(1) ವರ್ಗಾವಣೆಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲಾಗುವುದು.
(2) ಈ ಸಮಯದ ನಂತರವೂ ವರ್ಗಾವಣೆಗಳನ್ನು ನಡೆಸುವುದು ವರ್ಗಾವಣೆ ಪ್ರಕ್ರಿಯೆ ನಿಯಂತ್ರಣಾಧಿಕಾರಿಯ ಸೂಕ್ತವೆಂದು ಭಾವಿಸಿ ಮಾಡಿದ ಶಿಫಾರಸುಗಳ ಮೇರೆಗೆ , ಸರ್ಕಾರವು ಉಪನಿಯಮ (1) ರನ್ವಯ ವರ್ಗಾವಣೆಗಳನ್ನು ನಡೆಸಲು ಅನುಮತಿಸಬಹುದು.
(3) ವರ್ಗಾವಣೆ ಪ್ರಕ್ರಿಯೆ ನಿಯಂತ್ರಣಾಧಿಕಾರಿಯು ಪ್ರತಿ ವರ್ಷ ಈ ಕೆಳಗಿನ ಪ್ರಮುಖ ಹಂತಗಳನ್ನೊಳಗೊಂಡಂತೆ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವುದು.
(ಅ) 2018-19 ರಲ್ಲಿ ಕಡ್ಡಾಯ ವರ್ಗಾವಣೆಯ ಮೂಲಕ ವರ್ಗಾವಣೆಗೊಂಡ ಉಪನ್ಯಾಸಕರಿಂದ ಅರ್ಜಿಯನ್ನು ಆಹ್ವಾನಿಸುವುದು (ವರ್ಗಾವಣೆ ಕಾಯ್ದೆಯನ್ವಯ ಒಂದು ಬಾರಿಯ ಕ್ರಮ ಮಾತ್ರ);
(ಆ) ವಿದ್ಯಾರ್ಥಿ-ಉಪನ್ಯಾಸಕರ ಅನುಪಾತದ ಆಧಾರದ ಮೇಲೆ ಮಂಜೂರಾದ ಹುದ್ದೆಗಳ ಮರುನಿಯೋಜನೆ;
(ಇ)ಖಾಲಿ ಹುದ್ದೆಗಳ ಅಧಿಸೂಚನೆ (ಪ್ರಕಟಣೆ);
(ಈ) ತಾರ್ಕಿಕ ವರ್ಗಾವಣೆಯಡಿಯಲ್ಲಿ ವರ್ಗಾವಣೆ ಮಾಡಬೇಕಾದ ಉಪನ್ಯಾಸಕರ ಕರಡು ಪಟ್ಟಿಯ ಅಧಿಸೂಚನೆ (ಪ್ರಕಟಣೆ);
(ಉ) ಕೋರಿಕೆ ವರ್ಗಾವಣೆ ಮತ್ತು ತಾರ್ಕಿಕ ವರ್ಗಾವಣೆ ವಿನಾಯಿತಿಗಾಗಿ ಅರ್ಜಿಯನ್ನು ಆಹ್ವಾನಿಸುವುದು;
(ಊ) 2018-19ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯ ಮೇಲೆ ವರ್ಗಾವಣೆಗೊಂಡ ಉಪನ್ಯಾಸಕರ ಪಟ್ಟಿಯ ಅಂತಿಮಗೊಳಿಸುವಿಕೆ;
(ಋ) ವಿನಾಯಿತಿ ನೀಡಬೇಕಾದ ಮತ್ತು ಆದ್ಯತೆಗೊಳಪಡುವ ಉಪನ್ಯಾಸಕರ ಪಟ್ಟಿಯನ್ನುಅಂತಿಮಗೊಳಿಸುವುದು;
(ಎ) ತಾರ್ಕಿಕ ವರ್ಗಾವಣೆ ಅಡಿಯಲ್ಲಿ ಮಾಡಬೇಕಾದ ಉಪನ್ಯಾಸಕರ ಅಂತಿಮ ಪಟ್ಟಿಯ ತಯಾರಿ ಮತ್ತು ಪ್ರಕಟಣೆ;
(ಏ) 2018-19ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯ ಮೇಲೆ ವರ್ಗಾವಣೆಗೊಂಡ ಉಪನ್ಯಾಸಕರ ವರ್ಗಾವಣೆ;
(ಐ)ತಾರ್ಕಿಕ ವರ್ಗಾವಣೆ ಅಡಿಯಲ್ಲಿ ಉಪನ್ಯಾಸಕರ ವರ್ಗಾವಣೆ;
(ಒ) ಖಾಲಿ ಎಂದು ಪರಿಭಾವಿಸಿದ ಹುದ್ದೆಗಳು ಸೇರಿದಂತೆ ಪರಿಷ್ಕೃತ ಖಾಲಿ ಹುದ್ದೆಗಳ ಪ್ರಕಟಣೆ;
(ಓ)ಕೋರಿಕೆ ವರ್ಗಾವಣೆಗಳು ಮತ್ತು;
(ಔ)ಪರಸ್ಪರ ವರ್ಗಾವಣೆಗಳು;
ಸೂಚನೆ: ಉಪನ್ಯಾಸಕರ ಮರುನಿಯೋಜನೆ ಮತ್ತು ತಾರ್ಕಿಕ ವರ್ಗಾವಣೆಗಳನ್ನು ಪ್ರತಿ ಪರ್ಯಾಯ ವರ್ಷದಲ್ಲಿ ನಡೆಸುವುದು.