(1) ಕಾರ್ಯ ಸಂಸ್ಥೆಯನ್ನು ನಡೆಸುತ್ತಿರುವ ಪ್ರತಿಯೊಬ್ಬ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳು ಅಥವಾ ಸಂಘವು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಇನ್ಸ್ಪೆಕ್ಟರ್ರವರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಗಳಿಗೆ ಸೇರಿಸಲಾದ ನಮೂನೆ ಸಂಖ್ಯೆ. 15 ರಲ್ಲಿ ವಿದ್ಯುನ್ಮಾನ ನಮೂನೆಯಲ್ಲಾಗಲೀ ಅಥವಾ ಪ್ರತ್ಯಕ್ಷ (ವಾಸ್ತವಿಕ) ವಾಗಿಯಾಗಲೀ ಒದಗಿಸಲಾದ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಯುಕ್ತವಾಗಿ ನಿರ್ವಹಿಸಲಾಗಿದೆ ಮತ್ತು ಸಂಬಂಧಪಟ್ಟ ಸಲಕರಣೆಗಳು ಸುಸ್ಥಿತಿಯಲ್ಲಿವೆ ಎಂದು ಪ್ರಮಾಣೀಕರಿಸುವಂಥ ರೀತಿಯಲ್ಲಿ ನಿಯತಕಾಲಿಕ ವಿವರಪಟ್ಟಿಕೆಗಳನ್ನು ಸಲ್ಲಿಸತಕ್ಕದ್ದು.
(2) ಕಾರ್ಯಸಂಸ್ಥೆಯನ್ನು ನಡೆಸುತ್ತಿರುವ ಪ್ರತಿಯೊಬ್ಬ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳು ಅಥವಾ ಸಂಘವು ಸಕ್ಷಮ ಲೈಸೆನ್ಸ್ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸುವಾಗ ಆ ನಿಯಮಗಳಿಗೆ ಸೇರಿಸಲಾದ ಅರ್ಜಿ ನಮೂನೆ ಸಂಖ್ಯೆ 16 ರೊಂದಿಗೆ ಲೈಸನ್ಸ್ನ ನವೀಕರಣವನ್ನು ಲಗತ್ತಿಸತಕ್ಕದ್ದು.