(1) ಭಾಗ 10 ರಲ್ಲಿ ಸ್ಪಷ್ಟಪಡಿಸಿರುವ ಶರತ್ತುಗಳ ಆಧಾರದನ್ವಯ ತಾರ್ಕಿಕ ವರ್ಗಾವಣೆ ಮತ್ತು ಆದ್ಯತೆಯ ಕೋರಿಕೆ ವರ್ಗಾವಣೆ ಅಡಿಯಲ್ಲಿನ ವಿನಾಯಿತಿಗಳನ್ನು ನೀಡಲಾಗುವುದು.
(2) ವಿನಾಯಿತಿ ಬಯಸಿ ಸಲ್ಲಿಸುವ ಪ್ರಮಾಣಪತ್ರ /ದಾಖಲೆಗಳನ್ನಾದರಿಸಿ ನೀಡುವ ಆದ್ಯತೆಗಳು ಈ ಕೆಳಗಿನಂತಿರುತ್ತವೆ. ಅವುಗಳೆಂದರೆ
| ಕ್ರ.ಸಂ | ಬಯಸಿದ ವಿನಾಯಿತಿ ಅಥವಾ ಆದ್ಯತೆ (ಹಕ್ಕುಕೋರಿಕೆ) | ಸಂಬಂದಪಟ್ಟ ದಾಖಲೆಗಳು |
| 1 | ಶೇಕಡ 40 / ಅದಕ್ಕೂ ಅಧಿಕ ಶಾರೀರಿಕವಾಗಿ ಅಸಮರ್ಥರಾದ , ಮಾರಣಾಂತಿಕ ಮತ್ತು ಗಂಭೀರ ಹಾಗು ತಾಲ್ಲೂಕಿನಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾಯಿಲೆಗಳಿಂದ ಬಳಲುತ್ತಿರುವ ಪ್ರಾಂಶುಪಾಲರು ಅಥವಾ ಉಪನ್ಯಾಸಕರು ಅಥವಾ ಸಂಗಾತಿಗಳು ಅಥವಾ ನೌಕರರ ಮಗು/ಮಕ್ಕಳು | ಜಿಲ್ಲಾ ವೈದ್ಯಕೀಯ ಮಂಡಳಿ ನೀಡಿದ ಪ್ರಮಾಣ ಪತ್ರ |
| 2 | ವಿಧವೆ ಅಥವಾ ವಿಧುರ ಪ್ರಾಂಶುಪಾಲರು / ಉಪನ್ಯಾಸಕರು ಸೇರಿದಂತೆ ಅವಲಂಬಿತ ಮಕ್ಕಳು | ಸಂಗಾತಿಯ ಮರಣ ಪ್ರಮಾಣಪತ್ರ ಮತ್ತು ಮರುಮದುವೆಯಾಗದಿರುವ ಬಗ್ಗೆ ಮ್ಯಾಜಿಸ್ಟ್ರೇಟ್ರವರು ನೀಡಿದ ಅಫಿಡವಿಟ್ |
| 3 | ವಿಚ್ಛೇದನೆ ಪಡೆದ ಪ್ರಾಂಶುಪಾಲರು ಉಪನ್ಯಾಸಕರು ಅವಲಂಬಿತ ಮಕ್ಕಳು | ಅವಲಂಬಿತ ಮಕ್ಕಳ ಬಗ್ಗೆ ಮತ್ತು ಮರುಮದುವೆಯಾಗಿಲ್ಲದಿರುವ ಬಗ್ಗೆ ನ್ಯಾಯಾಲಯದ ತೀರ್ಪಿನ ಪ್ರತಿ ಮತ್ತು ಮ್ಯಾಜಿಸ್ಟ್ರೇಟ್ರವರ ಅಫಿಡವಿಟ್ ಮುಸ್ಲಿಮರ ವಿಷಯದಲ್ಲಿ ಮುಸ್ಲಿಮರು ಖುಲಾ-ನಾಮಾ ಅಥವಾ ತಲಾಖ್ ನಾಮಾ ಅಥವಾ ತಲಾಖ್ -ಎ- ಮುಬಾರತ್ ಬಗ್ಗೆ ಮಸ್ಜಿ ದ್ ಸಮಿತಿಯ ದಾಖಲೆ ಮತ್ತು ಅವಲಂಬಿತ ಮಕ್ಕಳ ಬಗ್ಗೆ ಹಾಗು ಮರುಮದುವೆಯಾಗಿಲ್ಲದಿರುವ ಬಗ್ಗೆ ಮ್ಯಾಜಿಸ್ಟ್ರೇಟ್ರವರ ಅಫಿಡವಿಟ್ |
| 4 | ಭಾರತೀಯ ರಕ್ಷಣಾ ಪಡೆಗಳ ಅಥವಾ ಪ್ಯಾರಾ ಮಿಲಿಟರಿ ಪಡೆಗಳ ಸೈನಿಕರಾಗಿದ್ದು ಶಾಶ್ವತವಾಗಿ ಅಂಗವಿಕಲರಾಗಿರುವ ಅಥವಾ ಮೃತ ಸಂಗಾತಿ ಪ್ರಾಂಶುಪಾಲರು/ ಉಪನ್ಯಾಸಕರು | ನಿರ್ದೇಶಕರು, ಸೈನಿಕ ಕಲ್ಯಾಣ ಮಂಡಳಿ ಇವರು ಅಥವಾ ಕಮ್ಯಾಂಡಿಂಗ್ ಅಧಿಕಾರಿ ನೀಡುವ ಪ್ರಮಾಣ ಪತ್ರ |
| 5 | ಕೇಂದ್ರ ಸರ್ಕಾರಿ ಅಥವಾ ರಾಜ್ಯ ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಯ ಉದ್ಯೋಗಿಯ ಸಂಗಾತಿಯಾದ ಪ್ರಾಂಶುಪಾಲರು/ಉಪನ್ಯಾಸಕರು | ನೇಮಕಾತಿ ಪ್ರಾಧಿಕಾರದಿಂದ ನೀಡಿದ ಪ್ರಮಾಣಪತ್ರ |
| 6 | ಐವತ್ತು ವರ್ಷ ವಯಸ್ಸಿನ ಮಹಿಳಾ ಪ್ರಾಂಶುಪಾಲರು / ಉಪನ್ಯಾಸಕರು ಮತ್ತು ಐವತ್ತೈದು ವರ್ಷ ವಯಸ್ಸಿನ ಪುರುಷ ಪ್ರಾಂಶುಪಾಲರು / ಉಪನ್ಯಾಸಕರು | ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ (ವಿದ್ಯಾರ್ಥಿ ಸಾಧನಾ ಪಥ SATS) ಅಥವಾ ಇಲಾಖಾ ಜಾಲತಾಣದಲ್ಲಿ ಪರಿಶೀಲಿಸುವುದು |
| 7 | ಗರ್ಭಿಣಿ ಅಥವಾ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಹೊಂದಿರುವ ಪ್ರಾಂಶುಪಾಲರು / ಉಪನ್ಯಾಸಕರು | ಜಿಲ್ಲಾ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ |