ವೆಲ್ಫೇರ್ ಕಮೀಷನರನು ಈ ಅಧಿನಿಯಮದ 12ನೇ ಪ್ರಕರಣದ ಮೇರೆಗೆ ಪ್ರಧಾನ ಮಾಡಿದ ಅಧಿಕಾರಿಗಳ ಜೊತೆಗೆ, ಈ ಕೆಳಕಂಡ ಅಧಿಕಾರಗಳನ್ನು ಚಲಾಯಿಸಬಹುದು,-
(i) ನಾನ್ ಗೆಜೆಟೆಡ್ ಸಿಬ್ಬಂದಿಯವರಿಗೆ ಎರಡು ತಿಂಗಳವರೆಗೆ ಗಳಿಕೆ, ರಜೆ, ಅರ್ಧ ವೇತನ ರಜೆ, ಸಂಯೋಜಿತ ರಜೆ ಅಥವಾ ಪ್ರಸೂತಿ ರಜೆಯನ್ನು ಮಂಜೂರು ಮಾಡುವುದು.
(ii) ರಜಾ ಕಾಲದ ಖಾಲಿ ಸ್ಥಾನಗಳಲ್ಲಿ ॥॥ನೇ ವರ್ಗದ ಹಾಗೂ ?/ನೇ ವರ್ಗದ ತಾತ್ಕಾಲಿಕ ಸಿಬ್ಬಂದಿಯನ್ನು ಎರಡು BONY ಅವಧಿಯವರೆಗೆ ನೇಮಕ ಮಾಡುವುದು.
(1) ಪ್ರತಿ ವರ್ಷ 100 ರೂಪಾಯಿಗಳಿಗೊಳಪಟ್ಟು ಒಂದು ಬಾರಿಗೆ 25 ರೂಪಾಯಿಗಳ ಮಿತಿಯವರೆಗೆ ಲೇಖನ ಸಾಮಗಿಗಳನ್ನು ಖರೀದಿಸುವುದು.
(iv) ಪ್ರತಿ ಸಂದರ್ಭದಲ್ಲಿ 50-00 ರೂಪಾಯಿಗಳ ಮಿತಿಯವರೆಗೆ ಪೀಠೋಪಕರಣಗಳು ಮತ್ತು ಬೆರಳಚ್ಚು ಯಂತ್ರಗಳು, ಗಡಿಯಾರ ಇತ್ಯಾದಿಗಳಂಥ ಇತರ ಸಾಧನ ಸಾಮಗ್ರಿಗಳನ್ನು ದುರಸ್ತಿ ಮಾಡಿಸುವುದು.
- ನಾನ್ ಗೆಜೆಟೆಡ್ ಸಿಬ್ಬಂದಿಗೆ ಪ್ರಯಾಣ ಭತ್ಯ ಮುಂಗಡವನ್ನು ಮಂಜೂರು ಮಾಡುವುದು.
(vi) ನಾನ್ ಗೆಜೆಟೆಡ್ ಸಿಬ್ಬಂದಿಗೆ ಪ್ರಯಾಣ ಭತ್ಯದ ಬಿಲ್ಲುಗಳಿಗೆ ಮೇಲು ರುಜು ಮಾಡುವುದು.
(vii) ಜಾಹೀರಾತುಗಳನ್ನು ಒಳಗೊಂಡು ಅಧಿಸೂಚನೆಯನ್ನು ವೃತ್ತ ಪತ್ರಿಕೆಗಳಲ್ಲಿಪ್ರಕಟೆಸುವ ಬಗ್ಗೆ 50 ರೂಪಾಯಿಗಳನ್ನು ಮೀರಿದ ವೆಚ್ಚವನ್ನು ಮಂಜೂರು ಮಾಡುವುದು.
(Vili) ಡೇರಿ ಖರೀದಿಯನ್ನು ಮಂಜೂರು ಮಾಡುವುದು.
(ix) ಸರ್ಕಾರಿ ಪ್ರಕಟಣೆಗಳನ್ನು, ಸರ್ಕಾರಿ ಬುಕ್ ಡಿಪೋದಿಂದ ಖರೀದಿಸುವುದು.
(x) ಒಂದು ಬಾರಿಗೆ 100 ರೂಪಾಯಿಗಳು ಮತ್ತು ಪ್ರತಿ ವರ್ಷಕ್ಕೆ 500 ರೂಪಾಯಿಗಳನ್ನು ಮೀರಿದ ಖರ್ಚಿನಲ್ಲಿ ಇಲಾಖೆಯ ಚಟುವಟಿಕೆಗಳ ಬಗ್ಗೆ ಮುದ್ರಣ ಮತ್ತು ಪ್ರಕಟಣೆ ಮತ್ತು ಕೈಪಿಡಿಗಳ ಕರಪತ್ರಗಳಿಗಾಗಿ ವೆಚ್ಚಗಳನ್ನು ಮಂಜೂರು ಮಾಡುವುದು.
(xi) ನಾನ್ ಗೆಜೆಟೆಡ್ ಸಿಬ್ಬಂದಿ ವೇತನ ಬಡ್ತಿಗಳನ್ನು ಮಂಜೂರು ಮಾಡುವುದು.
(xii) ನಾನ್ ಗೆಜೆಟೆಡ್ ಸಿಬ್ಬಂದಿಗೆ ವೈದ್ಯಕೀಯ ವೆಚ್ಚಗಳನ್ನು ಮಂಜೂರು ಮಾಡುವುದು.
(xiii) ಸಾಮುದಾಯಿಕ ಅವಶ್ಯಕತೆಗಳಿಗಾಗಿ ಒಂದು ಬಾರಿಗೆ 100 ರೂಪಾಯಿಗಳನ್ನು ಮೀರಿದಂತೆ ವೆಚ್ಚವನ್ನು ಮಂಜೂರು ಮಾಡುವುದು.
(xiv) ಒಂದು ಬಾರಿಗೆ 100 ರೂಪಾಯಿಗಳನ್ನು ಮೀರಿದ ಖರ್ಚಿನಲ್ಲಿ ಆಟಗಳು ಮತ್ತು ಕ್ರೀಡೆಗಳಿಗಾಗಿ ವೆಚ್ಚವನ್ನು ಮಂಜೂರು ಮಾಡುವುದು.
(xv) ಒಂದು ಬಾರಿಗೆ 100 ರೂಪಾಯಿಗಳನ್ನು ಮೀರಿದ ಖರ್ಚಿನಲ್ಲಿ ಮನೋರಂ೦ಜನೆ ಮತ್ತು ಇತರ ಬಗೆಯ ವಿನೋದಗಳಿಗಾಗಿ ವೆಚ್ಚವನ್ನು ಮಂಜೂರು ಮಾಡುವುದು.