(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017 (2017ರ ಕರ್ನಾಟಕ ಅಧಿನಿಯಮ ಸಂಖ್ಯೆ 44);
(ಬಿ) “ಅನುಬಂಧ” ಎಂದರೆ ಈ ನಿಯಮಗಳಿಗೆ ಸೇರಿಸಲಾದ ಅನುಬಂಧ;
(ಸಿ) “ಸಂಘಗಳು” ಎಂದರೆ;
(i) ಯಾವುದೇ ವಾಣಿಜ್ಯ ಕಾರ್ಯಸಂಸ್ಥೆಯಲ್ಲಿ ಅವರಿಂದ ಬಾಡಿಗೆ ಅಥವಾ ಸ್ವಂತಕ್ಕಾಗಿ ನೀಡಲಾದಂತಹ ಸ್ಥಳಗಳಲ್ಲಿನ ಬಹುವಿಧವಾದ ಅಂಗಡಿಗಳು ಅಥವಾ ವ್ಯಾಪಾರ ಸ್ಥಳಗಳ ಮಾಲೀಕರುಗಳ ಗುಂಪು, ಮತ್ತು;
(ii) ಯಾವುದೇ ಸೂಚಿತ ಸಮಯದಲ್ಲಿ ನೀಡಿರುವಂತೆ (ಅಂಗಡಿಗಳ ಪ್ರದೇಶ ಮತ್ತು ಕಾರ್ಯಸಂಸ್ಥೆ ಸಂಘಗಳು) ಹೆಚ್ಚು ಒಟ್ಟುಗೂಡಿಸುವುದಕ್ಕಾಗಿ ನೀಡಿದ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶದಲ್ಲಿ ಕೇಂದ್ರೀಕರಿಸಲಾದ ಸ್ವಂತ ಅಂಗಡಿಗಳು ಮತ್ತು ಕಾರ್ಯಸಂಸ್ಥೆಗಳ ಗುಂಪು;
(ಡಿ) “ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಓ)” ಎಂದರೆ, ಸಂದರ್ಭಾನುಸಾರ ಸ್ಥಳದ ಮೇಲೆ ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಅಧಿಕಾರಿ;
(ಇ) “ನಮೂನೆ” ಎಂದರೆ ಈ ನಿಯಮಗಳಿಗೆ ಸೇರಿಸಲಾದ ನಮೂನೆ;
(ಎಫ್) “ಇನ್ಸ್ಪೆಕ್ಟರ್” ಎಂದರೆ ಸ್ಥಳದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿದ ಪೊಲೀಸ್ ಇನ್ಸ್ಪೆಕ್ಟರ್;
(ಜಿ) “ಲೈಸನ್ಸ್” ಎಂದರೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1965 ಅಥವಾ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಅಧಿನಿಯಮ, 1964 ಅಥವಾ ಕಾರ್ಖಾನೆಗಳ ಅಧಿನಿಯಮ, 1948 ಅಥವಾ ಕರ್ನಾಟಕ ಶಿಕ್ಷಣ ಅಧಿನಿಯಮ, 1983 ಅಥವಾ ಇತರೆ ಯಾವುದೇ ಅಧಿನಿಯಮ ಅಥವಾ ಈ ಉದ್ದೇಶಕ್ಕಾಗಿ ಸಂಬಂಧಪಟ್ಟ ಅಧಿನಿಯಮಗಳ ಅಡಿಯಲ್ಲಿ ರಚಿಸಲಾದ ನಿಯಮಗಳ ಮೇರೆಗೆ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಲು ಅಥವಾ ನಡೆಸಲು ಪಡೆಯಲಾದ, ಸಿಂಧುವಾದ ಅನುಮತಿ ಅಥವಾ ಲೈಸೆನ್ಸ್.
(ಹೆಚ್) “ಲೈಸೆನ್ಸ್ ನೀಡುವ ಪ್ರಾಧಿಕಾರ” ಎಂದರೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1976 ಅಥವಾ ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಅಧಿನಿಯಮ, 1964 ಅಥವಾ ಕಾರ್ಖಾನೆಗಳ ಅಧಿನಿಯಮ, 1948 ಅಥವಾ ಕರ್ನಾಟಕ ಶಿಕ್ಷಣ ಅಧಿನಿಯಮ, 1983 ಅಥವಾ ವಾಣಿಜ್ಯ ಸಂಸ್ಥೆಯನ್ನು ನಿರ್ವಹಿಸುವುದಕ್ಕಾಗಿ ಪರವಾನಗಿ ಅಥವಾ ಲೈಸೆನ್ಸ್ ನೀಡುವ ಒಂದು ಸಕ್ಷಮ ಪ್ರಾಧಿಕಾರದ ಅಡಿಯಲ್ಲಿ ಒಂದು ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಲು ಅಥವಾ ನಡೆಸಲು ಅನುಮತಿ ಅಥವಾ ಪರವಾನಗಿ ನೀಡುವ ಒಂದು ಸಕ್ಷಮ ಪ್ರಾಧಿಕಾರ.
(ಐ) “ಕ್ಷೇತ್ರೀಯ ಸಮಿತಿ” ಎಂದರೆ, 3ನೇ ನಿಯಮದ ಉಪಬಂಧಗಳಿಗನುಸಾರವಾಗಿ ರಚಿಸಲಾದ ಒಂದು ಸಮಿತಿ;
(ಜೆ) “ಮೇಲ್ವಿಚಾರಣಾ ಸಮಿತಿ” ಎಂದರೆ, 8ನೇ ನಿಯಮದ ಉಪಬಂಧಗಳಿಗನುಸಾರವಾಗಿ ರಚಿಸಲಾದ ಒಂದು ಸಮಿತಿ;
(2) ಈ ನಿಯಮಗಳಲ್ಲಿ ಪರಿಭಾಷಿಸಲಾಗದ ಆದರೆ ಬಳಸಲಾದ ಪದಗಳು ಮತ್ತು ಅಭಿವ್ಯಕ್ತಿಗಳು ಎಂಬುದಕ್ಕೆ ಈ ಅಧಿನಿಯಮದಲ್ಲಿ ಅವುಗಳಿಗೆ ಅನುಕ್ರಮವಾಗಿ ಗೊತ್ತುಪಡಿಸಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು.