ಕನಿಷ್ಠ ಸೇವಾವಧಿಯನ್ನು ಪೂರ್ಣ ಗೊಳಿಸಿದ ಪ್ರತಿಯೊಬ್ಬ ಪ್ರಾಂಶುಪಾಲರು/ ಉಪನ್ಯಾಸಕರು ಕೋರಿಕೆ ವರ್ಗಾವಣೆಗಾಗಿ ಮತ್ತು ತಾರ್ಕಿಕ ವರ್ಗಾವಣೆ ವಿನಾಯಿತಿಗಾಗಿ ಆನ್ ಲೈನ್ ಅರ್ಜಿಯನ್ನು ವರ್ಗಾವಣೆ ಪ್ರಕ್ರಿಯೆ ನಿಯಂತ್ರಣಾಧಿಕಾರಿ ಅಧಿಸೂಚನೆ ನೀಡಲಾದ ಸಮಯದ ಮಿತಿಯೊಳಗೆ ಸಲ್ಲಿಸಲು ಅವಕಾಶವನ್ನು ನೀಡುವುದು.
(i) ಪ್ರಾಂಶುಪಾಲರು / ಉಪನ್ಯಾಸಕರು ಕೋರಿಕೆ ವರ್ಗಾವಣೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ವರ್ಗಗಳ ಅಡಿಯಲ್ಲಿ ಆದ್ಯತೆಯನ್ನು ಬಯಸಿ/ಕೋರಿ ನಿಯಮ 11 ರ ಅಡಿಯಲ್ಲಿ ಸ್ಪಷ್ಟಪಡಿಸಿದ ಸೂಕ್ತ ದಾಖಲೆಗಳೊಂದಿಗೆ ಕಾಯಿದೆ ಭಾಗ 10ರಂತೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡುವುದು.
(ii) ನಿಯಮ 11 ರಲ್ಲಿ ನಿರ್ದಿಷ್ಟಪಡಿಸಿದ ಸಂಬಂಧಿತ ದಾಖಲೆಗಳೊಂದಿಗೆ ತಾರ್ಕಿಕ ವರ್ಗಾವಣೆ ವಿನಾಯಿತಿಗಾಗಿ ಆನ್ ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸುವುದು (ಹಕ್ಕೊತ್ತಾಯಿಸುವುದು).
(iii) ಸಮಯ ಮಿತಿಯೊಳಗೆ ಆದ್ಯತೆ ಅಥವಾ ವಿನಾಯಿತಿಯ ಹಕ್ಕೊತ್ತಾಯಿಸದಿದ್ದರೆ ಅದನ್ನು ನಂತರದಲ್ಲಿ ಪರಿಗಣಿಸಲಾಗುವುದಿಲ್ಲ. ಮತ್ತು
(iv) ತಾರ್ಕಿಕ ವರ್ಗಾವಣೆ ಅಡಿಯಲ್ಲಿ ಗುರುತಿಸಲಾದ ಪ್ರಾಂಶುಪಾಲರು /ಉಪನ್ಯಾಸಕರು ಸಹ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು . ಅವರ ಅರ್ಹತೆ ಮತ್ತು ಅರ್ಹತಾದಾಯಕ ಅಂಕಗಳನ್ನು ಅವರು ಕೆಲಸ ಮಾಡುವ ಕಾಲೇಜಿನ ಆಧಾರದ ಮೇಲೆ ತಾರ್ಕಿಕ ವರ್ಗಾವಣೆಗೆ ಮೊದಲು ಪರಿಗಣಿಸಲಾಗುತ್ತದೆ.