(1) ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕಾರ್ಯಗತಗೊಳಿಸಲು ಮೇಲ್ವಿಚಾರಣಾ ಸಮಿತಿ ನೆರವು ನೀಡಲು ಮತ್ತು ಸಹಾಯ ಮಾಡಲು ತಮ್ಮ ಸ್ಥಳದಲ್ಲಿ ವಾಣಿಜ್ಯ ಕಾರ್ಯಸಂಸ್ಥೆಗಳು ಅಥವಾ ಕಾರ್ಯಸಂಸ್ಥೆಗಳ ಸಮೂಹಗಳಂತಹ ಮಾಲೀಕರುಗಳ ಪ್ರತಿನಿಧಿಗಳನ್ನು ಒಳಗೊಂಡ ಒಂದು ಕ್ಷೇತ್ರೀಯ ಸಮಿತಿ (ಸೆಕ್ಟೊ ರಲ್ ಸಮಿತಿ) ಯಿಂದ ಇರಬಹುದಾದ ಒಂದು ಸ್ಥಳೀಯ ವಾಣಿಜ್ಯ ಕಾರ್ಯಸಂಸ್ಥೆಗಳು ಅಥವಾ ಕಾರ್ಯಸಂಸ್ಥೆಗಳ ಸಮೂಹ.
(2) ಅಂತಹ ಸಮಿತಿಯ ರಚನೆಯ ಬಗ್ಗೆ, ಆ ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಇನ್ಸ್ಪೆಕ್ಟರ್ರವರ ಮೂಲಕ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡತಕ್ಕದ್ದು.
(4) ಪ್ರತಿಯೊಂದು ಕಾರ್ಯಸಂಸ್ಥೆ ಅಥವಾ ಸಂಘವು ಗಮ್ಯ ನಿಯಂತ್ರಕಗಳು ಮತ್ತು ನಿಗಾವಣೆ ಸಾಧನಗಳ (ಸಿಸಿ ಟಿವಿಗಳು) ಅಡಿಯಲ್ಲಿ ಕನಿಷ್ಠ ತಾಂತ್ರಿಕ ತಪಸೀಲು ಪಟ್ಟಿಗಳ ಸಲಕರಣೆಗಳನ್ನು ಒದಗಿಸತಕ್ಕದ್ದು,-
(i) ಗಮ್ಯ ನಿಯಂತ್ರಕ ಸಾಧನಗಳು
| ಕ್ರ. ಸಂ. | ತಾಂತ್ರಿಕ ತಪಸೀಲು ಪಟ್ಟಿಗಳು |
| (1) | (2) |
| (1) | ಡೋರ್ ಪ್ರೇಮ್ ಮೆಟಲ್ ಡಿಟೆಕ್ಟರ್ ಚೆಕ್ಮೇಟ್ (ಡಿಎಫ್ಎಂಡಿಸಿ) |
| (2) | ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ (ಎಚ್ಎಚ್ಎಂಡಿ) (ಕೈಯಲ್ಲಿ ಹಿಡಿಯುವ ಲೋಹ ಪತ್ತೆದಾರಿ ಸಾಧನ) |
| (3) | ವಾಹನದ ಕೊನೆಯ ಭಾಗವನ್ನು ಕನ್ನಡಿಯಿಂದ ಹುಡುಕುವುದು (ಮೇಲ್ವಿಚಾರಣಾ ಸಮಿತಿಯಿಂದ ನಿರ್ದಿಷ್ಟಪಡಿಸಿದ ಕಾರ್ಯಸಂಸ್ಥೆಗಳಿಗಾಗಿ) |
| (4) | ಸಾಮಾನು ಸರಂಜಾಮುಗಳನ್ನು (ಲಗೇಜುಗಳನ್ನು ಪರಿಕ್ಷೀಸುವ ಸಾಧನ) (ಮೇಲ್ವಿಚಾರಣಾ ಸಮಿತಿಯಿಂದ ನಿರ್ದಿಷ್ಟಪಡಿಸಿದ ಕಾರ್ಯಸಂಸ್ಥೆಗಳಿಗಾಗಿ) |
| (5) | ಸ್ನಿಫರ್ಡಾಗ್ಸ್ (ಮೂಸುನಾಯಿ) (ಮೇಲ್ವಿಚಾರಣಾ ಸಮಿತಿಯಿಂದ ನಿರ್ದಿಷ್ಟಪಡಿಸಿದ ಕಾರ್ಯಸಂಸ್ಥೆಗಳಿಗಾಗಿ) |
| (6) | ಮೇಲ್ವಿಚಾರಣಾ ಸಮಿತಿಯಿಂದ ಸೂಚಿಸಲಾದ ಯಾವುದೇ ಇತರೇ ಸಾಧನ ಸಲಕರಣೆಗಳು ಅಥವಾ ಕ್ರಮಗಳು |
| ಕ್ರ. ಸಂ. | ಕನಿಷ್ಟ ತಾಂತ್ರಿಕ ತಪಸೀಲು ಪಟ್ಟಿಗಳು | |
| (1) | (2) | |
| (1) | ಮಾಪನ ಉಪಕರಣ | ಪೂರ್ಣ ಎಚ್ಡಿ 1920X1080 ಅಥವಾ ಉತ್ತಮವಾದ |
| (2) | ಕನಿಷ್ಟ ಪ್ರಕಾಶಗೊಳಿಸುವಿಕೆ | |
| (3) | ಲೆನ್ಸ್ಗಳು | ನಾಭಿ ದೂರ 3.6 ಎಂಎಂ ಅಥವಾ ಇನ್ನು ಉತ್ತಮವಾದ |
| (4) | ವ್ಯಾಪಿಸಬಹುದಾದ ದೂರ | ಐಆರ್ಎಲ್ಇಡಿ (ಇನ್ಬಿಲ್ಟ್ ಐಆರ್) – 50 ಯಾರ್ಡ್ಗಳು ಅಥವಾ ಇನ್ನು ಉತ್ತಮವಾದ |
| ಲ್ಲಾ ಆ ಕ್ | ಫ್ಲಾಟ್ಫಾರಂ ವೀಡಿಯೋ ವ್ಯವಸ್ಥೆ | ಮುಕ್ತ ಅಂತರ್ಜಾಲ ವೀಡಿಯೋ ಸಂಪರ್ಕ ಏರ್ಪಡಿಸುವ ವ್ಯವಸ್ಥೆ (ಓಎನ್ವಿಐಎಫ್) ಅನುವರ್ತನಶೀಲ ಅಥವಾ ಸಮಾನ ತೀವ್ರತೆಯ (ಎಚ್. 264) |
| (6) | ಅವಶ್ಯಕವಿರುವ ಸಂಗ್ರಹಣಾ ಸಾಮಥ್ರ್ಯ (ಎನ್.ವಿ.ಆರ್) | |
| (7) | ಮೇಲ್ವಿಚಾರಣಾ ಸಮಿತಿಯಿಂದ ಸೂಚಿಸಲಾದ ಯಾವುದೇ ಇತರೆ ಸಲಕರಣೆಗಳು ಅಥವಾ ಕ್ರಮ | |
ತಾ ಕ್ರಮಗಳನ್ನು (iv) ಪ್ರತಿಯೊಂದು ಕಾರ್ಯಸಂಸ್ಥೆ ಅಥವಾ ಸಂಘವು ಸಾರ್ವಜನಿಕ ಸುರಕ್ಷ ಒದಗಿಸುವ ವೆಚ್ಚವನ್ನು ಭರಿಸತಕ್ಕದ್ದು.
(v) ಕ್ಯಾಮರಾಗಳು ಕಾರ್ಯಸಂಸ್ಥೆಯು ಮುಚ್ಚಿರುವ ಸಂದರ್ಭದಲ್ಲೂ ಸಹ 24X7 ರಂತೆ ಕಾರ್ಯನಿರ್ವಹಿಸತಕ್ಕದ್ದು.
(vi) ಕ್ಯಾಮರಾಗಳು ಕಾರ್ಯಸಂಸ್ಥೆಗಳ ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿನ ಹತ್ತಿರದ ಪ್ರದೇಶಗಳನ್ನು ವ್ಯಾಪಿಸಿರತಕ್ಕದ್ದು ಮತ್ತು ಅಲ್ಲದೆ ಐವತ್ತು ಯಾರ್ಡ್ಗಳ ದೂರದವರೆಗೂ ಕಾರ್ಯಸಂಸ್ಥೆಯ ಪಾರ್ಕಿಂಗ್ ಪ್ರದೇಶದ ಆಗಮನ ಮತ್ತು ನಿರ್ಗಮನದ ಸ್ಥಳವನ್ನು ಒಳಗೊಂಡಿರುವಂತಹ ದಾರಿಯಲ್ಲಿರತಕ್ಕದ್ದು.
(vii) ಅವುಗಳು ಮೂವತ್ತು ದಿನಗಳ ಸಂಗ್ರಹಣಾ ಸಾಮಥ್ರ್ಯವನ್ನು ಹೊಂದಿರತಕ್ಕದ್ದು.
(viii) ಕಮೀಷನರೇಟ್ನಲ್ಲಿನ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವಿಭಾಗಗಳಲ್ಲಿನ ಪೊಲೀಸ್ ಅಧೀಕ್ಷಕರುಗಳು ಗಮ್ಯ ನಿಯಂತ್ರಕ ಮತ್ತು ಸಿಸಿ ಟಿವಿ ಸಾಧನಗಳಂಥ ವಿದ್ಯುನ್ಮಾನ ಸಾಧನಗಳು ಕಾರ್ಯನಿರ್ವಹಿಸುವ ವಿಷಯದಲ್ಲಿ ಜ್ಞಾನ ಮತ್ತು ಪರಿಣಿತಿ ಹೊಂದಿರುವ ಸಿಬ್ಬಂದಿಯೊಂದಿಗೆ ಒಂದು ವಿಶೇಷ ವಿಭಾಗವನ್ನು ಅಭಿವೃದ್ಧಿಪಡಿಸತಕ್ಕದ್ದು.