(1) ಪ್ರತಿಯೊಂದು ನಗರ ಗ್ರಂಥಾಲಯ ಪ್ರಾಧಿಕಾರದ ಮುಖ್ಯ ಗ್ರಂಥಪಾಲನು, ನಗರ ಗ್ರಂಥಾಲಯ ನಿಧಿಗೆ ಸಂಬಂಧಪಟ್ಟ ಒಂದು ಖಾತೆಯನ್ನು ಜಿಲ್ಲಾ ಖಜಾನೆ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಥವಾ ಇತರ ಯಾವುದೇ ಅನುಸೂಚಿತ ಬ್ಯಾಂಕಿನಲ್ಲಿ ತೆರೆಯತಕ್ಕದ್ದು. ಬೆಂಗಳೂರು ನಗರ ಗ್ರಂಥಾಲಯ ನಿಧಿಗಳ ಸಂದರ್ಭದಲ್ಲಿ ರಾಜ್ಯ ಹುಜೂರ್ ಖಜಾನೆಯಲ್ಲಿ ಖಾತೆಯನ್ನು ತೆರೆಯತಕ್ಕದ್ದು.
(2) 32ನೇ ಪ್ರಕರಣದ (2)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಮೊತ್ತಗಳು ಮತ್ತು ನಗರ ಗ್ರಂಥಾಲಯ ಪ್ರಾಧಿಕಾರವು ಅಥವಾ ಅದರ ಪರವಾಗಿ ಸ್ವೀಕರಿಸಿದ ಅಥವಾ ಕ್ಲೇಮು ಮಾಡಬಹುದಾದ ಇತರ ಎಲ್ಲಾ ಮೊತ್ತಗಳನ್ನು ಸದರಿ ನಿಧಿಗೆ ಜಮೆ ಮಾಡತಕ್ಕದ್ದು ಮತ್ತು ಸದರಿ ನಿಧಿಗೆ ಜಮೆ ಮಾಡಿದ ಮತ್ತು ಅದರಿಂದ ಸಂದಾಯ ಮಾಡಿದ ಎಲ್ಲಾ ಹಣಗಳ ಲೆಕ್ಕವನ್ನು ಅಂಥ ನಗರ ಗ್ರಂಥಾಲಯ ಪ್ರಾಧಿಕಾರದ ಮುಖ್ಯ ಗ್ರಂಥಪಾಲನು ಇಟ್ಟುಕೊಂಡು ಬರತಕ್ಕದ್ದು.
(3) ನಗರ ಗ್ರಂಥಾಲಯ ನಿಧಿಯಿಂದ ಮೊಬಲಗನ್ನು ನಗರ ಗ್ರಂಥಾಲಯ ಪ್ರಾಧಿಕಾರದ ಮುಖ್ಯ ಗ್ರಂಥಪಾಲನು ಅವನು ರುಜು ಮಾಡಿದ ಚೆಕ್ಕುಗಳನ್ನು ಕೊಡುವ ಮೂಲಕ ಪಡೆಯಬಹುದು.