(i) ಜಂಟಿ ನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ವರ್ಗಾವಣೆ ಅರ್ಜಿ ಸಲ್ಲಿಸಲು ನೀಡಿದ್ದ ಅಂತಿಮ ದಿನದ ನಂತರ ಆದ್ಯತೆ ಅಥವಾ ವಿನಾಯಿತಿಯ ಪ್ರತಿ ಅರ್ಜಿಯನ್ನು ಪರಿಶೀಲಿಸುತ್ತಾರೆ.
(ii) ಜಂಟಿ ನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ನಿಯಮ 11 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳ ಆಧಾರದ ಮೇಲೆ ಆದ್ಯತೆಯ ಅಥವಾ ವಿನಾಯಿತಿಯ ಅರ್ಹ ಪ್ರಕರಣಗಳ ತೀರ್ಮಾನಕ್ಕೆ ಬರುತ್ತಾರೆ.
(iii) ಜಂಟಿ ನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ದಾಖಲೆಗಳ ಸತ್ಯಾಸತ್ಯತೆ ಅಥವಾ ನೈಜತೆ ಬಗ್ಗೆ ಯಾವುದೇ ಸಂದೇಹಗಳಿದ್ದರೆ, ಸಕ್ಷಮ ಪ್ರಾಧಿಕಾರದೊಂದಿಗೆ ಪರಿಶೀಲಿಸುವುದು.
(iv) ಜಂಟಿ ನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ಆನ್ಲೈನ್ನಲ್ಲಿ ಹಾಗೂ ಕಛೇರಿ ಸೂಚನಾ ಫಲಕದಲ್ಲಿ
(ಎ) ಅರ್ಹ ಆದ್ಯತೆ ಪಟ್ಟಿಯ ಕರಡನ್ನು ಪ್ರಕಟಿಸುವುದು.
(ಬಿ) ಆದ್ಯತೆ ಪಡೆಯುವಲ್ಲಿ ಅನರ್ಹಗೊಂಡವರ ಪಟ್ಟಿಯ ಕರಡನ್ನು ಸಕಾರಣಗಳೊಂದಿಗೆ ಪ್ರಕಟಿಸುವುದು;
(ಸಿ) ವಿನಾಯಿತಿ ಪಡೆದ ಅರ್ಹರ ಪಟ್ಟೆಯ ಕರಡನ್ನು ಪ್ರಕಟಿಸುವುದು . ವಿನಾಯಿತಿ ಪಡೆಯುವಲ್ಲಿ ಅನರ್ಹಗೊಂಡವರ ಪಟ್ಟೆಯ ಕರಡನ್ನು ಸಕಾರಣಗಳೊಂದಿಗೆ ಪ್ರಕಟಿಸುವುದು,
(ಇ) ಯಾವುದೇ ಪ್ರಾಂಶುಪಾಲರು / ಉಪನ್ಯಾಸಕರು ಆಕ್ಷೇಪಣೆಗಳನ್ನು ಸಲ್ಲಿಸಲು ಐದು ಕೆಲಸದ ದಿನಗಳನ್ನು ನೀಡುವುದು,
(ಎಫ್) ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಅವರು ಆಕ್ಷೇಪಣೆಗಳನ್ನು ಆಲಿಸಲು ಮುಕ್ತ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿ ಪ್ರಕಟಿಸುವುದು ಮತ್ತು
(ಜಿ) ಐದು ಕೆಲಸದ ದಿನಗಳ ಗಡುವಿನ ನಂತರ ಪ್ರಾಂಶುಪಾಲರು/ ಉಪನ್ಯಾಸಕರ ಅರ್ಹತಾದಾಯಕ ಮೇಲೆ ಅಂಕಗಳ ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.
(v) ಅರ್ಹ ಅಥವಾ ಅನರ್ಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಯಾವುದೇ ಪ್ರಾಂಶುಪಾಲರು / ಉಪನ್ಯಾಸಕರು ಸೂಕ್ತ ದಾಖಲೆಗಳೊಂದಿಗೆ ಆನ್ ಲೈನ್ ಆಕ್ಷೇಪಣೆಯನ್ನು ಸಲ್ಲಿಸಬಹುದು.
(vi) ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಅಥವಾ ಜಂಟಿ ನಿರ್ದೇಶಕರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿ .ಎಲ್ಲಾ ಆನ್ ಲೈನ್ ಆಕ್ಷೇಪಣೆಗಳನ್ನು ಪರಿಶೀಲಿಸಬೇಕು ಮತ್ತು ಅವುಗಳನ್ನು 'ಮುಕ್ತ ಆಲಿಕೆ 'ಯ ದಿನಾಂಕದಂದು ಆಲಿಸಿ ಮತ್ತು ಮುಕ್ತ ಆದೇಶಗಳನ್ನು ನೀಡಬೇಕು. ಮತ್ತು ಈ ಆದೇಶಗಳನ್ನು ಇಲಾಖೆಯ ಜಾಲತಾಣದ ವರ್ಗಾವಣೆ ತಾಣದಲ್ಲಿ (ಪೋರ್ಟಲ್ ನಲ್ಲಿ) ಮತ್ತು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು.
(vii)ಈ ಆದೇಶಗಳನ್ನು ಪ್ರಕಟಿಸಿದ ನಂತರ ಜಂಟಿ ನಿರ್ದೇಶಕರು (ಆಡಳಿತ) (ಎ)ಅಂತಿಮ ಆದ್ಯತಾ ಪಟ್ಟೆ ಮತ್ತು (ಬಿ)ಅಂತಿಮ ವಿನಾಯಿತಿ ಪಟ್ಟೆ, ಪ್ರಕಟಿಸಬೇಕು;
(viii) ಈ ಆದೇಶದಿಂದ ಬಾಧಿತರಾದ ಯಾವುದೇ ಪ್ರಾಂಶುಪಾಲರು / ಉಪನ್ಯಾಸಕರು ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ ಮೂರು ಕೆಲಸದ ದಿನಗಳೊಳಗೆ ಕಾಯ್ದೆ ಭಾಗ 9 ರ ಪ್ರಕಾರ ಕುಂದುಕೊರತೆ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದು .