(1) ಅಧಿನಿಯಮವು ಜಾರಿಗೆ ಬಂದಿರುವಂಥ ಯಾವುದೇ ಪ್ರದೇಶದಲ್ಲಿನ ಪ್ರತಿಯೊಬ್ಬ ನಿಯೋಜಕನು ಹಾಗೆ ಜಾರಿಗೆ ಬಂದ ದಿನಾಂಕದಿಂದ ಹದಿನೈದು ದಿವಸಗಳೊಳಗೆ ವೆಲ್ಫೇರ್ ಕಮೀಷನರಿಗೆ ಚೆಕ್ಕಿನ ಮೂಲಕ, ಮನಿ ಆರ್ಡರ್ ಮೂಲಕ ಅಥವಾ ನಗದು ಮೂಲಕ ಸದರಿ ದಿನಾಂಕಕ್ಕೆ ಮುಂಚೆ ನಿಯೋಜಿತನಿಂದ ವಸೂಲು ಮಾಡಿದ ಎಲ್ಲಾ ಜುಲ್ಮಾನೆಗಳನ್ನು ಸಂಂದಾಯ ಮಾಡತಕ್ಕದು ಮತ್ತು ಅದೇ ರೀತಿಯಲ್ಲಿ ಸದರಿ ದಿನಾಂಕದಂದು ಅಂಥ ನಿಯೋಜಕನು ಹೊಂದಿದ್ದ ಎಲ್ಲಾ ಸಂದಾಯ ಮಾಡಿಲ್ಲದ ಸಂಚಯಗಳನ್ನು ವರ್ಗಾವಣೆ ಮಾಡತಕ್ಕದು.
(ಐ) ನಿಯೋಜಕನು, (1ನೇ ಉಪನಿಯಮದ ಮೇರೆಗಿನ ಸಂದಾಯ ಅಥವಾ ವರ್ಗಾವಣೆಯೊಂ೦ದಿಗೆ ಮಾಡಿದ ಸಂದಾಯದ ಪೂರ್ಣ ವಿವರಗಳನ್ನು ಒದಗಿಸಿ ಒಂದು ವಿವರಣ ಪತ್ರವನ್ನು ವೆಲ್ಷೇರ್ ಕಮೀಷನರಿಗೆ ಸಲ್ಲಿಸತಕ್ಕದು.
(3) ಅಧಿನಿಯಮವು ಜಾರಿಗೆ ಬಂದ ತರುವಾಯ ನಿಯೋಜಿತರಿಂದ ವಸೂಲು ಮಾಡಿದ ಎಲ್ಲಾ ಜುಲ್ಮಾನೆಗಳನ್ನು ಮತ್ತು ಸಂದಾಯ ಮಾಡಿಲ್ಲದ ಒದಗಿಬಂದ ಎಲ್ಲಾ ಸಂಚಯಗಳನ್ನು (1) ಹಾಗೂ (2ನೇ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ನಿಯೋಜಕನು ಏಪ್ರಿಲ್ 15, ಜುಲೈ 15, ಅಕ್ಟೋಬರ್ 15ರಂದು ಅಥವಾ ಅದಕ್ಕೆ ಮುಂಚೆ ಪ್ರತಿ ಮೂರು ತಿಂಗಳಿಗೊಮ್ಮೆ ವೆಲ್ಫೇರ್ ಕಮೀಷನರನಿಗೆ ಸಂದಾಯ ಮಾಡತಕ್ಕದು.
3ಕ. ನಿಯೋಜಕನಿಂದ ವಂತಿಗೆಯ ಸಂಂದಾಯದ ಬಗ್ಗೆ ವಿವರಣ ಪತ್ರವನ್ನು ಒಪ್ಪಿಸುವುದು:- (1) ಪ್ರತಿಯೊಬ್ಬ ನಿಯೋಜಕನು, ವೆಲ್ಫೇರ್ ಕಮೀಷನರಿಗೆ ಪ್ರತಿ ವರ್ಷದ ಜನವರಿ 15 ರಂದು ಅಥವಾ ಅದಕ್ಕೆ ಮುಂಚೆ ನಿಯೋಜಕನು ಮಾಡಿದ ವಂತಿಗೆಗಳ ವಿವರ ಪತ್ರವನ್ನು (ಎಫ್) ನಮೂನೆಯಲ್ಲಿ ಒಪ್ಪಿಸತಕ್ಕುದು.
(2) ವೆಲ್ ಫೇರ್ ಕಮೀಷನರನು, ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷದ ಫೆಬ್ರವರಿ 15ರಂದು ಅಥವಾ ಅದಕ್ಕೆ ಮುಂಚೆ ಹಿಂದಿನ ವರ್ಷದಲ್ಲಿ ಅವನು ಸ್ವೀಕರಿಸಿದ ನಿಯೋಜಕನು ಮತ್ತು ನಿಯೋಜಿತರು ಕೊಟ್ಟ ವಂತಿಗೆಗಳ ವಿವರಣ ಪತ್ರವನ್ನು ನಮೂನೆ 'ಜ' ದಲ್ಲಿ ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕುದು.