(೧) ಈ ನಿಯಮಗಳಲ್ಲಿ, ಸಂದರ್ಭಕ್ಕೆ ಅಗತ್ಯವಿಲ್ಲದ ಹೊರತು
(ಅ) 'ಕಾಯ್ದೆ' ಅರ್ಥ, ಕರ್ನಾಟಕ ರಾಜ್ಯ ನಾಗರೀಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ 2020;
(ಆ) 'ಮಗು' ಅರ್ಥ, ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಅವಿವಾಹಿತ ಮತ್ತು ಅವಲಂಬಿತ ಮಕ್ಕಳು
(ಇ) 'ಭಾಗ' ಅರ್ಥ, ಈ ಕಾಯ್ದೆ ಭಾಗ
(ಈ) 'ಖಾಲಿ ಹುದ್ದೆಗಳು ' ಅರ್ಥ ಸರ್ಕಾರವು ಕಾಲಕಾಲಕ್ಕೆ ನಿಯಮಾನುಸಾರ ಸ್ಪಷ್ಟಪಡಿಸಿದ ಪ್ರಾಂಶುಪಾಲರು ಮತ್ತು ನಿರ್ದಿಷ್ಟ ವಿಷಯದ ಉಪನ್ಯಾಸಕರ ಖಾಲಿ ಹುದ್ದೆ ಆಗಿರುವುದು.
(ಉ) 'ವಿದ್ಯಾರ್ಥಿ' ಉಪನ್ಯಾಸಕರ ಅನುಪಾತ' ಪ್ರಾಯೋಗಿಕ ವಿಷಯಗಳಿಗೆ ಸಂಬಂಧಿಸಿದಂತೆ 160:1 ಮತ್ತು ಇತರ ವಿಷಯಗಳಿಗೆ 320:1
(ಊ) 'ಕಾರ್ಯಭಾರ' ಅರ್ಥ, ಪ್ರತಿ ಉಪನ್ಯಾಸಕರಿಗೆ ನಿಗಧಿಪಡಿಸಿರುವ ಬೋಧನಾ ಅವಧಿಗಳು, ಪ್ರಾಯೋಗಿಕ ವಿಷಯದ ಉಪನ್ಯಾಸಕರಿಗೆ ವಾರಕ್ಕೆ 24 ಗಂಟೆಗಳು ಮತ್ತು ಇತರ ವಿಷಯಗಳ ಉಪನ್ಯಾಸಕರಿಗೆ ವಾರಕ್ಕೆ 20 ಗಂಟೆಗಳು.
ಉದಾಹರಣೆ, ವಿಜ್ಞಾನ ವಿಷಯದ ಪ್ರತಿ ತರಗತಿಗೆ 80 ವಿದ್ಯಾರ್ಥಿಗಳ 2 ತರಗತಿಗಳಿಗೆ ಸೈದ್ಧಾಂತಿಕ 8 ಗಂಟೆಗಳು ಮತ್ತು ಪ್ರಾಯೋಗಿಕ 16 ಗಂಟೆಗಳು (20 ವಿದ್ಯಾರ್ಥಿಗಳ ಪ್ರತಿ ತಂಡಕ್ಕೆ 2 ಗಂಟೆಗಳು)
(ಋ) 'ಕನಿಷ್ಠ ಸೇವಾವಧಿ ' ಅರ್ಥ ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ಮೂರು ವರ್ಷಗಳು ಸಲ್ಲಿಸಿರುವ ಸೇವೆ.
(ಎ) 'ಕೋರಿಕೆ ವರ್ಗಾವಣೆ' ಅರ್ಥ ವಿದ್ಯಾರ್ಥಿಗಳ ಆಧಾರದ ಮೇಲೆ ವಲಯವಾರು ಸ್ಥಳ ಆಯ್ಕೆ ಮಾಡಿಕೊಳ್ಳಲು ಪ್ರಾಂಶುಪಾಲರು ಅಥವಾ ಉಪನ್ಯಾಸಕರಿಗೆ ಅನುಮತಿ.
(ಏ) 'ಮರುನಿಯೋಜನೆ ಮತ್ತು ತಾರ್ಕಿಕ ವರ್ಗಾವಣೆ ' ಅರ್ಥ ಹಾಲಿ ಕಾರ್ಯನಿರ್ವಹಿಸುತ್ತಿದ್ದು ಕಾರ್ಯಭಾರವಿಲ್ಲದ ಅಥವಾ ಕಡಮೆ ಕಾರ್ಯಭಾರವಿರುವ ಕಾಲೇಜಿನಿಂದ ಹುದ್ದೆ ಖಾಲಿ ಇರುವ ಅಥವಾ ವಿದ್ಯಾರ್ಥಿಗಳ ಸಂಖ್ಯಾನುಸಾರ ಸೃಷ್ಟಿಯಾಗಿರುವ ಹೆಚ್ಚುವರಿ ಕಾರ್ಯಭಾರ ವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಾಡುವ ವರ್ಗಾವಣೆ
(ಐ) 'ವಲಯ' ಅರ್ಥ ವಲಯ-ಎ: ಬಿಬಿಎಂಪಿಗಳು, ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ಜಿಲ್ಲಾ ಕೇಂದ್ರಕ್ಕೆ ಒಳಪಡುವ ಕಾಲೇಜುಗಳು ವಲಯ-ಬಿ: ನಗರಪಾಲಿಕೆ, ನಗರ ಸಭೆ , ಪುರಸಭೆ, ಪಟ್ಟಣ ಪಂಚಾಯತಿ , ಮತ್ತು ತಾಲೂಕು ಕೇಂದ್ರಕ್ಕೆ ಒಳಪಡುವ ಕಾಲೇಜುಗಳು (ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ 1976 (1822 ರ ಕರ್ನಾಟಕ ಕಾಯ್ದೆ -14) ವಲಯ-ಸಿ ವಲಯ-ಎ ಮತ್ತು ವಲಯ -ಬಿ ಇವುಗಳಿಗೆ ಸಂಬಂಧ ಪಡದಿರುವ ಕಾಲೇಜುಗಳು