಗಿಸತಕ್ಕದ್ದು, ಅದರ ಮೇಲೆ ಎಲ್ಲ ವ್ಯಕ್ತಿಗಳ ಹೆಸರುಗಳನ್ನು ಈ ಕೆಳಕಂಡ ರೀತಿಯಲ್ಲಿ ಅಕ್ಷರಾನುಕ್ರಮವಾಗಿ ಬೆರಳಚ್ಚು ಮಾಡಿರಬೇಕು ಅಥವಾ ಮುದ್ರಿಸಿರತಕ್ಕದ್ದು ಅಥವಾ ಸೈಕ್ಲೋಸ್ಟೈಲ್ ಮಾಡಿರತಕ್ಕದ್ದು, ಎಂದರೆ:-
ಹೆಸರು ಮತ ಹೆಸರು ಮತ 1) 5ರ 1) ------------------- -----------------
-
-
ನಡದ 3) ------------------- -----------------
ಆ ತರುವಾಯ ಪ್ರತಿಯೊಬ್ಬ ಸದಸ್ಯನು, ಆ ಉದ್ದೇಶಕ್ಕಾಗಿ ಪ್ರತ್ಯೇಕವಾಗಿಟ್ಟಿರುವ ಸ್ಥಳಕ್ಕೆ ಹೋಗತಕ್ಕುದು ಮತ್ತು ಅವನು ಮತ ನೀಡಲು ಇಚ್ಛಿಸುವ ಅಭ್ಯರ್ಥಿಯ ಹೆಸರು ಅಥವಾ ಅಭ್ಯರ್ಥಿಗಳ ಹೆಸರುಗಳ ಮೇಲೆ ಕತ್ತರಿ ಗುರುತನ್ನು ಹಾಕತಕ್ಕದ್ದು. ಆ ತರುವಾಯ ಅವನು ಮತಪತ್ರವನ್ನು ಅವನ ಮತವನ್ನು ಮರೆ ಮಾಡುವ ಹಾಗೆ ಮಾಡಿಸತಕ್ಕದ್ದು ಮತ್ತು ಅದನ್ನು ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿರುವ ವ್ಯಕ್ತಿಗೆ ಕಾಣಿಸುವ ರೀತಿಯಲ್ಲಿ ಇಡಲಾದ ಮತಪೆಟ್ಟಿಗೆಯಲ್ಲಿ ಹಾಕತಕ್ಕದ್ದು. ಆ ಮತ ಪೆಟ್ಟಿಗೆಯನ್ನು ಅದರಲ್ಲಿ ಮತಪತ್ರವನ್ನು ಹಾಕುವ ಹಾಗೆ ಆದರೆ ಆ ಪೆಟ್ಟಿಗೆಯನ್ನು ತೆಗೆಯದೆ ಅದರಿಂದ ಅದನ್ನು ಹೊರಕ್ಕೆ ತೆಗೆಯಲಾಗದ ಹಾಗೆ ರಚಿಸಿರತಕ್ಕದ್ದು. ಆ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸುವ ವ್ಯಕ್ತಿಯು ಆ ಪೆಟ್ಟಿಗೆಯನ್ನು ಆ ತರುವಾಯ ಇಬ್ಬರು ಸದಸ್ಯರ (ಅಭ್ಯರ್ಥಿಗಳನ್ನು ಹೊರತುಪಡಿಸಿ) ಸಮಕ್ಷಮದಲ್ಲಿ ತೆಗೆಯತಕ್ಕುದು ಮತ್ತು ಮತಗಳನ್ನು ಎಣಿಸತಕ್ಕದ್ದು. ಆ ಇಬ್ಬರು ಸದಸ್ಯರನ್ನು ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಮತ ಗಣಕರೆಂದು ನಾಮನಿರ್ದೇಶನ ಮಾಡತಕ್ಕದ್ದು.