(1) ಸಮಿತಿಯು ಈ ಅಧಿನಿಯಮದ ಅಡಿಯಲ್ಲಿ ಅಂಥ ಕಾರ್ಯಸಂಸ್ಥೆಯನ್ನು ಗುರುತಿಸತಕ್ಕದ್ದು ಮತ್ತು ನಮೂನೆ ಸಂಖ್ಯೆ. 1ರಲ್ಲಿ ನಿರ್ದಿಷ್ಟಪಡಿಸಲಾದಂತೆ ಅದನ್ನು ನಿರ್ವಹಿಸತಕ್ಕದ್ದು.
(2) ಮೇಲ್ವಿಚಾರಣಾ ಸಮಿತಿಯು ಪೊಲೀಸ್ ನಿರೀಕ್ಷಕರ ವರದಿಯನ್ನು ಸ್ವೀಕರಿಸಿದ ಮೇಲೆ ಆ ಕಾರ್ಯಸಂಸ್ಥೆಯು, ನಮೂನೆ ಸಂಖ್ಯೆ. 10 ರಲ್ಲಿ ರಾಜಿ ಮಾಡಿಕೊಳ್ಳುವ ಶುಲ್ಕವನ್ನು ಪ್ರತಿ 2ನೇ ತಿಂಗಳು ವಿಧಿಸಿದ ತರುವಾಯವೂ ಸಹ ನಿಯಮಗಳನ್ನು ಪಾಲಿಸಲು ವಿಫಲವಾದಲ್ಲಿ, ಆ ಕಾರ್ಯಸಂಸ್ಥೆಯ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಉಪ- ವಿಭಾಗೀಯ ಪೊಲೀಸ್ ಅಧಿಕಾರಿಯವರ ಮೂಲಕ ಮುಂದಕ್ಕೆ ಕಳುಹಿಸತಕ್ಕದ್ದು. ಪಾಲನೆ ಮಾಡದಿರುವುದಕ್ಕಾಗಿ ಆ ಕಾರ್ಯಸಂಸ್ಥೆಗೆ ಸೀಲ್ ಮಾಡುವುದಕ್ಕಾಗಿ ನಿಯಮಗಳಿಗೆ ಸೇರಿಸಲಾದ ನಮೂನೆ ಸಂಖ್ಯೆ 11ರಲ್ಲಿ ಕಾರಣಕೇಳುವ ನೋಟೀಸನ್ನು ನೀಡತಕ್ಕದ್ದು.
(3) ಅಗತ್ಯವಿದ್ದಲ್ಲಿ, ಮೇಲ್ವಿಚಾರಣಾ ಸಮಿತಿಯು ಕಾರ್ಯಸಂಸ್ಥೆಗೆ ಭೇಟಿ ನೀಡಬಹುದು;
(4) ಮೇಲ್ವಿಚಾರಣಾ ಸಮಿತಿಯು, ಕಾರಣಕೇಳುವ ನೋಟೀಸಿನ ಸ್ಪಷ್ಟೀಕರಣವನ್ನು ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳೊಳಗೆ ನಮೂನೆ ಸಂಖ್ಯೆ 12 ರಲ್ಲಿ ಸೀಲ್ ಮಾಡುವ ಆದೇಶವನ್ನು ಮಾಡತಕ್ಕದ್ದು.
(5) ಮೇಲ್ವಿಚಾರಣಾ ಸಮಿತಿಯು ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸೆಕ್ಟೊರಲ್ ಸಮಿತಿಯ ನೆರವನ್ನು ಪಡೆದುಕೊಳ್ಳತಕ್ಕದ್ದು.