(ಅ) ಪ್ರಾಂಶುಪಾಲರು / ಉಪನ್ಯಾಸಕರ ವರ್ಗಾವಣೆಗೆ ಅರ್ಹತಾದಾಯಕ ಅಂಕಗಳು (ಸಿ ವಲಯದಲ್ಲಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 3) + ( ಬಿ ವಲಯದಲ್ಲಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 2) + ( ಎ ವಲಯದಲ್ಲಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 1) + (ಪ್ರಸ್ತುತ ಕಾಲೇಜಿನಲ್ಲಿ 3 ವರ್ಷಗಳಿಗೂ ಮೀರಿ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 1)
(ಆ) ಉಪನ್ಯಾಸಕರ ವರ್ಗಾವಣೆಗೆ ಅರ್ಹತಾದಾಯಕ ಅಂಕಗಳು (ಸಿ ವಲಯದಲ್ಲಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 3) + ( ಬಿ ವಲಯದಲ್ಲಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 2) + (ಎ ವಲಯದಲ್ಲಿ ಸೇವೆ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 1) + (ಪ್ರಸ್ತುತ ಕಾಲೇಜಿನಲ್ಲಿ 3 ವರ್ಷಗಳಿಗೂ ಮೀರಿ ಸಲ್ಲಿಸಿದ ಒಟ್ಟು ವರ್ಷಗಳ ಸಂಖ್ಯೆ X 1) ಸೂಚನೆ: ಆರು ತಿಂಗಳು (180 ದಿನಗಳು) ಮತ್ತು ಹೆಚ್ಚಿನ ಸೇವೆಯನ್ನು ಒಂದು ಪೂರ್ಣ ವರ್ಷ ಎಂದು ಹಾಗು ಆರು ತಿಂಗಳು (180 ದಿನಗಳು) ಕಡಿಮೆ ಅವಧಿಯ ಸೇವೆಯನ್ನು ಶೂನ್ಯ ಎಂದು ಪರಿಗಣಿಸಲಾಗುತ್ತದೆ.
(ಇ) ವೇತನ ಸೆಳೆದು ವಿತರಣೆ ಮಾಡುವ ಅಧಿಕಾರಿಯು (ಇನ್ನು ಮುಂದೆ DDO ಎಂದು SATS ನಲ್ಲಿ ಉಲ್ಲೇಖಿಸಲಾಗುತ್ತದೆ ) ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ (ವಿದ್ಯಾರ್ಥಿ ಸಾಧನಾ ಪಥ SATS ) ಅಥವಾ ಇಲಾಖಾ ಜಾಲತಾಣದಲ್ಲಿ ಕಳೆದ ವರ್ಷದ ಡಿಸೆಂಬರ್ವರೆಗೆ ನಮೂದಿಸಿರುವ ಸೇವಾ ವಿವರಗಳ ಆಧಾರದ ಮೇಲೆ ಅರ್ಹತಾದಾಯಕ ಅಂಕಗಳನ್ನು ಲೆಕ್ಕ ಹಾಕಲಾಗುತ್ತದೆ.
(ಈ) ಯಾವುದೇ ಇಬ್ಬರು ಪ್ರಾಂಶುಪಾಲರು / ಇಬ್ಬರು ಉಪನ್ಯಾಸಕರ ಅರ್ಹತಾದಾಯಕ ಅಂಕಗಳು ಒಂದೇ ಆಗಿದ್ದರೆ , ಅವರು ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ ಹಿರಿತನವನ್ನು ನಿರ್ಧರಿಸಲಾಗುತ್ತದೆ . ಒಂದು ವೇಳೆ ಸೇವೆಗೆ ಸೇರಿದ ದಿನಾಂಕ (ಪ್ರಾಂಶುಪಾಲರು / ಉಪನ್ಯಾಸಕರಾಗಿ) ಸಹ ಒಂದೇ ಆಗಿದ್ದರೆ ಅಂತಹವರ ಹಿರಿತನವನ್ನು ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
(ಉ) ಎಲ್ಲಾ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ತಾತ್ಕಾಲಿಕ ಅರ್ಹತಾದಾಯಕ ಅಂಕಗಳನ್ನು ಪ್ರತಿ ವರ್ಷ ಜನವರಿಯ ಎರಡನೇ ಶುಕ್ರವಾರ ತನ್ನ ವೆಬ್ ಸೈಟ್ನಲ್ಲಿ ಇಲಾಖೆಯು ಜಂಟಿ ನಿರ್ದೇಶಕರ ಮುದ್ರೆ (ಆಡಳಿತ) ಮತ್ತು ಸಹಿಯೊಂದಿಗೆ ಪ್ರಕಟಿಸುವುದು. ಅರ್ಹತಾದಾಯಕ ಅಂಕಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅಂತಹ ಎಲ್ಲಾ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತಮ್ಮ ಸೇವಾ ವಿವರಗಳ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ . ತಿದ್ದುಪಡಿಗಾಗಿ ಅರ್ಜಿಯನ್ನು ಸಂಬಂಧಪಟ್ಟ ವೇತನ ಸೆಳೆದು ವಿತರಣೆ ಮಾಡುವ ಅಧಿಕಾರಿಗೆ ಸಲ್ಲಿಸಬೇಕು . ಪ್ರಾಂಶುಪಾಲರು / ಉಪನ್ಯಾಸಕರ ಸಂದರ್ಭದಲ್ಲಿ ಅಂತಹ ಅರ್ಜಿಗಳನ್ನು ಆಯಾ ಉಪನಿರ್ದೇಶಕರ ಮೂಲಕ ಸಲ್ಲಿಸುವುದು . ಯಾವುದೇ ಪ್ರಾಂಶುಪಾಲರು / ಉಪನ್ಯಾಸಕರು ಇತರ ಪ್ರಾಂಶುಪಾಲರು / ಉಪನ್ಯಾಸಕರ ಅರ್ಹತಾದಾಯಕ ಅಂಕಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು . ತಿದ್ದುಪಡಿ ಅಥವಾ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಆ ವರ್ಷದ ಜನವರಿ 31 ಅಂತಿಮ ದಿನವಾಗಿರುತ್ತದೆ. ಅಂತಿಮ ದಿನಾಂಕದ ನಂತರ ತಿದ್ದುಪಡಿ ಅಥವಾ ಆಕ್ಷೇಪಣೆಗಾಗಿ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
(ಊ) ಜಂಟಿ ನಿರ್ದೇಶಕರ ಶ್ರೇಣಿ (ಆಡಳಿತ) ಅಥವಾ ಉಪ ನಿರ್ದೇಶಕರ ಶ್ರೇಣಿಗೆ ಕಡಿಮೆಯಿಲ್ಲದ ಯಾವುದೇ ಅಧಿಕಾರಿಯು ತಿದ್ದುಪಡಿ ಅಥವಾ ಆಕ್ಷೇಪಣೆಯ ಪ್ರತಿ ಅರ್ಜಿಯನ್ನು ಪರಿಶೀಲಿಸಿ ಮತ್ತು ಸೂಕ್ತ ಸಮರ್ಥನೆಗಳೊಂದಿಗೆ ಅರ್ಜಿಯನ್ನು ಮಾನ್ಯ ಮಾಡುವ ಅಥವಾ ತಿರಸ್ಕರಿಸುವ ಮೂಲಕ ಅಗತ್ಯ ಆದೇಶವನ್ನು ಇಲಾಖೆಯ ಜಾಲತಾಣದಲ್ಲಿ ಫೆಬ್ರವರಿ 15ರೊಳಗೆ ಪ್ರಕಟಿಸುವುದು.
(ಋ) ಇದಾದ ನಂತರ ಮಾನ್ಯ ಜಂಟಿ ನಿರ್ದೇಶಕರು (ಆಡಳಿತ) ಅಂತಿಮ ಅರ್ಹತಾದಾಯಕ ಅಂಕಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸುವುದು, ಅಂತಿಮ ಅರ್ಹತಾದಾಯಕ ಅಂಕಗಳನ್ನು ಪ್ರಕಟಿಸಿದ ನಂತರ ವರ್ಗಾವಣೆ ಪ್ರಕ್ರಿಯೆಯು ಪೂರ್ಣಗೊಳ್ಳುವವರೆ ಯಾವುದೇ ಬದಲಾವಣೆಯನ್ನು ಮಾಡಲಾಗುವುದಿಲ್ಲ.
(ಎ) ಮೇಲಿನ ಪ್ರಕ್ರಿಯೆಯು ಅನಿವಾರ್ಯ ಕಾರಣಗಳಿಂದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಪೂರ್ಣಗೊಳ್ಳದಿದ್ದರೆ, ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ಅದನ್ನು ಪೂರ್ಣಗೊಳಿಸುವುದು.