ಕರಡು ಪಟ್ಟಿಯ ಪ್ರಕಟಣೆ , ತಾರ್ಕಿಕ ವರ್ಗಾವಣೆಯ ಅಡಿಯಲ್ಲಿ ವರ್ಗಾವಣೆ ಮಾಡಬೇಕಾದ ಉಪನ್ಯಾಸಕರ ಕರಡು ಪಟ್ಟಿಯನ್ನು ನಿರ್ದೇಶಕರು , ಪದವಿ ಪೂರ್ವ ಶಿಕ್ಷಣ ಇಲಾಖೆ, ಇವರು ಪ್ರಕಟಿಸವುದು.
(i) ತಾರ್ಕಿಕ ವರ್ಗಾವಣೆಯ ಅಡಿಯಲ್ಲಿ ವರ್ಗಾವಣೆಗೊಳ್ಳುವ ಉಪನ್ಯಾಸಕರ ಕರಡು ಪಟ್ಟಿಯನ್ನು ಸಿದ್ಧಪಡಿಸುವಾಗ , ಕಾಲೇಜಿನಲ್ಲಿ ಒಂದು ವಿಷಯದ ಹುದ್ದೆಯು ಅಧಿಕವಾಗಿದ್ದರೆ, ಅಂತಹ ಹುದ್ದೆಗೆ ಆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ವಿಷಯದ ಹಿರಿಯ ಉಪನ್ಯಾಸಕರನ್ನು ಸೇರಿಸಲಾಗುತ್ತದೆ.