ಕೋರಿಕೆ ವರ್ಗಾವಣೆಗಾಗಿ ಸ್ವೀಕರಿಸಿದ ಅರ್ಜಿಗಳ ಆಧಾರದ ಮೇಲೆ , ವರ್ಗಾವಣೆ ಕಾಯಿದೆಯ ಭಾಗ 10 ರನ್ವಯ ಮತ್ತು ಸಾಮಾನ್ಯ ವರ್ಗದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವಿವಿಧ ವರ್ಗಗಳಿಗೆ ಅಂತಿಮ ಆದ್ಯತೆಯ ಪಟ್ಟಿಯನ್ನು ಮತ್ತು ಸಾಮಾನ್ಯ ವರ್ಗದ ಪಟ್ಟೆಯನ್ನು ಸಕ್ಷಮ ಪ್ರಾಧಿಕಾರವು ಸಿದ್ದಪಡಿಸಿ ಇಲಾಖಾ ವರ್ಗಾವಣೆ ತಾಣ/ಪೋರ್ಟಲ್ನಲ್ಲಿ ಪ್ರಕಟಿಸುತ್ತದೆ
(ii) ವರ್ಗಾವಣೆ ಕಾಯಿದೆಯ ಭಾಗ 10 ರನ್ವಯ ಆದ್ಯತೆಗಾಗಿ ಸೂಚಿಸಲಾದ ಷರತ್ತುಗಳ ಆಧಾರದ ಮೇಲೆ ಪ್ರತಿವರ್ಗದೊಳಗೆ ಆದ್ಯತೆಯನ್ನು ನಿರ್ಧರಿಸಲಾಗುತ್ತದೆ.
(iii) ಭಾಗ 10 ರ ಷರತ್ತು (v) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಕೋರಿಕೆ ವರ್ಗಾವಣೆಗಳ ಒಟ್ಟು ಸಂಖ್ಯೆ ಮತ್ತು ಸಾಮಾನ್ಯ ವರ್ಗಾವಣೆಗಳು ನಿಯಮ 5 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವರ್ಗಾವಣೆ ಮಿತಿಯೊಳಗೆ ಇರಬೇಕು
(iv) ವರ್ಗಾವಣೆಗಳ ಸಮಾಲೋಚನೆಯನ್ನು /ಕೌನ್ಸೆಲಿಂಗ್ ಅನ್ನು ವರ್ಗಾವಣೆ ಕಾಯ್ದೆ ಭಾಗ 10 ರ ಉಪ -ವಿಭಾಗ (1) ರ (i) ರಿಂದ (v)ರ ಅನುಕ್ರಮದಲ್ಲಿ ಮತ್ತು ಸಾಮಾನ್ಯ ವರ್ಗವನ್ನು ತೆಗೆದುಕೊಳ್ಳಲಾಗುತ್ತದೆ.
(v) ವರ್ಗಾವಣೆಗಳ ಸಮಾಲೋಚನೆಯಲ್ಲಿ ಹಾಜರಾಗುವ ಪ್ರಾಂಶುಪಾಲರು ಅವರು /ಅವಳು ಕಲಿಸಿದ ವಿಷಯವು ಇರುವಂತಹ ಕಾಲೇಜಿನಲ್ಲಿ ಖಾಲಿ ಹುದ್ದೆಯನ್ನು ಆಯ್ಕೆ ಮಾಡಬಹುದು . ಅಂತಹ ಖಾಲಿ ಹುದ್ದೆ ಲಭ್ಯವಿಲ್ಲದಿದ್ದರೆ , ಅವನು/ಅವಳು ಯಾವುದೇ ಖಾಲಿ ಹುದ್ದೆಯನ್ನು ಆಯ್ಕೆ ಮಾಡಬಹುದು. ವರ್ಗಾವಣೆಗಳ ಸಮಾಲೋಚನೆಯಲ್ಲಿ ಹಾಜರಾಗುವ ಉಪನ್ಯಾಸಕರು ಯಾವುದೇ ಖಾಲಿ ಹುದ್ದೆಯನ್ನು ಆಯ್ಕೆ ಮಾಡಬಹುದು . ವರ್ಗಾವಣೆ ಮಾಡುವ ಪ್ರಾಧಿಕಾರವು ವರ್ಗಾವಣೆಗೆ ಸಮಾಲೋಚನೆಯ ಕೇಂದ್ರದಲ್ಲಿಯೇ /ಸ್ಥಳದಲ್ಲಿಯೇ ಕಂಪ್ಯೂಟರ್ ಮುದ್ರಿತ ವರ್ಗಾವಣೆ ಆದೇಶವನ್ನು ನೀಡಬಹುದು . ಯಾವುದೇ ಸೂಕ್ತ ವಾದ ಖಾಲಿ ಹುದ್ದೆ ಲಭ್ಯವಿಲ್ಲದಿದ್ದರೆ ಪ್ರಾಂಶುಪಾಲರು / ಉಪನ್ಯಾಸಕರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲಿ ಮುಂದುವರಿಯಲು ಆಯ್ಕೆ ಮಾಡಬಹುದು . ಈ ಕುರಿತು ಪ್ರಾಂಶುಪಾಲರು / ಉಪಾನ್ಯಾಸಕರಿಂದ ಮುಚ್ಚಳಿಕೆಯನ್ನು ವರ್ಗಾವಣೆ ಪ್ರಾಧಿಕಾರವು ವರ್ಗಾವಣೆಗಳ ಸಮಾಲೋಚನೆಯ ಕೇಂದ್ರದಲ್ಲಿಯೇ/ಸ್ಥಳದಲ್ಲಿಯೇ ತೆಗೆದುಕೊಳ್ಳುತ್ತದೆ . ಆದಾಗ್ಯೂ, ಖಾಲಿ ಹುದ್ದೆಯನ್ನು ಒಮ್ಮೆ ಆಯ್ಕೆ ಮಾಡಿದರೆ ಅದನ್ನು ಮಾರ್ಪಡಿಸಲಾಗುವುದಿಲ್ಲ ಅಥವಾ ರದ್ದುಗೊಳಿಸಲಾಗುವುದಿಲ್ಲ.
(vi) ಸಮಾಲೋಚನೆ/ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಪ್ರತ್ಯೇಕವಾಗಿ ನಡೆಸಲಾಗುವುದು.