ಕರ್ನಾಟಕ ನಾಗರೀಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ಎರಡನೇ ತಿದ್ದುಪಡಿ) ಕಾಯಿದೆ, 2021 ದಿನಾಂಕ 18-01-2022 (ಇನ್ನು ಮುಂದೆ 2022 ಸುಗ್ರೀವಾಜ್ಞೆ (ಆರ್ಡಿನೆನ್ಸ್) 6 ಎಂದು ಕರೆಯಲಾಗುತ್ತದೆ), ಅನ್ವಯ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಮಾಡುವುದಕ್ಕೆ ಮೊದಲು ದಿನಾಂಕ 18-01-2022 ರ ಸುಗ್ರೀವಾಜ್ಞೆಯಲ್ಲಿ ವಿವರಿಸಿದ ಸೂಚನೆಗಳನ್ವಯ ವಿಶೇಷ ಸಮಾಲೋಚನಾ ವರ್ಗಾವಣೆಯನ್ನು ನಡೆಸಬಹುದು . 2018-19ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ ಆಧಾರದ ಮೇಲೆ ವರ್ಗವಾಗಿ ವರದಿ ಮಾಡಿಕೊಂಡಿರುವ ಉಪನ್ಯಾಸಕರು ಘಟಕದೊಳಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬಹುದು. ಇತರ ಎಲ್ಲಾ ರೀತಿಯ ವರ್ಗಾವಣೆಗಳಿಗೆ ಮೊದಲು ಉಪನ್ಯಾಸಕರು ಖಾಲಿ ಹುದ್ದೆಗಳ ಲಭ್ಯತೆಗೆ ಒಳಪಟ್ಟು ಜೇಷ್ಠತಾ ಘಟಕದೊಳಗೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಒಂದು ಬಾರಿ ಈಕೆಳಗಿನಂತೆ ಅವಕಾಶ ನೀಡಬೇಕು;
-
2018-19 ರಲ್ಲಿ ಕಡ್ಡಾಯ ವರ್ಗಾವಣೆಯನ್ನು ನಡೆಸಿದ ಪ್ರಾಧಿಕಾರವು ಪುಸ್ತುತ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಡೆಸುವುದು.
-
ವರ್ಗಾವಣೆ ನಿಯಂತ್ರಣಾಧಿಕಾರಿ ವರ್ಗಾವಣೆ ಸಮಾಲೋಚನಾ ವೇಳಾಪಟ್ಟಿ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸುವುದು.
-
ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು, ವಿಶೇಷ ಸಮಾಲೋಚನಾ ವರ್ಗಾವಣೆಗೆ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸುವುದು.
-
ನಂತರ, 2018-19ರ ಕಡ್ಡಾಯ ವರ್ಗಾವಣೆಯಲ್ಲಿ ಬಾಧಿತ ಉಪನ್ಯಾಸಕರಿಂದ ವಿಶೇಷ ಸಮಾಲೋಚನಾ ವರ್ಗಾವಣೆಗೆ 2022 ರ ಅಧ್ಯಾದೇಶ 6 ರನ್ವಯ ಆನ್ ಲೈನ್ ಅರ್ಜಿಗಳನ್ನು, ಆಹ್ವಾನಿಸಬಹುದು.
-
ಬಾಧಿತ ಉಪನ್ಯಾಸಕರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು .
-
ಹೀಗೆ ಆನ್ ಲೈನ್ನಲ್ಲಿ ಸ್ವೀಕರಿಸಿದ ಅರ್ಜಿಗಳನ್ನು 2018-19ರ ಕೌನ್ಸೆಲಿಂಗ್ ಆದೇಶಕ್ಕೆ ಸಂಬಂಧಿಸಿದ ನಿಯಮಗಳ ಆಧಾರದ ಮೇಲೆ ಅವರ ಸೇವಾ ಜೇಷ್ಠತೆಯ ಅನುಸಾರ ಕ್ರಮವಾಗಿರಿಸಿ ಆಕ್ಷೇಪಣೆಗಳನ್ನು ಸ್ವೀಕರಿಸಿ ಆನಂತರ ಅಂತಿಮಗೊಳಿಸಬೇಕು .
-
ಜೇಷ್ಠತಾ ಪಟ್ಟಿಯಲ್ಲಿರುವ ಕ್ರ ಮಸಂಖ್ಯೆಯ ಆಧಾರದ ಮೇಲೆ ಬಾಧಿತ ಉಪನ್ಯಾಸಕರಿಗೆ ಸಮಾಲೋಚನಾ ವರ್ಗಾವಣೆ ಮಾಡಬೇಕು . ಉಪನ್ಯಾಸಕರಿಗೆ ಹಿರಿತನದ ಘಟಕದೊಳಗೆ ಸ್ಥಳವನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕು.