(i) ಅರ್ಹತೆ:
(ಎ) ಕನಿಷ್ಠ ಏಳು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.
(ಬಿ)ನಿವೃತ್ತಿಗೆ ಕನಿಷ್ಠ ಐದು ವರ್ಷಗಳ ಸೇವೆಯು ಬಾಕಿ ಇರಬೇಕು .
(ಸಿ)ಈ ಮೊದಲು ಪರಸ್ಪರ ವರ್ಗಾವಣೆಯನ್ನು ಪಡೆದಿರಬಾರದು .
(ಡಿ) ಪರಸ್ಪರ ವರ್ಗಾವಣೆಯನ್ನು ಬಯಸುತ್ತಿರುವ ಪ್ರಾಂಶುಪಾಲರು/ಉಪನ್ಯಾಸಕರು ಇಬ್ಬರೂ ವರ್ಗಾವಣೆ ತಾಣ/ಪೋರ್ಟಲ್ನಲ್ಲಿ ನಿಗದಿತ ಸಮಯದೊಳಗೆ ವರ್ಗಾವಣೆ ಪ್ರಕ್ರಿಯೆ ನಿಯಂತ್ರಣಾಧಿಕಾರಿಯು ನಿರ್ದಿಷ್ಟಪಡಿಸಿದ ರೀತಿಯಲ್ಲಿ ಹಾಗು ತಮ್ಮ ಅರ್ಜಿಗಳನ್ನು KGID ಸಂಖ್ಯೆಗಳ ಮೂಲಕ ಲಿಂಕ್ ಮಾಡಿ ಅರ್ಜಿ ಸಲ್ಲಿಸಬೇಕು .
(ii) ಸಕ್ಷಮ ಪ್ರಾಧಿಕಾರವು ಅರ್ಹ ಪ್ರಕರಣಗಳ ಅಂತಿಮ ಪಟ್ಟೆಯನ್ನು ಪ್ರಕಟಿಸುತ್ತದೆ .
(iii) ಪ್ರಾಂಶುಪಾಲರು/ಉಪನ್ಯಾಸಕರು, ಅವರ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಪರಸ್ಪರ ವರ್ಗಾವಣೆಯನ್ನು ಪಡೆಯಬಹುದು.