44ನೇ ಪ್ರಕರಣದ (4)ನೇ ಉಪಪ್ರಕರಣದ ಮೇರೆಗೆ ರಾಜ್ಯ ಗ್ರಂಥಪಾಲನ ತೀರ್ಮಾನದ ವಿರುದ್ಧ ಕರ್ನಾಟಕ ರಾಜಸ್ವ ಅಪೀಲು ನ್ಯಾಯಾಧೀಕರಣಕ್ಕೆ ಅಪೀಲನ್ನು, ಅಂಥ ತೀರ್ಮಾನದ ದಿನಾಂಕದಿಂದ ತೊಂಭತ್ತು ದಿವಸದೊಳಗೆ ಸಲ್ಲಿಸತಕ್ಕದ್ದು.
ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳು (ಗ್ರಂಥಾಲಯ ಪ್ರಾಧಿಕಾರಗಳ ರಚನೆ) ನಿಯಮಗಳು, 1966 ಇವುಗಳನ್ನು, ಈ ನಿಯಮಗಳ ಪ್ರಾರಂಭವಾದ ದಿನಾಂಕಕ್ಕೆ ಮುಂಚೆ ಸದರಿ ನಿಯಮಗಳ ಮೇರೆಗೆ ಮಾಡಿದ ಕಾರ್ಯಗಳಿಗೆ ಸಂಬಂಧಪಟ್ಟಂತೆ ಹೊರತುಪಡಿಸಿ ಈ ಮೂಲಕ ನಿರಸನಗೊಳಿಸಲಾಗಿದೆ;
ಪರಂತು, ಮಾಡಿದ ಯಾವುದೇ ಕಾರ್ಯ, ಕೈಗೊಂಡ ಯಾವುದೇ ಕ್ರಮವನ್ನು (ನಡೆಸಲಾದ ಚುನಾವಣೆಗಳನ್ನು ಒಳಗೊಂಡು) ಈ ನಿಯಮಗಳ ಸಂವಾದಿ ಉಪಬಂಧಗಳ ಮೇರೆಗೆ ಮಾಡಲಾಗಿರುವುದಾಗಿ ಅಥವಾ ಕೈಗೊಂಡಿರುವುದಾಗಿ ಭಾವಿಸತಕ್ಕದ್ದು.
ಅನುಬಂಧ-1
(14(1)ನೇ ನಿಯಮವನ್ನು ನೋಡಿ) ನಗರ ಗ್ರಂಥಾಲಯ ಅಭಿವೃದ್ಧಿ ಯೋಜನೆಯ ನಮೂನೆ ನಗರಕ್ಕಾಗಿನ ಅಭಿವೃದ್ಧಿ ಯೋಜನೆಯು ಹೊಸದಾಗಿ ಸ್ಥಾಪಿಸಬೇಕಾಗಿರುವ ಪ್ರತಿಯೊಂದು ಕೇಂದ್ರ ಮತ್ತು ಶಾಖಾ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಶಾಲೆ ಮತ್ತು ಆಸ್ಪತ್ರೆ ಗ್ರಂಥಾಲಯದ ಬಗ್ಗೆ ಈ ಕೆಳಕಂಡ ಮತ್ತು ಇತರ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸತಕ್ಕದ್ದು:
(2) ಅನಕ್ಷರತೆಯನ್ನು ತೊಡೆದುಹಾಕುವುದಕ್ಕಾಗಿನ ಇತರ ಏಜೆನ್ಸಿಗಳು ಮತ್ತು ಗ್ರಂಥಾಲಯವು ವಹಿಸಲುದ್ದೇಶಿಸಿದ ಪಾತ್ರ. 5. ವಿಭಾಗದಲ್ಲಿನ ವಯಸ್ಕ ಶಿಕ್ಷಣ ಶಾಲೆಗಳ ಸಂಖ್ಯೆ ಮತ್ತು ಅವುಗಳೊಂದಿಗೆ ಗ್ರಂಥಾಲಯವು ಸಹಕರಿಸಲು ಉದ್ದೇಶಿಸುವಂಥ ರೀತಿ; 6. (1) ಕಟ್ಟಡಗಳು ಮತ್ತು ಜೋಡಣೆಗಳು; (2) ಪೀಠೋಪಕರಣಗಳು ಮತ್ತು ಕಛೇರಿ ಸಲಕರಣೆಗಳು;
(3) ಓದುವ ಮತ್ತು ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳು;
(4) ಪ್ರಾರಂಭಿಕ ಖರ್ಚಿನ ವೆಚ್ಚವನ್ನು ವಿಸ್ತರಿಸಲು ಉದ್ದೇಶಿಸಿದ ವರ್ಷಗಳ ಸಂಖ್ಯೆ;
(5) ಸರ್ಕಾರವು ಒದಗಿಸಬೇಕೆಂಬುದಾಗಿ ಕೋರಲಾಗಿರುವಂಥ ಮೊಬಲಗು;
(6) ಉಳಿದ ಮೊಬಲಗನ್ನು ಕೊಂಡುಕೊಳ್ಳಲು ಉದ್ದೇಶಿಸಿದಂಥ ಇತರ ಮೂಲಗಳು - ಇವುಗಳ ಬಗೆಗಿನ ಅಂದಾಜು ಮಾಡಿದ ಪ್ರಾರಂಭಿಕ ವೆಚ್ಚ 7. (ಕ) ಹುದ್ದೆಗಳ ಸಂಖ್ಯೆ ಮತ್ತು ಸಂಬಳಗಳ ಶ್ರೇಣಿಯ ಬಗೆಗಿನ ವಿವರಗಳೊಂದಿಗೆ ಸಿಬ್ಬಂದಿ;
(ಖ) ಪೀಠೋಪಕರಣ ಮತ್ತು ಕಛೇರಿ ಉಪಕರಣಗಳು;
(ಗ) ಓದುವ ಮತ್ತು ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳು;
(ಘ) ವಿಮಾ ವೆಚ್ಚಗಳು;
(ಙ) ಎತ್ತಲಾದ ಗ್ರಂಥಾಲಯ ಉಪಕರದಿಂದ ವಿನಿಯೋಗಿಸಬೇಕಾದ ಅಂದಾಜು ಮಾಡಿದ ಮೊಬಲಗು;
(ಚ) ಮೂಲಗಳ ಹೆಸರಿನೊಂದಿಗೆ ಇತರ ಮೂಲಗಳಿಂದ ಕೊಂಡುಕೊಳ್ಳಬಹುದಾದ ಅಂದಾಜು ಮಾಡಿದ ಮೊಬಲಗು;
(ಛ) ಸರ್ಕಾರವು ಒದಗಿಸಲು ಕೋರಲಾಗಿರುವಂಥ ಮೊಬಲಗು - ಇವುಗಳ ಬಗ್ಗೆ ವರ್ಷಕ್ಕಾಗಿ ಅಂದಾಜು ಮಾಡಿದ ಅವರ್ತಕ ಖರ್ಚು.
ಅಭಿವೃದ್ಧಿಯ ವೇಳಾಪಟ್ಟಿ ಒಂದು ನಗರದ ಅಭಿವೃದ್ಧಿ ಯೋಜನೆಯು, ಯಾವ ವರ್ಷಗಳಲ್ಲಿ ಪೂರ್ಣ ಗ್ರಂಥಾಲಯ ಸೇವೆಯನ್ನು ಸ್ಥಾಪಿಸಬಹುದೋ ಆ ವರ್ಷಗಳ ಅಂದಾಜು ಸಂಖ್ಯೆಯನ್ನು ತಿಳಿಸತಕ್ಕದ್ದು ಮತ್ತು ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿಯ ರೂಪದಲ್ಲಿ ಪ್ರಸ್ತಾವಗಳ ಸಾರಾಂಶವನ್ನು,-
(2) ಅರೆ ವೃತ್ತೀಯ;
(3) ಲಿಪಿಕ;
(4) ಅಕುಶಲ; 6. 10 ವರ್ಷ ವಯಸ್ಸಿಗಿಂತ ಹೆಚ್ಚಿನ ಒಟ್ಟು ಜನಸಂಖ್ಯೆ ಮತ್ತು ಅವರ ಪೈಕಿ ಅಕ್ಷರಸ್ಥರಿಗೆ ವೃತ್ತೀಯ ಮತ್ತು ಅರೆ ವೃತ್ತೀಯ ಸಿಬ್ಬಂದಿಯು ಇರುವ ಪ್ರಮಾಣ ಸಂಖ್ಯೆ: 7. (1) ಸರ್ಕಾರದಿಂದ; (2) ನಗರದ ಸ್ಥಳೀಯ ನಿಕಾಯದಿಂದ: ಮತ್ತು
(3) ಇತರ ಮೂಲಗಳಿಂದ - ಕಂಡುಕೊಳ್ಳಬೇಕಾದ ಮೊಬಲಗನ್ನು ಸೂಚಿಸಿ ಅಂದಾಜು ಬಂಡವಾಳ ವೆಚ್ಚದ ಕ್ರಮಿಕ ಒಟ್ಟು ಮೊಬಲಗು 8.(1) ಸರ್ಕಾರದಿಂದ;
(2) ನಗರದ ಸ್ಥಳೀಯ ನಿಕಾಯದಿಂದ;
(3) ಗ್ರಂಥಾಲಯ ಉಪಕರದ ಉತ್ಪತ್ತಿಗಳಿಂದ; ಮತ್ತು
(4) ಇತರ ಮೂಲಗಳಿಂದ - ಕಂಡುಕೊಳ್ಳಬೇಕಾದ ಮೊಬಲಗನ್ನು ಸೂಚಿಸಿ ವಾರ್ಷಿಕ ವೆಚ್ಚದ ಅಂದಾಜು ವೆಚ್ಚ ಇವುಗಳ ಬಗ್ಗೆ ಪ್ರತಿ ವರ್ಷಕ್ಕಾಗಿ ಕೊಟ್ಟು ಒದಗಿಸತಕ್ಕದ್ದು.
ಅನುಬಂಧ-II
(15(1)ನೇ ನಿಯಮವನ್ನು ನೋಡಿ) ಜಿಲ್ಲಾ ಗ್ರಂಥಾಲಯ ಅಭಿವೃದ್ಧಿ ಯೋಜನೆಯ ನಮೂನೆ ಗ್ರಂಥಾಲಯಗಳನ್ನು ಸ್ಥಾಪಿಸುವುದಕ್ಕಾಗಿ ಮತ್ತು ಗ್ರಂಥಾಲಯ ಸೇವೆಯನ್ನು ವಿಸ್ತರಿಸುವುದಕ್ಕಾಗಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಭಿವೃದ್ಧಿ ಯೋಜನೆಯನ್ನು ಮೂರು ಭಾಗಗಳಲ್ಲಿ, ಸರಿ ಸುಮಾರಾಗಿ ಹೇಳಬೇಕಾದರೆ, ಈ ಕೆಳಕಂಡ ಆದ್ಯತೆಯ ಕ್ರಮದಲ್ಲಿ ಸಲ್ಲಿಸತಕ್ಕುದು:
(2) ಈಗಿರುವ ಗ್ರಂಥಾಲಯ ಸೇವೆ. 2. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಭಿವೃದ್ಧಿ ಯೋಜನೆಯು, ಈ ಕೆಳಕಂಡವುಗಳನ್ನು ಮತ್ತು ಯಾವುದೇ ಇತರ ಸುಸಂಗತ ಅಂಶಗಳನ್ನೊಳಗೊಳ್ಳುವ ಈಗಿರುವ ಗ್ರಂಥಾಲಯ ಸೇವೆಯ ಬಗ್ಗೆ ಮಾಹಿತಿಯನ್ನು ಒದಗಿಸತಕ್ಕದ್ದು; (ಕ) ಅಸ್ತಿತ್ವದಲ್ಲಿರುವ;
ಜಿಲ್ಲಾ ಮಂಡಲಿಯು ನಿರ್ವಹಿಸುತ್ತಿರುವ ಸಾರ್ವಜನಿಕ ಗ್ರಂಥಾಲಯಗಳು ಯಾವುದಾದರೂ ಇದ್ದರೆ, ಅವು;
ಮುನ್ಸಿಪಲ್ ಕೌನ್ಸಿಲ್ ಅಥವಾ ಗ್ರಾಮ ಪಂಚಾಯತಿಗಳು, ನಿರ್ವಹಿಸುತ್ತಿರುವ ಸಾರ್ವಜನಿಕ ಗ್ರಂಥಾಲಯಗಳು;
ಸಾರ್ವಜನಿಕರಿಗೆ ಮುಕ್ತವಾಗಿರುವ ಮತ್ತು ಇತರ ನಿಗಮಿತ ಏಜೆನ್ಸಿಗಳು ನಿರ್ವಹಿಸುತ್ತಿರುವ ಇತರ ಗ್ರಂಥಾಲಯಗಳು;
ಜಿಲ್ಲಾ ಮಂಡಲಿಗಳು ನಿರ್ವಹಿಸುತ್ತಿರುವ ಶಾಲಾ ಗ್ರಂಥಾಲಯಗಳು, ಯಾವುವಾದರೂ ಇದ್ದರೆ, ಅವು;
ಮುನ್ಸಿಪಲ್ ಕೌನ್ಸಿಲುಗಳು ಅಥವಾ ಗ್ರಾಮ ಪಂಚಾಯಿತಿಗಳು ನಿರ್ವಹಿಸುತ್ತಿರುವ ಶಾಲಾ ಗ್ರಂಥಾಲಯಗಳು;
ಇತರ ನಿಗಮಿತ ಏಜೆನ್ಸಿಗಳು ನಿರ್ವಹಿಸುತ್ತಿರುವ ಶಾಲಾ ಗ್ರಂಥಾಲಯಗಳು;
ಆಸ್ಪತ್ರೆ ಗ್ರಂಥಾಲಯಗಳು; ಮತ್ತು 8) ಕಾರಾಗೃಹ ಗ್ರಂಥಾಲಯಗಳು - ಇವು ಇರುವ ಸ್ಥಳವನ್ನು ವಿಭಿನ್ನ ಗುರುತುಗಳ ಮೂಲಕ ತೋರಿಸಿರುವಂಥ ಅನುಮೋದಿತ ಜಿಲ್ಲಾ ಪ್ರದೇಶದ ಭೂಪಟ.
ನಗರ ಗ್ರಂಥಾಲಯ ಯೋಜನೆಗಾಗಿ 2 ರಿಂದ 7ರ ವರೆಗೆ ಕೊಟ್ಟ ನಿಯಮಗಳ ಸಾದೃಶ್ಯದ ಮೇಲೆ 2(ಕ)ದಲ್ಲಿ ನಮೂದು ಮಾಡಿದ ಪ್ರತಿಯೊಂದು ಗ್ರಂಥಾಲಯದ ಬಗ್ಗೆ ವಿವರಗಳನ್ನು ತೋರಿಸುವ ಮಾಹಿತಿ. 3. ಗ್ರಂಥಾಲಯವನ್ನು ವಹಿಸಿಕೊಳ್ಳುವುದು.- (1) ಈ ನಿಯಮಗಳು, ನಗರ ಅಭಿವೃದ್ಧಿ ಯೋಜನೆಯ ಸಂವಾದಿ ನಿಯಮಗಳಿಗೆ ಸಾದೃಶ್ಯವಾಗಿದೆ. (2) ಕಾರಾಗೃಹಗಳ ಸಂಖ್ಯೆ ಮತ್ತು ಪ್ರತಿ ದಿವಸಕ್ಕೆ ಕೈದಿಗಳ ಸರಾಸರಿ ಸಂಖ್ಯೆ
(3) ಸ್ಥಾಪಿಸಬೇಕಾದ ಹೊಸ ಗ್ರಂಥಾಲಯಗಳು ಈ ನಿಯಮಗಳು, ಸೂಕ್ತವೆನಿಸಿದ ಕಡೆಗಳಲೆಲ್ಲಾ “ಕಾರಾಗೃಹ ಗ್ರಂಥಾಲಯಗಳು” ಎಂಬುದರ ಸೇರ್ಪಡೆಯೊಂದಿಗೆ ನಗರ ಅಭಿವೃದ್ಧಿ ಯೋಜನೆಗಾಗಿನ ಸಂವಾದಿ ನಿಯಮಗಳಿಗೆ ಸಾದೃಶ್ಯವಾಗಿವೆ.
(4) ಅಭಿವೃದ್ಧಿ ವೇಳಾಪಟ್ಟಿ.- ಈ ನಿಯಮಗಳು, ನಗರ ಅಭಿವೃದ್ಧಿ ಯೋಜನೆಗಾಗಿನ ಸಂವಾದಿ ನಿಯಮಗಳಿಗೆ ಸಾದೃಶ್ಯವಾಗಿವೆ; ಮತ್ತು ಅದರ ಜೊತೆಗೆ ಈ ಕೆಳಕಂಡವು,-
(ಕ) ಕಾರಾಗೃಹ ಗ್ರಂಥಾಲಯಗಳ ಸಂಖ್ಯೆ; ಮತ್ತು
(ಖ) ಗ್ರಂಥಾಲಯಗಳ ಸಂಖ್ಯೆ, 4. ಪಟ್ಟಣ ಉಪ ಯೋಜನೆ.- (ಕ) ಗ್ರಾಮೀಣ ಗ್ರಂಥಾಲಯ ಅಭಿವೃದ್ಧಿ ಯೋಜನೆಯು, ನಗರ ಗ್ರಂಥಾಲಯ ಯೋಜನೆಗಾಗಿ ಅಗತ್ಯಪಡಿಸಿದ ವಿವರಗಳನ್ನು ಕೊಟ್ಟು ಅನುಮೋದಿತ ಗ್ರಾಮೀಣ ಪ್ರದೇಶದಲ್ಲಿ ಸೇರಿಸಲಾದ ಎರಡು ಪಟ್ಟಣಗಳ ಪ್ರತಿಯೊಂದಕ್ಕೂ ಒಂದು ಉಪಯೋಜನೆಯನ್ನು ಒದಗಿಸತಕ್ಕದ್ದು; ಮತ್ತು
(1) ಒಂದು ಪಟ್ಟಣಕ್ಕೆ ಉಪಯೋಜನೆಯನ್ನು ರೂಪಿಸುವಾಗ, ಒಂದು ಪಟ್ಟಣ ಉಪಯೋಜನೆಯ ಮೇರೆಗೆ ನಿರ್ವಹಿಸಲಾಗುತ್ತಿರುವ ಒಂದು ಸಾರ್ವಜನಿಕ ಗ್ರಂಥಾಲಯವು ಒಂದು ಸ್ವತಂತ್ರ ಘಟಕವಾಗಿರುವುದು ನಿಂತು ಹೋಗುವುದೆಂದು ಮತ್ತು ಯಾವ ಜಿಲ್ಲೆಯಲ್ಲಿ ಅದು ಇರುವುದೋ ಆ ಜಿಲ್ಲೆಯಲ್ಲಿ ಅನುಮೋದಿತ ಗ್ರಾಮೀಣ ಪ್ರದೇಶಕ್ಕಾಗಿನ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಸ್ಥಾಪಿಸಿದ ಮೇಲೆ ಆದಷ್ಟು ಬೇಗ ಅದು ಗ್ರಾಮೀಣ ಶಾಖಾ ಗ್ರಂಥಾಲಯವಾಗುವುದೆಂಬುದನ್ನು ಗಮನದಲ್ಲಿಟ್ಟುಕೊಳ್ಳತಕ್ಕದ್ದು. 5. ಗ್ರಾಮ ಉಪಯೋಜನೆ.- ಒಂದು ಗ್ರಾಮೀಣ ಉಪಯೋಜನೆಯನ್ನು, ಯಾವ ಪ್ರದೇಶಕ್ಕಾಗಿ ಜಿಲ್ಲಾ ಕೇಂದ್ರಗ್ರಂಥಾಲಯವನ್ನು ಸ್ಥಾಪಿಸಲಾಗಿದೆಯೋ ಆ ಪ್ರದೇಶದಲ್ಲಿನ ಗ್ರಾಮಗಳು ಮತ್ತು ಸಣ್ಣ ಹಳ್ಳಿಗಳಿಗಾಗಿ ಮಾತ್ರ ಸಲ್ಲಿಸಬಹುದು. (1) ಗ್ರಾಮ ಉಪಯೋಜನೆಯು, ಈ ಕೆಳಕಂಡ ಮತ್ತು ಒಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರದೇಶದೊಳಗೆ ಬರುವ ಗ್ರಾಮಗಳು ಮತ್ತು ಸಣ್ಣ ಹಳ್ಳಿಗಳಿಗೆ ಸಂಚಾರಿ ಗ್ರಂಥಾಲಯ ಸೇವೆಯನ್ನು ಕ್ರಮಿಕವಾಗಿ ವಿಸ್ತರಿಸುವ ಬಗ್ಗೆ ಯಾವುದೇ ಇತರ ಸುಸಂಗತ ಮಾಹಿತಿಯನ್ನು ಒದಗಿಸತಕ್ಕದ್ದು.
(ಕ) ಭೂಪ್ರದೇಶದ ಸ್ವರೂಪ, ಸಂಚಾರಿ ಗ್ರಂಥಾಲಯವು ಸಂಚರಿಸಬೇಕಾದ ರಸ್ತೆಗಳು ಮತ್ತು ಒಂದು ಸೇವಾ ಕೇಂದ್ರವನ್ನು ತೋರಿಸುವ ಪ್ರದೇಶದ ಒಂದು ಭೂಪಟ, ಸೇವಾ ಕೇಂದ್ರವನ್ನು ತಲುಪಲು ಆ ವಾಸಸ್ಥಳದ ಯಾವನೇ ನಿವಾಸಿಯು ಒಂದು ಕಿಲೋಮೀಟರಿಗಿಂತ ಹೆಚ್ಚು ನಡೆಯಬೇಕಾಗಿಲ್ಲ ಎಂಬಂತೆ ಪ್ರತಿ ವಾಸಸ್ಥಳಕ್ಕಾಗಿ ಒಂದು ಸೇವಾ ಕೇಂದ್ರದ ಗುರಿ ಮಾದರಿಯಾಗಿರತಕ್ಕದ್ದು;
(ಖ) ವಾರ್ಷಿಕ ಸೇರ್ಪಡೆ ಮತ್ತು ಸಂಚಿತ ಒಟ್ಟನ್ನು ತೋರಿಸುವ ವೇಳಾಪಟ್ಟಿಯೊಂದಿಗೆ ತರಬೇಕಾದ ಸಂಚಾರಿ ಗ್ರಂಥಾಲಯಗಳು ಅಥವಾ ಲೈಬ್ರಾಚೈನುಗಳ ಸಂಖ್ಯೆ ಹದಿನೈದು ದಿವಸಕ್ಕೊಮ್ಮೆ ಪ್ರತಿಯೊಂದು ಸೇವಾ ಕೇಂದ್ರದಲ್ಲಿ ಒಂದು ಲೈಬ್ರಾಚೈನು ಸಂದರ್ಶಿಸುವ ಹಾಗೆ 25,000 ಜನಸಂಖ್ಯೆಗಾಗಿ ಅಥವಾ 10 ಸೇವಾ ಕೇಂದ್ರಗಳಿಗಾಗಿ ಸರಿಸುಮಾರು ಒಂದು ಲೈಬ್ರಾಚೈನನ್ನು ಗುರಿಯಾಗಿಟ್ಟುಕೊಳ್ಳುವುದು ಮಾದರಿಯೆನಿಸುವು ದೆಂಬುದನ್ನು ತಿಳಿದಿರಬೇಕು;
(ಗ) ವಾರ್ಷಿಕ ಸೇರ್ಪಡೆ ಮತ್ತು ಸಂಚಿತ ಒಟ್ಟನ್ನು ತೋರಿಸುವ ವೇಳಾಪಟ್ಟಿಯೊಂದಿಗೆ ನೇಮಕ ಮಾಡಲುದ್ದೇಶಿಸಿದ ಸಂಚಾರಿ ಸಿಬ್ಬಂದಿಯ ಸಂಖ್ಯೆ;
(ಘ) ವಲಯದಲ್ಲಿ ಸಾಮಾಜಿಕ ಶಿಕ್ಷಣ ಕೇಂದ್ರಗಳ ಸಂಖ್ಯೆ ಮತ್ತು ಅವುಗಳೊಂದಿಗೆ ಗ್ರಂಥಾಲಯವು ಸಹಕರಿಸಲು ಉದ್ದೇಶಿಸುವಂಥ ರೀತಿ;
(ಙ) (1) ಗ್ರಂಥಾಲಯ ವಾಹನಗಳು ಮತ್ತು ಅವುಗಳ ಜೋಡಣೆಗಳು;
(2) ಗ್ರಾಮೀಣ ಕೇಂದ್ರ ಗ್ರಂಥಾಲಯ ಕಟ್ಟಡಕ್ಕೆ ಸೇರ್ಪಡೆ ಮಾಡಬೇಕಾದ ಗ್ಯಾರೇಜು ಮತ್ತು ಉಪಯೋಗಕ್ಕಾಗಿ ಸಜ್ಜುಗೊಳಿಸುವ ಸ್ಥಳ;
(3) ಪೀಠೋಪಕರಣ ಮತ್ತು ಕಛೇರಿ ಸಾಧನ ಸಾಮಗ್ರಿ;
(4) ಓದುವ ಮತ್ತು ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳು;
(5) ಪ್ರಾರಂಭಿಕ ಖರ್ಚಿನ ವೆಚ್ಚವನ್ನು ಬಳಸಬಹುದಾದ ವರ್ಷಗಳ ಸಂಖ್ಯೆ;
(6) ಸರ್ಕಾರವು ಒದಗಿಸಬೇಕೆಂದು ಕೋರಲಾಗಿರುವಂಥ ಮೊಬಲಗು;
(7) ಉಳಿದ ಮೊಬಲಗನ್ನು ಕಂಡುಕೊಳ್ಳಲು ನಿರೀಕ್ಷಿಸಿದಂಥ ಸಂಪನ್ಮೂಲ;
-ಇವುಗಳಿಗಾಗಿನ ವಾರ್ಷಿಕ ಮೊಬಲಗು ಮತ್ತು ಸಂಚಿತ ಒಟ್ಟನ್ನು ತೋರಿಸುವ ವೇಳಾಪಟ್ಟಿಯೊಂದಿಗೆ ಅಂದಾಜು ಮಾಡಿದ ಪ್ರಾರಂಭಿಕ ಖರ್ಚು.
(1) ಹುದ್ದೆಗಳ ಸಂಖ್ಯೆ ಮತ್ತು ಸಂಬಳಗಳ ಶ್ರೇಣಿಗಳ ಬಗ್ಗೆ ವಿವರಗಳೊಡನೆ ಸಿಬ್ಬಂದಿ;
(2) ಪೀಠೋಪಕರಣ ಮತ್ತು ಕಛೇರಿ ಸಾಧನ ಸಾಮಗ್ರಿ;
(3) ಓದುವ ಮತ್ತು ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳು;
(4) ವಿಮಾ ವೆಚ್ಚಗಳು;
(5) ಗ್ರಂಥಾಲಯ ಉಪಕರದಿಂದ ಕಂಡುಕೊಳ್ಳಬೇಕಾದ ಅಂದಾಜು ಮಾಡಿದ ಮೊಬಲಗು ಮೊತ್ತ;
(6) ಇತರ ಮೂಲಗಳ ಹೆಸರಿನೊಂದಿಗೆ ಇತರ ಮೂಲಗಳಿಂದ ಕಂಡುಕೊಳ್ಳಬೇಕಾದ ಅಂದಾಜು ಮಾಡಿದ ಮೊಬಲಗು; ಮತ್ತು
(7) ಸರ್ಕಾರವು ಒದಗಿಸಬೇಕೆಂದು ಕೋರಲಾಗಿರುವ ಮೊಬಲಗುಗಳು - ಇವುಗಳ ಬಗ್ಗೆ ವಾರ್ಷಿಕ ಸೇರ್ಪಡೆಯನ್ನು ತೋರಿಸುವ ವೇಳಾ ಪಟ್ಟಿಯೊಂದಿಗೆ ಅಂದಾಜು ಮಾಡಿದ ಆವರ್ತಕ ಖರ್ಚು.
ಅನುಬಂಧ- III
(24ನೇ ನಿಯಮವನ್ನು ನೋಡಿ) ಸಹಾಯ ಅನುದಾನಕ್ಕಾಗಿ, ಅರ್ಹತೆ ಬಗ್ಗೆ ಷರತ್ತುಗಳಿಗೆ ಸಂಬಂಧಪಟ್ಟ ನಿಯಮಗಳು 1. ಉಚಿತವಾಗಿ ಪುಸ್ತಕವನ್ನು ನೋಡುವುದು.- (ಕ) ಪುಸ್ತಕಗಳನ್ನು ಚಂದಾದಾರರಿಗೆ ಎರವಲು ಕೊಡಬಹುದಾದರೂ, ಆವರಣದೊಳಗೆ ಪುಸ್ತಕವನ್ನು ನೋಡುವುದಕ್ಕಾಗಿ ಆ ಸ್ಥಳದ ಎಲ್ಲ ಜನರಿಗೆ ಗ್ರಂಥಾಲಯವನ್ನು ಮುಕ್ತವಾಗಿಡತಕ್ಕದ್ದು.
(ಖ) ಸಾರ್ವಜನಿಕರು ಉಪಯೋಗಿಸುವುದಕ್ಕಾಗಿ ಗ್ರಂಥಾಲಯವು ವಾರದಲ್ಲಿ 30 ಗಂಟೆಗಳಿಗೆ ಕಡಿಮೆಯಿಲ್ಲದಂತೆ ತೆರೆದಿಟ್ಟಿರತಕ್ಕದ್ದು;
(ಗ) ಗ್ರಂಥಾಲಯವು ರಾಜ್ಯ ಗ್ರಂಥಪಾಲನು ನಿಗದಿಪಡಿಸಬೇಕಾದ ಓದುಗರ ಕನಿಷ್ಠ ಸರಾಸರಿ ದೈನಿಕ ಹಾಜರಿಯನ್ನು ಹೊಂದಿರತಕ್ಕದ್ದು; ಮತ್ತು
(ಘ) ಗ್ರಂಥಾಲಯವು ಪುಸ್ತಕಗಳನ್ನು ಹೊಂದಿರತಕ್ಕದ್ದು ಮತ್ತು ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಮಾತ್ರ ಅಲ್ಲ. 2. ಚಂದಾ ಅಥವಾ ನೋಂದಾಯಿತ ಎರವಲು ಪಡೆಯುವವರು.- (ಕ) ಪುಸ್ತಕಗಳನ್ನು ಎರವಲು ಪಡೆಯುವುದಕ್ಕಾಗಿ ಗ್ರಂಥಾಲಯವು ಚಂದಾ ವಿಧಿಸುವ ಸಂದರ್ಭದಲ್ಲಿ, ಮನೆಯಲ್ಲಿ ಓದುವುದಕ್ಕಾಗಿ ಎರವಲು ಪಡೆಯುವವನು ಗ್ರಂಥಾಲಯಕ್ಕೆ ಚಂದಾದಾರನಾಗುವ ಬಗೆಗಿನ ಅರ್ಹತೆಯು ಸ್ಥಳೀಯವಾಗಿ ಸೂಕ್ಷ್ಮವಿಚಾರಣೆಗೆ ಒಳಪಟ್ಟಿರತಕ್ಕದ್ದು; (ಖ) ಗ್ರಂಥಾಲಯವು, ರಾಜ್ಯ ಗ್ರಂಥಪಾಲನು ನಿಗದಿಪಡಿಸಬೇಕಾದ ಚಂದಾದಾರರು ಅಥವಾ ನೋಂದಾಯಿತ ಎರವಲು ಪಡೆಯುವವರ ಕನಿಷ್ಠ ಸಂಖ್ಯೆಯನ್ನು ಹೊಂದಿರತಕ್ಕದ್ದು. 3. ಸೇವಾ ಕೇಂದ್ರ ಸೌಲಭ್ಯಗಳು.- ಗ್ರಂಥಾಲಯವು, ಸಂದರ್ಭಾನುಸಾರ ಜಿಲ್ಲಾ ಅಥವಾ ನಗರ ಕೇಂದ್ರ ಗ್ರಂಥಾಲಯದ ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸತಕ್ಕದ್ದು. ಹಾಗೆಂದರೆ ಅದರ ಸ್ಥಳೀಯ ನಿವಾಸಿಗಳಿಗೆ ಪರಿಚಲನೆಗಾಗಿ ಕೇಂದ್ರ ಗ್ರಂಥಾಲಯ ಅಥವಾ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಶಾಖಾ ಗ್ರಂಥಾಲಯವು ಎರವಲಾಗಿ ಕೊಟ್ಟ ಪುಸ್ತಕಗಳನ್ನು ಸ್ವೀಕರಿಸತಕ್ಕದ್ದು. ಅವುಗಳನ್ನು ನಿವಾಸಿಗಳಿಗೆ ಚಂದಾ ಪಡೆಯದೇ ಎರವಲು ಕೊಡತಕ್ಕದ್ದು. ಗ್ರಂಥಾಲಯ ತಗಾದೆ ಮಾಡಿದಾಗ ಸಂಬಂಧಪಟ್ಟ ಕೇಂದ್ರ ಅಥವಾ ಶಾಖಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಾಪಸ್ಸು ಕೊಡತಕ್ಕದ್ದು. ಅಂಥ ಪುಸ್ತಕ ಕೊಟ್ಟ ಬಗ್ಗೆ ಅಂಕಿಅಂಶಗಳನ್ನು ಒದಗಿಸತಕ್ಕದ್ದು ಮತ್ತು ಜನರಿಗೆ ಪುಸ್ತಕ ಸೇವೆಯನ್ನು ಸಲ್ಲಿಸುವಲ್ಲಿ ಯುಕ್ತವಾದ ಪ್ರತಿಯೊಂದು ರೀತಿಯಲ್ಲಿ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಕ್ಕೆ ಸಹಾಯ ಮಾಡತಕ್ಕದ್ದು. 4. ವ್ಯವಸ್ಥಾಪನೆ (ಕ) ವ್ಯವಸ್ಥಾಪಕ ಸಮಿತಿ.- ಗ್ರಂಥಾಲಯ ವ್ಯವಹಾರಗಳ ವ್ಯವಸ್ಥಾಪನೆಯು, ಒಂದು ಅನುಮೋದಿತ ನಿಗಮಿತ ನಿಕಾಯವು ಇಟ್ಟುಕೊಂಡು ಬಂದ ಮತ್ತು ವ್ಯವಸ್ಥಾಪನೆ ಮಾಡಿಕೊಂಡು ಬಂದ ಗ್ರಂಥಾಲಯವನ್ನು ಹೊರತುಪಡಿಸಿ ಚಂದಾದಾರರ ಸರ್ವಸದಸ್ಯರ ಸಭೆಯಲ್ಲಿ ನಿಯತಕಾಲಿಕವಾಗಿ ಚುನಾವಣೆ ಮಾಡಿದ ವ್ಯವಸ್ಥಾಪಕ ಸಮಿತಿಯಲ್ಲಿ ನಿಹಿತಗೊಳ್ಳತಕ್ಕದ್ದು. (ಖ) ರಚನೆ.- ಸಂದರ್ಭಾನುಸಾರ ನೆರವು ಪಡೆದ ಗ್ರಂಥಾಲಯ ಅಥವಾ ಒಂದು ಅನುಮೋದಿತ ನಿಗಮಿತ ನಿಕಾಯದ ವಿವರಣ ಪತ್ರ ಮತ್ತು ಅಂಗರಚನೆ ಮತ್ತು ಉಪವಿಧಿಗಳ ಪ್ರತಿಯನ್ನು, ವರ್ಷದಲ್ಲಿ ಒಮ್ಮೆ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಪ್ರದೇಶದ ಅದರ ಗ್ರಂಥಪಾಲನಿಗೆ ಒಪ್ಪಿಸತಕ್ಕದ್ದು.
(ಗ) ವ್ಯವಸ್ಥಾಪಕ ಸಮಿತಿಯ ಬಗ್ಗೆ ವರದಿ.- ಸಂದರ್ಭಾನುಸಾರ ನೆರವು ಪಡೆದ, ಗ್ರಂಥಾಲಯದ ವ್ಯವಸ್ಥಾಪಕ ಸಮಿತಿಯ ಅಥವಾ ಅನುಮೋದಿತ ನಿಗಮಿತ ನಿಕಾಯದ ಕಾರ್ಯಾಂಗದ ಸದಸ್ಯರ ಹೆಸರುಗಳನ್ನು ಸಂದರ್ಭಾನುಸಾರ ನಿಯತಕಾಲಿಕ ಚುನಾವಣೆ ಅಥವಾ ನೇಮಕಾತಿಯಾದ ಒಂದು ತಿಂಗಳೊಳಗೆ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಪ್ರದೇಶದ ಅದರ ಗ್ರಂಥಪಾಲನಿಗೆ ಸಲ್ಲಿಸತಕ್ಕದ್ದು. ಯಾವುದೇ ಮಧ್ಯಕಾಲಿಕ ಬದಲಾವಣೆಯನ್ನು ಸದರಿ ಗ್ರಂಥಪಾಲನಿಗೆ, ಆ ಬದಲಾವಣೆಯು ಆದ ಒಂದು ತಿಂಗಳೊಳಗೆ ವರದಿ ಮಾಡತಕ್ಕದ್ದು. 5. ಆಡಳಿತ.- (ಕ) ವಾರ್ಷಿಕ ಚಂದ.- ಚಂದಾದಾರರಿಂದ ಗ್ರಂಥಾಲಯದ ಕನಿಷ್ಠ ವಾರ್ಷಿಕ ಸ್ವೀಕೃತಿಯು 50-00 ರೂಪಾಯಿಗಳಾಗಿರತಕ್ಕುದು ಅಥವಾ ಅನುಮೋದಿತ ನಿಗಮಿತ ನಿಕಾಯವು ಗ್ರಂಥಾಲಯಕ್ಕೆ ಒದಗಿಸಿದ ಕನಿಷ್ಠ ವಾರ್ಷಿಕ ನಿಧಿಯು 500-00 ರೂಪಾಯಿಗಳಾಗಿರತಕ್ಕದ್ದು.
(ಖ) ಲೆಕ್ಕಪತ್ರಗಳು ಮತ್ತು ದಾಖಲೆಗಳು.- ರಾಜ್ಯ ಗ್ರಂಥಪಾಲನು ನಿಯಮಿಸಿದ ಲೆಕ್ಕಪತ್ರಗಳು, ದಾಖಲೆಗಳು ಮತ್ತು ಇತರ ಅಂಕಿ ಅಂಶಗಳನ್ನು ಗ್ರಂಥಾಲಯವು ಇಟ್ಟುಕೊಂಡು ಬರತಕ್ಕದ್ದು ಮತ್ತು ಅವು ರಾಜ್ಯ ಗ್ರಂಥಪಾಲನ ಅಥವಾ ಅವನು ನೇಮಕ ಮಾಡಿದ ಯಾವನೇ ಏಜೆಂಟನ ಪರಿಶೀಲನೆಗೆ ಒಳಪಟ್ಟಿರತಕ್ಕದ್ದು.
(ಗ) ಲೆಕ್ಕಪರಿಶೋಧನೆ.- ಗ್ರಂಥಾಲಯದ ವಾರ್ಷಿಕ ಲೆಕ್ಕ ಪತ್ರಗಳನ್ನು ಸ್ಥಳೀಯ ನಿಧಿ ಲೆಕ್ಕಪತ್ರಗಳ ಪರೀಕ್ಷಕನು ಲೆಕ್ಕ ಪರಿಶೋಧನೆಗಾಗಿ ಸಲ್ಲಿಸತಕ್ಕದ್ದು. ಅವನು, ಸಂದಾಯ ಮಾಡಿದ ಅನುದಾನವನ್ನು ಅದನ್ನು ಕೊಟ್ಟಿರುವಂಥ ಉದ್ದೇಶಕ್ಕಾಗಿ ಉಪಯೋಗಿಸಲಾಗಿದೆಯೆಂದು ಪ್ರಮಾಣೀಕರಿಸತಕ್ಕದ್ದು.
(ಘ) ವಾರ್ಷಿಕ ಪರಿಶೀಲನೆ.- ಗ್ರಂಥಾಲಯವು ಸಲ್ಲಿಸಿದ ಸೇವೆಯ ಗುಣಮಟ್ಟ ಮತ್ತು ಪ್ರಮಾಣವು, ಆ ಉದ್ದೇಶಕ್ಕಾಗಿ ರಾಜ್ಯ ಗ್ರಂಥಪಾಲನು ನೇಮಕ ಮಾಡಬಹುದಾದಂಥ ಏಜೆನ್ಸಿಯ ಪರಿಶೀಲನೆಗೆ ಮುಕ್ತವಾಗಿರತಕ್ಕದ್ದು. ವಿವಿಧ ಜಿಲ್ಲೆಗಳು ಮತ್ತು ವಿವಿಧ ನಗರಗಳಿಗಾಗಿ ವಿವಿಧ ಏಜೆನ್ಸಿಯನ್ನು ನೇಮಕ ಮಾಡಬಹುದು. 6. ಅನುದಾನದ ಬಳಕೆ.- (ಕ) ಪುಸ್ತಕಗಳು.- ಗ್ರಂಥಾಲಯವು ಸ್ವೀಕರಿಸಿದ ಅನುದಾನದ ಶೇಕಡಾ 75ರಷ್ಟನ್ನು ಗ್ರಂಥಾಲಯಕ್ಕಾಗಿ ಹೊಸ ಪುಸ್ತಕಗಳನ್ನು ಖರೀದಿಸಲು ಉಪಯೋಗಿಸತಕ್ಕದ್ದು.
(ಖ) ಪುಸ್ತಕಗಳನ್ನು ಹೊರತುಪಡಿಸಿ ಇತರೆ.- ಗ್ರಂಥಾಲಯವು ಸ್ವೀಕರಿಸಿದ ಅನುದಾನದ ಉಳಿದ ಶೇಕಡಾ 25ರಷ್ಟನ್ನು ಅವಶ್ಯವಿದ್ದರೆ, ಸಂಬಂಧಪಟ್ಟ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಪೂರ್ವಾನುಮೋದನೆಯೊಂದಿಗೆ, ಗ್ರಂಥಾಲಯದ ಇತರ ಉದ್ದೇಶಗಳಿಗಾಗಿ ಉಪಯೋಗಿಸಬಹುದು.
(ಗ) ಮೋಚರುಗಳನ್ನು ಒಪ್ಪಿಸುವುದು.- ಅನುದಾನದಿಂದ ಸಂದಾಯ ಮಾಡಿದ ಪ್ರತಿಯೊಂದು ಬಿಲ್ಲಿನ ಪ್ರತಿಯನ್ನು ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಅಥವಾ ಅನುಮೋದಿತ ನಿಗಮಿತ ನಿಕಾಯದ ಕಾರ್ಯನಿರ್ವಾಹಕ ಅಧಿಕಾರಿಯು ಸಂದಾಯದ ಬಗ್ಗೆ ಅದರ ಮೇಲೆ ಬರೆದು ರುಜು ಮಾಡಿದ ಪ್ರಮಾಣ ಪತ್ರ ಮತ್ತು ಆ ಹಣವನ್ನು ಸ್ವೀಕರಿಸಿದ ಪಕ್ಷಕಾರನ ರಸೀದಿಯೊಂದಿಗೆ, ಪ್ರತಿಯೊಂದು ತಿಂಗಳಿನ ಕೊನೆಯಲ್ಲಿ ಸಂಬಂಧಪಟ್ಟ ಸ್ಥಳೀಯ ಗ್ರಂಥಾಲಯದ ಪ್ರಾಧಿಕಾರದ ರಾಜ್ಯ ಗ್ರಂಥಪಾಲನು, ನಿಯಮಿಸಿದ ನಮೂನೆಯಲ್ಲಿ ಅನುದಾನವನ್ನು ಉಪಯೋಗಿಸಿದ ಬಗ್ಗೆ ವಿವರ ಪತ್ರದೊಂದಿಗೆ ಕಳುಹಿಸತಕ್ಕದ್ದು.
(ಘ) ಪ್ರತ್ಯಕ್ಷವಾಗಿ ಸರಿನೋಡುವುದು.- ಪ್ರತಿಯೊಂದು ಗ್ರಂಥಾಲಯವು ಪುಸ್ತಕಗಳ ಮತ್ತು ಲೆಕ್ಕ ಪರಿಶೋಧನೆ ಮಾಡಬೇಕಾದ ಬಿಲ್ಲುಗಳಲ್ಲಿ ಒಳಗೊಂಡ ಇತರೆ ಸಾಮಗ್ರಿಗಳನ್ನು ಪ್ರತ್ಯಕ್ಷವಾಗಿ ಸರಿನೋಡುವಿಕೆಗಾಗಿ ಲೆಕ್ಕ ಪರಿಶೋಧಕ ಅಥವಾ ಆ ಉದ್ದೇಶಕ್ಕಾಗಿ ನೇಮಕ ಮಾಡಿದ ಯಾವನೇ ಇತರ ಏಜೆಂಟನಿಗೆ ಸೌಲಭ್ಯಗಳನ್ನು ಕೊಡತಕ್ಕದ್ದು.
(ಙ) ಲೆಕ್ಕ ಪರಿಶೋಧಕನಿಗೆ ಒಪ್ಪಿಸುವುದು.- (1) ಸಂಬಂಧಪಟ್ಟ ಸ್ಥಳೀಯ ಗ್ರಂಥಾಲಯ ಪ್ರಾಧಿಕಾರದ ಗ್ರಂಥಪಾಲನು ಸ್ವೀಕರಿಸಿದ ಪ್ರಮಾಣೀಕೃತ ಬಿಲ್ಲುಗಳು ಮತ್ತು ಮಾಸಿಕ ವಿವರಪತ್ರಗಳು ಲೆಕ್ಕ ಪರಿಶೋಧನೆಗಾಗಿ ಮುಖ್ಯ ಆಧಾರವಾಗಿರತಕ್ಕದ್ದು.
(2) ಅದರದೇ ಆದ ಆದಾಯದ ಮೂಲಗಳಿಂದ ಬಂದ ಆದಾಯ ಮತ್ತು ವೆಚ್ಚಕ್ಕಾಗಿನ ಲೆಕ್ಕಪತ್ರಗಳನ್ನು ಸರ್ಕಾರವು ನಿಯಮಿಸಬಹುದಾದಂತಹ ಲೆಕ್ಕ ಪರಿಶೋಧನೆಗೆ ಪ್ರತಿ ವರ್ಷ ಗ್ರಂಥಾಲಯವು ಒಪ್ಪಿಸತಕ್ಕದ್ದು. ಈ ಲೆಕ್ಕ ಪರಿಶೋಧನೆಯ ವರದಿಯು ವಾರ್ಷಿಕ ಅನುದಾನವನ್ನು ನಿರ್ಧರಿಸುವುದಕ್ಕಾಗಿ ಆಧಾರವಾಗಿರತಕ್ಕದ್ದು.
(7) ಅನುದಾನವು ತಪ್ಪಿ ಹೋಗುವುದು.-
(ಕ) ಉಪಯೋಗಿಸುವುದಕ್ಕಾಗಿನ ಕಾಲ.- ಒಂದು ವರ್ಷಕ್ಕಾಗಿನ ಅನುದಾನವನ್ನು ಗ್ರಂಥಾಲಯವು ಆ ವರ್ಷವು ಮುಕ್ತಾಯವಾಗುವುದಕ್ಕೆ ಮುಂಚೆ ಉಪಯೋಗಿಸತಕ್ಕದ್ದು.
(ಖ) ಉಪಯೋಗಿಸದೇ ಇರುವ ಮೊಬಲಗು.- ಒಂದು ವರ್ಷಕ್ಕಾಗಿನ ಅನುದಾನದ ಯಾವುದೇ ಭಾಗವು ಆ ವರ್ಷದ ಅವಧಿಯಲ್ಲಿ ಗ್ರಂಥಾಲಯವು ಉಪಯೋಗಿಸಿಕೊಳ್ಳದೇ ಇರುವುದನ್ನು, ಮುಂದಿನ ವರ್ಷದಲ್ಲಿ ಗ್ರಂಥಾಲಯಕ್ಕೆ ಸಂದಾಯ ಮಾಡಬೇಕಾಗುವ ಅನುದಾನದಿಂದ ಕಳೆದುಕೊಳ್ಳತಕ್ಕದ್ದು.
(ಇ.ಡಿ. 26 ಎಸ್ಎಲ್ಎಸ್ 66)
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ಆರ್. ಜಯರಾಮನ್,
ಸರ್ಕಾರದ ಕಾರ್ಯದರ್ಶಿ,
ಶಿಕ್ಷಣ ಇಲಾಖೆ.