(1) ರಾಜ್ಯ ಗ್ರಂಥಪಾಲನು ಬೆಂಗಳೂರಿನ ರಾಜ್ಯ ಹುಜೂರ್ ಖಜಾನೆಯಲ್ಲಿ ರಾಜ್ಯ ಗ್ರಂಥಾಲಯ ನಿಧಿಗೆ ಸಂಬಂಧಪಟ್ಟ ಒಂದು ಖಾತೆಯನ್ನು ತೆರೆಯತಕ್ಕದ್ದು.
(2) 33ನೇ ಪ್ರಕರಣದ (2)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಮೊತ್ತಗಳು ಮತ್ತು ರಾಜ್ಯ ಗ್ರಂಥಾಲಯ ಪ್ರಾಧಿಕಾರವು ಅಥವಾ ಅದರ ಪರವಾಗಿ ಸ್ವೀಕರಿಸಿದ ಅಥವಾ ಕ್ಲೇಮು ಮಾಡಲಾದ ಇತರ ಎಲ್ಲಾ ಮೊತ್ತಗಳನ್ನು ಸದರಿ ನಿಧಿಗೆ ಜಮೆ ಮಾಡತಕ್ಕದ್ದು ಮತ್ತು ಸದರಿ ನಿಧಿಗೆ ಜಮೆ ಮಾಡಿದ ಮತ್ತು ಅದರಿಂದ ಸಂದಾಯ ಮಾಡಿದ ಎಲ್ಲಾ ಹಣಗಳ ಲೆಕ್ಕವನ್ನು ರಾಜ್ಯ ಗ್ರಂಥಪಾಲನು ಇಟ್ಟುಕೊಂಡು ಬರತಕ್ಕದ್ದು.
(3) ರಾಜ್ಯ ಗ್ರಂಥಾಲಯ ನಿಧಿಯಿಂದ ರಾಜ್ಯ ಗ್ರಂಥಪಾಲನು ಮೊಬಲಗುಗಳನ್ನು ಅವನು ತಾನು ಸಹಿ ಮಾಡಿದ ಚೆಕ್ಕುಗಳನ್ನು ಕೊಡುವ ಮೂಲಕ ಪಡೆಯಬಹುದು.