ಕರ್ನಾಟಕ ಸರ್ಕಾರ
ಸಂಖ್ಯೆ:ಇಪಿ 32 ಟಿಪಿಯು 2021
ಕರ್ನಾಟಕ ಸರ್ಕಾರದ ಸಚಿವಾಲಯ
6ನೇ, ಮಹಡಿ, ಬಹುಮಹಡಿ ಕಟ್ಟಡ
ಬೆಂಗಳೂರು, ದಿನಾಂಕ:12-05-2022
ಅಧಿಸೂಚನೆ
ಕರ್ನಾಟಕ ಅಧಿಸೂಚನೆ ಸಂಖ್ಯೆ:ಇಡಿ 32 ಟಿಪಿಯು 2021 ದಿನಾಂಕ:12-05-2022 ಕನ್ನಡ ಅನುವಾದ ದಿನಾಂಕ:12-05-2022
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020 (2020ರ ಕರ್ನಾಟಕ ಕಾಯಿದೆ ಸಂಖ್ಯೆ 01ರ ವಿಭಾಗ 18ನೇ ಪ್ರಕರಣದ(1)ನೇ ಉಪ ಪ್ರಕರಣದ ಮೂಲಕ ಪ್ರ ದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಮಾಡಲು ಉದ್ದೇಶಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಸದರಿ ಅಧಿನಿಯಮದ 18ನೇ ಪ್ರಕರಣದ (1)ನೇ ಉಪ -ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅದರಿಂದ ಭಾದಿತರಾಗಲು ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ದಿನಾಂಕ :08-04-2022 ರಂದು ಪ್ರಕಟಿಸಿದೆ. ರಾಜ್ಯ ಪತ್ರದಲ್ಲಿ ಪ್ರ ಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಅಹ್ವಾನಿಸಿರುವುದರಿಂದ, ಸಾರ್ವಜನಿಕರಿಂದ ಸ್ವೀಕರಿಸಲಾದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರವು ಪರಿಗಣಿಸಿದೆ;
ಈಗ, ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಪ್ರಾಂಶುಪಾಲರುಗಳ ಮತ್ತು ಉಪನ್ಯಾಸಕರುಗಳ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2022 ( ಕರ್ನಾಟಕ ಕಾಯಿದೆ ಸಂಖ್ಯೆ 04/2020)ರ ವಿಭಾಗ 18ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿರುತ್ತದೆ, ಎಂದರೆ: