(1) 6ನೇ ಪ್ರಕರಣದ ಅಡಿಯಲ್ಲಿ ಆ ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ವಿಭಾಗೀಯ ಪೊಲೀಸ್ ಅಧಿಕಾರಿಯು, ಸಂದರ್ಭಾನುಸಾರ, ಅಂಥ ಯಾವುದೇ ಕಾರ್ಯಸಂಸ್ಥೆಯನ್ನು ನಡೆಸುತ್ತಿರುವ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ಸಂಘವು ಈ ನಿಯಮಗಳನ್ನು ಸೇರಿಸುವ ನಮೂನೆ ಸಂಖ್ಯೆ. 5 ರಲ್ಲಿರುವಂತೆ ಕಾರಣಕೇಳುವ ನೋಟೀಸ್ ನೀಡಿದ್ದು, ಪಾಲಿಸದಿರುವುದಕ್ಕೆ ಸಂಬಂಧಪಟ್ಟಂಥ ಪೊಲೀಸ್ ನಿರೀಕ್ಷಕರಿಂದ ವರದಿಯನ್ನು ಸ್ವೀಕರಿಸಿದ ಮೇಲೆ ಪಾಲನೆಗಾಗಿ ಹದಿನೈದು ದಿನಗಳ ಅವಧಿಯನ್ನು ನೀಡುವುದು.
(2) ಅಂತಹ ಯಾವುದೇ ಕಾರ್ಯಸಂಸ್ಥೆಯನ್ನು ನಡೆಸುತ್ತಿರುವ ಯಾರೇ ಒಬ್ಬ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ಸಂಘವು, (1)ನೇ ಉಪ-ನಿಯಮದ ಮೇರೆಗೆ ನೀಡಲಾದ ಕಾರಣಕೇಳುವ ನೋಟೀಸನ್ನು ಸ್ವೀಕರಿಸಿದ ಮೇಲೆ ನೋಟೀಸ್ನ ನಿರ್ದೇಶನಗಳನ್ನು ಪಾಲಿಸಲು ತಪ್ಪಿದಲ್ಲಿ, ಸಂಬಂಧಪಟ್ಟ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯು ಸಂದರ್ಭಾನುಸಾರ, ಅಂಥ ಕಾರ್ಯಸಂಸ್ಥೆಯನ್ನು ನಡೆಸುತ್ತಿರುವ ಯಾರೇ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳು ಅಥವಾ ಸಂಘದ ಮೇಲೆ ರಾಜಿಮಾಡಿಕೊಳ್ಳುವ ಶುಲ್ಕವನ್ನು ವಿಧಿಸುವುದು.
(ಎ) ಕರ್ತವ್ಯ ಲೋಪದ ಮೊದಲನೇ ತಿಂಗಳಿಗಾಗಿ-5,000/- ರೂ.ಗಳು(ನಮೂನೆ ಸಂಖ್ಯೆ 7 ರಲ್ಲಿ)
(ಬಿ) ಕರ್ತವ್ಯ ಲೋಪದ ಎರಡನೆ ತಿಂಗಳಿಗಾಗಿ –10,000/- ರೂ.ಗಳು (ನಮೂನೆ ಸಂಖ್ಯೆ 8 ರಲ್ಲಿ)
(3) ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯು, ನಮೂನೆ ಸಂಖ್ಯೆ 6 ರಲ್ಲಿರುವಂತೆ ಕಾರಣಕೇಳುವ ನೋಟೀಸ್ ಅಥವಾ ರಾಜಿಮಾಡಿಕೊಳ್ಳುವ ಶುಲ್ಕದ ಬಗ್ಗೆ ನೋಂದಣಿ ಪುಸ್ತಕವನ್ನು ನಿರ್ವಹಿಸತಕ್ಕದ್ದು.
(4) ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯು ನಮೂನೆ ಸಂಖ್ಯೆ. 9 ರಲ್ಲಿ ನಿರ್ದಿಷ್ಟಪಡಿಸಲಾದಂತೆ ರಾಜಿಮಾಡಿಕೊಳ್ಳುವ ಶುಲ್ಕಕ್ಕೆ ರಸೀದಿಯನ್ನು ನೀಡತಕ್ಕದ್ದು.
(5) 6ನೇ ನಿಯಮದ, (4)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ ಪೊಲೀಸ್ ನಿರೀಕ್ಷಕರ ವರದಿಯನ್ನು ಸ್ವೀಕರಿಸಿದ ಮೇಲೆ ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯು ಮೇಲ್ವಿಚಾರಣಾ ಸಮಿತಿಯ ಮುಂದೆ ಆ ವರದಿಯನ್ನು ಮಂಡಿಸತಕ್ಕದ್ದು.
(6) ಆ ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯು ಲೈಸನ್ಸ್ ಮಂಜೂರಾತಿ ಪ್ರಾಧಿಕಾರಕ್ಕೆ ಆ ಕಾರ್ಯಸಂಸ್ಥೆಯು ಸೀಲ್ ಮಾಡಿರುವ ಪೊಲೀಸ್ ನಿರೀಕ್ಷಕರ ವರದಿಯನ್ನು ಮುಂದಕ್ಕೆ ಕಳುಹಿಸತಕ್ಕದ್ದು.
(7) ಸಂಗ್ರಹಿಸಲಾದ ರಾಜಿಮಾಡಿಕೊಳ್ಳುವ ಶುಲ್ಕವನ್ನು ಸರ್ಕಾರದಿಂದ ಅಧಿಸೂಚಿಸಬಹುದಾದಂಥ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಲ್ಲಿ ಠೇವಣಿಯನ್ನು ಇಡತಕ್ಕದ್ದು.