ನಮೂನೆ ಸಂಖ್ಯೆ. 14
(6ನೇ ನಿಯಮದ (7)ನೇ ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017ರ 6(3)ನೇ ಪ್ರಕರಣದ ಮೇರೆಗೆ- ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2017ರ 7(vii) ನೇ ನಿಯಮದ ಮೇರೆಗೆ ಕಾರ್ಯಸಂಸ್ಥೆಗಳು ಮೊಹರು ಮಾಡಿದ ತರುವಾಯ ಲೈಸನ್ಸ್ ಪ್ರಾಧಿಕಾರಕ್ಕೆ ನೀಡುವ ವರದಿಯ ನಮೂನೆ
ಕರ್ನಾಟಕ ಸರ್ಕಾರ
(ಪೊಲೀಸ್ ಇಲಾಖೆ)
ಪೊಲೀಸ್ ಇನ್ಸ್ಪೆಕ್ಟರ್ರವರ ಕಛೇರಿ
ಪೊಲೀಸ್ ಠಾಣೆ/ . . . . . . .. . ವೃತ್ತ
ದಿನಾಂಕ:
ಸಂಖ್ಯೆ. ದಿನಾಂಕ:
ಇವರಿಗೆ,
ಲೈಸನ್ಸ್ ಪ್ರಾಧಿಕಾರ ವಿಭಾಗ
(ಆ ಪ್ರದೇಶದ ಅಧಿಕಾರವ್ಯಾಪ್ತಿ ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು/ ಉಪ- ವಿಭಾಗೀಯ ಅಧಿಕಾರಿಯ ಮೂಲಕ)
ಮಾನ್ಯರೆ,
ವಿಷಯ: ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017- ಕಾರ್ಯಸಂಸ್ಥೆಯುಸೀಲ್ ಮಾಡುವುದು-ಸಂಬಂಧಪಟ್ಟ ವರದಿಯನ್ನು ಸಲ್ಲಿಸುವುದು.
ಉಲ್ಲೇಖ: 1. ಸೀಲ್ ಮಾಡಿದ ಆದೇಶ ಸಂಖ್ಯೆ . . . . . . .
ಶ್ರೀ/ಶ್ರೀಮತಿ. . . . . . . . . . ರವರು (ಕಾರ್ಯಸಂಸ್ಥೆಯ ಸಂಕೇತ ಸಂಖ್ಯೆ ---) ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017ರ ಅಗತ್ಯತೆಗಳನ್ನು ಪಾಲಿಸದಿರುವುದು ರುಜುವಾತಾಗಿರುವ ಬಗ್ಗೆ ನಾನು ವರದಿ ಸಲ್ಲಿಸಿದ್ದೇನೆ. ಅಂಥ ವರದಿಗಳನ್ನು ಕಳುಹಿಸಲಾಗಿದೆ ಮತ್ತು ಅದಕ್ಕನುಸಾರವಾಗಿ ಮೊದಲ ಮತ್ತು ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕವನ್ನು ವಿಧಿಸಲಾಗಿದೆ. ಆದಾಗ್ಯೂ, ಎರಡು ತಿಂಗಳುಗಳ ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ದಿನಾಂಕದಿಂದ
ಮುಕ್ತಾಯವಾಗಿದ್ದು, ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ ಅಗತ್ಯತೆಗಳನ್ನು ಪಾಲಿಸದಿರುವ ಬಗ್ಗೆ
ಒಂದು ವರದಿಯನ್ನು ಸಮಿತಿಗೆ ಸಲ್ಲಿಸಲಾಗಿದೆ ಮತ್ತು ಕಾರಣ ಕೇಳುವ ನೋಟೀಸನ್ನು ಸಹ ನೀಡಲಾಗಿದೆ.
ಸಮಿತಿಯು ದಾಖಲೆಗಳನ್ನು ಪರಿಶೀಲಿಸಿದ ತರುವಾಯ ಹೇಳಲಾದ ಉಲ್ಲೇಖವನ್ನು ನೋಡಿ ಸೀಲ್
ಮಾಡಿರುವ ಆದೇಶಗಳನ್ನು ನೀಡಲಾಗಿದೆ. ಆದೇಶಗಳಿಗೆ ವಿಧೇಯವಾಗಿ, ಕಾರ್ಯಸಂಸ್ಥೆಯು, ಸೀಲ್
ಮಾಡಿ ಲಗತ್ತಿಸಲಾದ ವರದಿಯನ್ನು . . . . . . . . . ರಂದು ಮೊಹರು ಮಾಡಲಾಗಿದೆ.
ಇದು ಮಾಹಿತಿಗಾಗಿ ಅನುಕೂಲವಾಗಲಿದೆ.
ತಮ್ಮ ವಿಶ್ವಾಸಿ,
(ಪೊಲೀಸ್ ಇನ್ಸ್ಪೆಕ್ಟರ್)
(ಈ ಪ್ರದೇಶದ ಅಧಿಕಾರವ್ಯಾಪ್ತಿ ಹೊಂದಿರುವ)
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು