(1) ಪೊಲೀಸ್ ನಿರೀಕ್ಷಕರು ನಮೂನೆ ಸಂಖ್ಯೆ-2 ರಲ್ಲಿ ನಿರ್ದಿಷ್ಟಪಡಿಸಲಾದಂತೆ ಈ ನಿಯಮಗಳ ಅಡಿಯಲ್ಲಿ ಆತನ ಅಧಿಕಾರ ವ್ಯಾಪ್ತಿಯಲ್ಲಿ ಗುರುತಿಸಲಾದ ಕಾರ್ಯಸಂಸ್ಥೆಗಳು ಒಂದು ನೋಂದಣಿ ಪುಸ್ತಕವನ್ನು ನಿರ್ವಹಿಸತಕ್ಕದ್ದು.
(2) ಪೊಲೀಸ್ ನಿರೀಕ್ಷಕರು ಸಂದರ್ಭಾನುಸಾರ ಸಹಾಯಕ ಪೊಲೀಸ್ ಆಯುಕ್ತರಿಗೆ ಅಥವಾ ವಿಭಾಗೀಯ ಪೊಲೀಸ್ ಅಧಿಕಾರಿಯವರಿಗೆ ಪ್ರತಿಯೊಂದು ವಿಭಾಗದಲ್ಲಿನ ಅಧಿಕಾರವ್ಯಾಪ್ತಿಯ ಪ್ರದೇಶದೊಳಗೆ ನಮೂನೆ ಸಂಖ್ಯೆ. 3 ರಲ್ಲಿ ಪರಿಶೀಲನಾ ವರದಿಯನ್ನು ಸಲ್ಲಿಸತಕ್ಕದ್ದು ಮತ್ತು ನಮೂನೆ ಸಂಖ್ಯೆ 4ರಲ್ಲಿ ಸೂಚಿಸಲಾದ ವರದಿಯು ಪಾಲನೆಯಾಗದಿದ್ದಲ್ಲಿ ಅಧಿಕಾರವ್ಯಾಪ್ತಿಯ ಪ್ರದೇಶದೊಳಗಿರುವ ಶೇ. 10 ರಷ್ಟು ಗೊತ್ತು ಗುರಿಯಿಲ್ಲದ ಕಾರ್ಯಸಂಸ್ಥೆಗಳ ಪರಿಶೀಲನೆಯನ್ನು ಮಾಡತಕ್ಕದ್ದು.
(3) ಪೊಲೀಸ್ ನಿರೀಕ್ಷಕರು ಪರಿಶೀಲನಾ ಸಮಯದಲ್ಲಿ ಈ ಬಗ್ಗೆ ರಚಿಸಲಾಗಿರುವ ವಿಶೇಷ ವಿಭಾಗದ ನೆರವನ್ನು ಪಡೆದುಕೊಳ್ಳತಕ್ಕದ್ದು.
(4) 2ನೇ ತಿಂಗಳಿನ ರಾಜಿಮಾಡಿಕೊಳ್ಳುವ ಶುಲ್ಕವನ್ನು ವಿಧಿಸುವ ದಿನಾಂಕದಿಂದ ಎರಡು ತಿಂಗಳ ಅವಧಿಯೊಳಗೆ ನಿರ್ದೇಶನಗಳನ್ನು ಪಾಲಿಸಲು ಅಂಥ ಯಾವುದೇ ಕಾರ್ಯಸಂಸ್ಥೆಯನ್ನು ನಡೆಸುತ್ತಿರುವ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳು ಅಥವಾ ಸಂಘಗಳಿಂದ ವಿಫಲವಾದ ಯಾವುದೇ ಸಂದರ್ಭದಲ್ಲಿ, ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ನಿರೀಕ್ಷಕರಿಗೆ ನಮೂನೆ ಸಂಖ್ಯೆ 10 ರಲ್ಲಿ ಸಂಬಂಧಪಟ್ಟ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯವರ ಮೂಲಕ ಮೇಲ್ವಿಚಾರಣಾ ಸಮಿತಿಗೆ ಒಂದು ವರದಿಯನ್ನು ಸಲ್ಲಿಸತಕ್ಕದ್ದು.
(5) ಕಾರ್ಯಸಂಸ್ಥೆಯ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ನಿರೀಕ್ಷಕರು ನಮೂನೆ ಸಂಖ್ಯೆ 12 ರಲ್ಲಿ ಮೇಲ್ವಿಚಾರಣಾ ಸಮಿತಿಯಿಂದ ಆದೇಶಗಳನ್ನು ಸ್ವೀಕರಿಸಿದ ಮೇಲೆ ನಮೂನೆ ಸಂಖ್ಯೆ. 13 ರಲ್ಲಿ ತಾತ್ಕಾಲಿಕವಾಗಿ ಆ ಸ್ಥಳಗಳನ್ನು ಸೀಲ್ ಮಾಡತಕ್ಕದ್ದು.
(6) ಪೊಲೀಸ್ ನಿರೀಕ್ಷಕರು, ಕಾರ್ಯಸಂಸ್ಥೆಯನ್ನು ಸೀಲ್ ಮಾಡಿದ ಸಮಯದಲ್ಲಿ ಕಾರ್ಯಸಂಸ್ಥೆಯಲ್ಲಿ ಕಂಡುಬರುವ ಕೆಟ್ಟು ಹೋದ ಸರಕುಗಳ ಅಗತ್ಯ ವಿಲೇವಾರಿಗಾಗಿ 24 ಗಂಟೆಗಳ ಸಮಯವನ್ನು ನೀಡತಕ್ಕದ್ದು.
(7) ಪೊಲೀಸ್ ನಿರೀಕ್ಷಕರು ಸಂದರ್ಭಾನುಸಾರ ನಮೂನೆ ಸಂಖ್ಯೆ. 14 ರಲ್ಲಿ ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪವಿಭಾಗೀಯ ಪೊಲೀಸ್ ಅಧಿಕಾರಿಯ ಮುಖಾಂತರ ಸಂಬಂಧಪಟ್ಟ ಲೈಸನ್ಸ್ ನೀಡುವ ಪ್ರಾಧಿಕಾರಕ್ಕೆ ಕಾರ್ಯಸಂಸ್ಥೆಯು ಸೀಲ್ ಮಾಡಿರುವ ಬಗ್ಗೆ ವರದಿಯನ್ನು ಕಳುಹಿಸತಕ್ಕದ್ದು.