(1) ಪೊಲೀಸ್ ಕಮಿಷನರೇಟ್ನಲ್ಲಿ ಮೇಲ್ವಿಚಾರಣಾ ಸಮಿತಿಯು, ಅವರವರ ತಮ್ಮ ನಗರಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಆಯುಕ್ತರ ಮೂಲಕ ರಚಿಸತಕ್ಕದ್ದು. ಹಾಗೆ ರಚಿಸಲಾದ ಸಮಿತಿಗಳ ಅಧಿಕಾರ ವ್ಯಾಪ್ತಿಯು ಒಂದು ಉಪ- ವಿಭಾಗವಾಗಿರತಕ್ಕದ್ದು ಮತ್ತು ಅಧಿಕಾರ ವ್ಯಾಪ್ತಿಯು ಪೊಲೀಸ್ ಕಮಿಷನರೇಟ್ಗಳಲ್ಲಿರುವ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಆ ಜಿಲ್ಲೆಗಳಲ್ಲಿನ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯ ಅಧಿಕಾರ ವ್ಯಾಪ್ತಿಯೊಂದಿಗೆ ಸಮವ್ಯಾಪಿಯಾಗಿರತಕ್ಕದ್ದು.
(2) ಮೇಲ್ವಿಚಾರಣಾ ಸಮಿತಿಯು ಪೌರನಿಗಮ ಅಥವಾ ಪೌರಸಭೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಿಂದ ಒಬ್ಬ ಪ್ರತಿನಿಧಿಯನ್ನು ಒಳಗೊಂಡಿರುತ್ತದೆ. ಆ ಪ್ರತಿನಿಧಿಗಳು, ಈ ಮುಂದಿನ ಕೇಡರ್ನಲ್ಲಿರತಕ್ಕದ್ದು, ಎಂದರೆ:-
(i) ವಲಯ ಆಯುಕ್ತರು ಅಥವಾ ಪೌರ ಆಯುಕ್ತರು, ಸಂದರ್ಭಾನುಸಾರ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜಕರು ಅಥವಾ ಮೈಸೂರು, ಹುಬ್ಬಳ್ಳಿ-ಧಾರವಾಡ ಮುಂತಾದವುಗಳ ಅಂಥದೇ ಕಾರ್ಪೋರೇಷನ್ಗಳ ಸಂಬಂಧದಲ್ಲಿ ಯೋಜನಾ ಅಧಿಕಾರಿ ಅಥವಾ ಪಟ್ಟಣ ಯೋಜನಾ ಅಧಿಕಾರಿ ಅಥವಾ ಇತರೆ ಪೌರ ನಿಗಮಗಳ ಸಂಬಂಧವಾಗಿ ಪಟ್ಟಣ ಯೋಜನಾ ಮೇಲ್ವಿಚಾರಕರ ದರ್ಜೆಗಿಂತ ಕಡಿಮೆಯಿರದಂಥ ಅಧಿಕಾರಿಯನ್ನು ನಾಮನಿರ್ದೆಶನ ಮಾಡತಕ್ಕದ್ದು.
(ii) ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಂದಾಯ ವಿಭಾಗೀಯ ಅಧಿಕಾರಿಯು, ಸಹಾಯಕ ಕಂದಾಯ ಅಧಿಕಾರಿ ದರ್ಜೆಗಿಂತ ಕಡಿಮೆಯಿರದಂಥ ಅಧಿಕಾರಿಯನ್ನು ನಾಮನಿರ್ದೇಶನ ಮಾಡತಕ್ಕದ್ದು.
(iii) ಸಂದರ್ಭಾನುಸಾರ, ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ;
(iv) ಸಂದರ್ಭಾನುಸಾರ, ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯು ಮೇಲ್ವಿಚಾರಣಾ ಸಮಿತಿಯ ಸಂಚಾಲಕರಾಗಿರತಕ್ಕದ್ದು.