ಸಾಮಾನ್ಯ ವರ್ಗಾವಣೆಗಳು ಪೂರ್ಣಗೊಂಡ ನಂತರ , ಯಾವುದೇ ಉಪನ್ಯಾಸಕರು ಸಮಾಲೋಚನಾ ವರ್ಗಾವಣೆ/ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳದಿದ್ದಲ್ಲಿ ಮತ್ತು ಅದನ್ನು ವಿದ್ಯಾರ್ಥಿ ಉಪನ್ಯಾಸಕರ ಅನುಪಾತ ಮತ್ತು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಭರ್ತಿ ಮಾಡ ಬೇಕಾಗುತ್ತದೆ. ರಾಜ್ಯ ಸರ್ಕಾರವು ಕನಿಷ್ಟ ಸೇವಾವಧಿಯನ್ನು ಪೂರ್ಣಗೊಳಿಸಿದ ಯಾವುದೇ ಉಪನ್ಯಾಸಕರನ್ನು ಅಂತಹ ಸ್ಥಳಕ್ಕೆ ಕೆಳಗಿನ ಷರತ್ತುಗಳಿಗೆ ಒಳಪಟ್ಟು ವರ್ಗಾಯಿಸಬಹುದು . ಕನಿಷ್ಠ ಸೇವಾ ಅವಧಿಯೆಂದರೆ ;
(i) ವಿದ್ಯಾರ್ಥಿ ಉಪನ್ಯಾಸಕರ ಅನುಪಾತದ ಆಧಾರದ ಮೇಲೆ ಹೆಚ್ಚುವರಿ ಉಪನ್ಯಾಸಕರನ್ನು ಹೊಂದಿರುವ ಕಾಲೇಜುಗಳಿಂದ ಮಾತ್ರ ಅಂತಹ ವರ್ಗಾವಣೆ ;
(ii) ಅಂತಹ ವರ್ಗಾವಣೆಯು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಇವರ ಶಿಫಾರಸಿನ ಮೇರೆಗೆ ಇರುತ್ತದೆ;
(iii) ಸಕ್ಷಮ ಪ್ರಾಧಿಕಾರವು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಯಾರೂ ಆಯ್ಕೆ ಮಾಡದ ಖಾಲಿ ಹುದ್ದೆಗಳ ಪಟ್ಟೆಯನ್ನು ಪ್ರಕಟಿಸಬೇಕು ಮತ್ತು ಸಾಮಾನ್ಯ ವರ್ಗಾವಣೆ ಪೂರ್ಣಗೊಂಡ ತಕ್ಷಣ ಈ ನಿಯಮದ ಅಡಿಯಲ್ಲಿ ವಿದ್ಯಾರ್ಥಿ ಉಪನ್ಯಾಸಕರ ಅನುಪಾತಕ್ಕೆ ಅನುಗುಣವಾಗಿ ಭರ್ತಿ ಮಾಡಬೇಕು. ಈ ನಿಯಮಕ್ಕೆ ಅನುಸಾರವಾಗಿ ಸಾಮಾನ್ಯ ವರ್ಗಾವಣೆಗಳನ್ನು ಪೂರ್ಣಗೊಳಿಸಿದ ನಂತರ ಸೂಚಿಸಲಾದ ಅಂತಹ ಖಾಲಿ ಹುದ್ದೆಗಳಿಗೆ ಸಕ್ಷಮ ಪ್ರಾಧಿಕಾರವು ವರ್ಗಾವಣೆಯನ್ನು ಮಾಡುತ್ತದೆ. ಮತ್ತು ಯಾವುದೇ ಉಲ್ಲಂಘನೆಯನ್ನು ಗಮನಿಸಿ ಗಂಭೀರವಾಗಿ ಪರಿಗಣಿಸಲಾಗುತ್ತದೆ ;
(iv) ಸಕ್ಷಮ ಪ್ರಾಧಿಕಾರವು ಅಂತಹ ಹೆಚ್ಚುವರಿ ಉಪನ್ಯಾಸಕರ ಅಂಕಿ-ಅಂಶಗಳನ್ನು ವಿಷಯವಾರು ಮತ್ತು ಕಾಲೇಜುವಾರು ನಿರ್ವಹಿಸಬೇಕು ಮತ್ತು ಪ್ರಕಟಿಸಬೇಕು, ಮತ್ತು
(v) ವಿದ್ಯಾರ್ಥಿಗಳ ಸಾಧನಾ ಪಥ/ಟ್ರ್ಯಾಕಿಂಗ್ ಸಿಸ್ಟಮ್ (SATS) ಮಾಹಿತಿ/ಡೇಟ ಮತ್ತು ಜಾಲ ತಾಣದ ಮಾಹಿತಿಯನ್ನು/ಆನ್ಲೈನ್ ಪೋರ್ಟಲ್ ಡೇಟಾವನ್ನು ಮೌಲ್ಯಮಾಪನ ಮಾಡಲು ಬಳಸಲಾಗುವುದು.