(1) ತಾರ್ಕಿಕ ವರ್ಗಾವಣೆಯಡಿಯಲ್ಲಿ ವಿನಾಯಿತಿ ಪಡೆಯುವ ಉಪನ್ಯಾಸಕರ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ , ಆ ಕಾಲೇಜಿನಲ್ಲಿ ಆ ವಿಷಯದ ಹಿರಿಯ ಉಪನ್ಯಾಸಕರನ್ನು ವರ್ಗಾವಣೆಗೆ ಪರಿಗಣಿಸಲಾಗುವುದು ಹಾಗು ಉಳಿದ ಉಪನ್ಯಾಸಕರಿಗೆ ವಿನಾಯಿತಿ ನೀಡುವುದು. ಆ ವಿಷಯದ ಎಲ್ಲಾ ಉಪನ್ಯಾಸಕರು ವಿನಾಯಿತಿಗೆ ಅರ್ಹರಾಗಿದ್ದರೆ ವಿನಾಯಿತಿ ಷರತ್ತನ್ನು ಲೆಕ್ಕಿಸದೆ ಗಂಭೀರ ಅನಾರೋಗ್ಯ ಅಥವಾ ದೈಹಿಕ ಅಸಾಮರ್ಥ್ಯ ಹೊಂದಿರುವ ಉಪನ್ಯಾಸಕರನ್ನು ಹೊರತುಪಡಿಸಿ ಹಿರಿಯ ಎಲ್ಲಾ ಉಪನ್ಯಾಸಕರನ್ನುಪರಿಗಣಿಸಲಾಗುತ್ತದೆ.
(2) ಉಪ-ನಿಯಮ (1) ರಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ತಾರ್ಕಿಕ ವರ್ಗಾವಣೆಯಡಿಯಲ್ಲಿ ಮಾಡಬೇಕಾದ ಉಪನ್ಯಾಸಕರ ಅಂತಿಮ ಪಟ್ಟಿಯನ್ನು ಪ್ರಕಟಿಸುವುದು .