(1) ಕಾರ್ಯದರ್ಶಿಯು, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಪ್ರತಿಯೊಂದು ಸಭೆಯ ಬಗ್ಗೆ ಸದಸ್ಯರಿಗೆ, ಪೂರ್ಣ ಹತ್ತು ದಿವಸಗಳ ನೋಟೀಸನ್ನು ಕೊಡತಕ್ಕದ್ದು ಮತ್ತು ಆ ನೋಟೀಸಿನೊಂದಿಗೆ ಸಭೆಯಲ್ಲಿ ನಡೆಸಬೇಕಾದ ವ್ಯವಹಾರವನ್ನು ಒಳಗೊಂಡ ಕಾರ್ಯಸೂಚಿ ಪತ್ರವನ್ನು ಕಳುಹಿಸತಕ್ಕದ್ದು. ಅಧ್ಯಕ್ಷನು ಕಾರ್ಯಸೂಚಿಯಲ್ಲಿ ಒಳಗೊಂಡಿರದ ವ್ಯವಹಾರದ ಯಾವುದೇ ಜರೂರು ಬಾಬನ್ನು ಸಭೆಯ ಮುಂದೆ ಇಡಬಹುದು.
(2) ಅಧ್ಯಕ್ಷನು, ವಿಶೇಷ ಸಭೆಯನ್ನು, ಸಭೆಯಲ್ಲಿ ಚರ್ಚಿಸಬೇಕಾದ ಜರೂರು ಮಹತ್ವವುಳ್ಳ ವಿಷಯಗಳನ್ನು ಬರಹದಲ್ಲಿ ವಿಶೇಷವಾಗಿ ಸೂಚಿಸಬೇಕೆಂಬ ಮತ್ತು ಅಂಥ ಕೋರಿಕೆಯು, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಇಲ್ಲದ ಸದಸ್ಯರಿಂದ ಸಮರ್ಥವಾಗಿರಬೇಕೆಂಬ ಷರತ್ತಿಗೊಳಪಟ್ಟು, ಈ ಬಗ್ಗೆ ಬರಹದಲ್ಲಿನ ಕೋರಿಕೆಯನ್ನು ಸ್ವೀಕರಿಸಿದ ತರುವಾಯ ಹದಿನೈದು ದಿವಸಗಳಿಗೆ ಹೆಚ್ಚಿಲ್ಲದ ದಿನಾಂಕಕ್ಕೆ ಕರೆಯತಕ್ಕದ್ದು.