(1) ತರ್ಕಬದ್ದಗೊಳಿಸುವಿಕೆಯ ಅಡಿಯಲ್ಲಿ ಉಪನ್ಯಾಸಕರ ವರ್ಗಾವಣೆಗೆ ಆದ್ಯತೆಯ ಕ್ರಮವನ್ನು ಅನುಸರಿಸುವುದು.
(2) ತರ್ಕಬದ್ಧತೆಯ ಅಂತಿಮ ಪಟ್ಟಿಯಲ್ಲಿರುವ ಉಪನ್ಯಾಸಕರನ್ನು ಸಿ ವಲಯದಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳಿಗೆ ವರ್ಗಾಯಿಸಲಾಗುತ್ತದೆ . ಯಾವುದೇ ಉಪನ್ಯಾಸಕರು ಖಾಲಿ ಹುದ್ದೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಅಥವಾ ವರ್ಗಾವಣೆ ಪ್ರಕ್ರಿಯೆಯಿಂದ ದೂರವಿದ್ದರೆ, ಸಮಾಲೋಚನಾ ವರ್ಗಾವಣೆ (ಕೌನ್ಸೆಲಿಂಗ್) ಪ್ರಕ್ರಿಯೆ ಮುಗಿದ ನಂತರ ವರ್ಗಾವಣೆ ಪ್ರಾಧಿಕಾರವು ಅಂತಹ ಉಪನ್ಯಾಸಕರನ್ನು ನೆಪಮಾತ್ರ (ಡಮ್ಮಿ) ಸಮಾಲೋಚನಾ ವರ್ಗಾವಣೆ ಮೂಲಕ ವರ್ಗಾಯಿಸುತ್ತದೆ.
(3) ಗಂಭೀರ ಅನಾರೋಗ್ಯ ಅಥವಾ ದೈಹಿಕ ಅಸಾಮರ್ಥ್ಯತೆಯ ಉಪನ್ಯಾಸಕರನ್ನು ಹೆಚ್ಚುವರಿ ಎಂದು ಗುರುತಿಸಿದರೆ , ಅಂತಹ ಉಪನ್ಯಾಸಕರನ್ನು ವರ್ಗಾವಣೆ ಮಾಡುವಾಗ ವರ್ಗಾವಣೆ ಮಾಡುವ ಪ್ರಾಧಿಕಾರವು ಅವರಿಗೆ ಅರ್ಹತಾ ಅಂಕಗಳನ್ನು ಲೆಕ್ಕಿಸದೆ ವರ್ಗಾವಣೆಯಲ್ಲಿ ಮೊದಲ ಆದ್ಯತೆಯನ್ನು ನೀಡುವುದು.