3ನೇ ಪ್ರಕರಣದ (2)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಲಾದ ಯಾವುದೇ ನಿಕಾಯದಿಂದ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯನನ್ನಾಗಿ ಒಬ್ಬ ವ್ಯಕ್ತಿಯನ್ನು,-
(ಕ) ಸದಸ್ಯನ ಪದಾವಧಿಯು ಮುಕ್ತಾಯವಾದ ಪರಿಣಾಮವಾಗಿ, ಅಂಥ ಅವಧಿಯು ಮುಕ್ತಾಯವಾದ ದಿನಾಂಕಕ್ಕೆ ಮುಂಚೆ ಎರಡು ತಿಂಗಳು ಮೀರದಂತೆ; ಅಥವಾ
(ಖ) ಚುನಾವಣೆಯ ಮೂಲಕ ಭರ್ತಿ ಮಾಡಬೇಕಾದ ಪ್ರಕರಣದಲ್ಲಿ ಉಲ್ಲೇಖಿಸಲಾದ ಖಾಲಿ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಅಂಥ ಖಾಲಿ ಸ್ಥಾನವು ಸಂಭವಿಸಿದ ತರುವಾಯ ಕೂಡಲೇ ಆಯ್ಕೆ ಮಾಡಬೇಕಾಗಿರುವಲ್ಲಿ, ರಾಜ್ಯ ಗ್ರಂಥಪಾಲನು, ಚುನಾಯಿಸಬೇಕಾದ ವ್ಯಕ್ತಿಯು,-
(i) ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ಚುನಾಯಿಸಬೇಕಾಗಿರುವಲ್ಲಿ, ಆ ಸಭೆಯ ಕಾರ್ಯದರ್ಶಿಗೆ;
(ii) ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಿಂದ ಚುನಾಯಿಸಬೇಕಾಗಿರುವಲ್ಲಿ, ಆ ಪರಿಷತ್ತಿನ ಕಾರ್ಯದರ್ಶಿಗೆ;
(iii) ರಾಜ್ಯದಲ್ಲಿನ ಪ್ರತಿಯೊಂದು ವಿಶ್ವವಿದ್ಯಾನಿಲಯದ ಸಿಂಡಿಕೇಟಿನ ಸದಸ್ಯರಿಂದ ಚುನಾಯಿಸ ಬೇಕಾಗಿರುವಲ್ಲಿ, ಅಂಥ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರನಿಗೆ;
(iv) ಕರ್ನಾಟಕ ಗ್ರಂಥಾಲಯ ಸಂಘದ ಸದಸ್ಯರಿಂದ ಚುನಾಯಿಸಬೇಕಾಗಿರುವಲ್ಲಿ, ಅಂಥ ಸಂಘದ ಕಾರ್ಯದರ್ಶಿಗೆ;
(v) 3ನೇ ಪ್ರಕರಣದ (2)ನೇ ಉಪಪ್ರಕರಣದ (ಚ), (ಛ) ಮತ್ತು (ಜ) ಖಂಡಗಳಲ್ಲಿ ಉಲ್ಲೇಖಿಸಲಾದ ಯಾವುದೇ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಿಂದ ಚುನಾಯಿಸಬೇಕಾಗಿರುವಲ್ಲಿ, ಆ ಸಮುಚಿತ ಗ್ರಂಥಾಲಯ ಪ್ರಾಧಿಕಾರದ ಕಾರ್ಯದರ್ಶಿಗೆ - ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯರ ಪದಾವಧಿಯು ಮುಕ್ತಾಯವಾಗುವ ದಿನಾಂಕಕ್ಕೆ ಮುಂಚೆ ಮತ್ತು ಚುನಾವಣೆಯು ಯಾವುದೇ ಖಾಲಿ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಇರುವಲ್ಲಿ ಅಂಥ ಸೂಚನೆಯನ್ನು ಸ್ವೀಕರಿಸಿದ ದಿನಾಂಕದಿಂದ ಒಂದು ತಿಂಗಳನ್ನು ಮೀರದಂತೆ ವ್ಯಕ್ತಿಗಳನ್ನು ಚುನಾಯಿಸಲು ತಿಳಿಸತಕ್ಕದ್ದು.