(1) ಲೈಸನ್ಸನ್ನು ನೀಡುವಾಗ ಲೈಸನ್ಸ್ ಪ್ರಾಧಿಕಾರವು ಸಾರ್ವಜನಿಕ ಸುರಕ್ಷ ತಾ ಕ್ರಮಗಳನ್ನು ಕಡ್ಡಾಯವಾಗಿ ಕಾರ್ಯಗತಗೊಳಿಸುವುದಕ್ಕಾಗಿ ಕಾರ್ಯಸಂಸ್ಥೆಯು ಅವುಗಳನ್ನು ಬದ್ದಗೊಳಿಸುವಂತೆ ಮಾಡತಕ್ಕದ್ದು.
(2) ಲೈಸನ್ಸ್ ಪ್ರಾಧಿಕಾರವುಲೈಸನ್ಸ್ ನವೀಕರಣದ ಸಮಯದಲ್ಲಿ, ಕಾರ್ಯಸಂಸ್ಥೆಯು ಯಾವುದೇ ಉಲ್ಲಂಘನೆ ಮಾಡದೇ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕಾರ್ಯಗತಗೊಳಿಸುತ್ತಿದೆ ಎಂಬುದನ್ನುಖಚಿತಪಡಿಸಿಕೊಳ್ಳತಕ್ಕದ್ದು.
(3) ಸ್ಥಳಗಳನ್ನು ತಾತ್ಕಾಲಿಕವಾಗಿ ಸೀಲ್ ಮಾಡುವ ಸಂಬಂಧವಾಗಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯಿಂದ ವರದಿಯನ್ನು ಸ್ವೀಕರಿಸಿದ ಮೇಲೆ, ಲೈಸನ್ಸ್ ಪ್ರಾಧಿಕಾರವು, ಅಂಥ ಯಾವುದೇ ಕಾರ್ಯಸಂಸ್ಥೆಯನ್ನು ನಡೆಸುವ ಯಾರೇ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಅಥವಾ ಸಂಘಕ್ಕೆ ಕಾರಣಕೇಳುವ ನೋಟೀಸನ್ನು ನೀಡತಕ್ಕದ್ದು ಮತ್ತು ಲೈಸನ್ಸ್ ನೀಡುವ ಸಂಬಂಧದಲ್ಲಿ ಉಪಬಂಧಗಳಿಗನುಸಾರವಾದ ಕ್ರಮವನ್ನು ಕೈಗೊಳ್ಳುವುದು.
ಈ ಸರ್ಕಾರಿ ಆದೇಶವು ರಾಜ್ಯಪತ್ರದಲ್ಲಿ ಅದನ್ನು ಪ್ರಕಟಿಸಿದ ದಿನಾಂಕದಿಂದ ಕೂಡಲೇ ಜಾರಿಗೆ ಬರತಕ್ಕದ್ದು.