(1) ಹಣಕಾಸು ವರ್ಷದ ಕ್ರಮದಲ್ಲಿ ಬಜೆಟ್ನಲ್ಲಿ ಮಾಡಿರುವ ವ್ಯವಸ್ಥೆಗಿಂಥ ಮಿಗಿಲಾದ ಮತ್ತು ಹೆಚ್ಚಿನ ವೆಚ್ಚವನ್ನು ವಹಿಸುವುದು ಅವಶ್ಯವಾದರೆ ಮಂಡಲಿಯು ಪ್ರಸ್ತಾವಿತ ವೆಚ್ಚದ ವಿವರಗಳನ್ನು ಕೂಡಲೇ ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕುದು ಮತ್ತು ಹೆಚ್ಚುವರಿ ವೆಚ್ಚವನ್ನು ಭರಿಸಲು ಅದು ಪುಸ್ತಾವಿಸುವಂಥ ರೀತಿಯಲ್ಲಿ ವಿರ್ದಿಷ್ಟಪಡಿಸತಕ್ಕುದು. ರಾಜ್ಯ ಸರ್ಕಾರವು, ಅದು ಅವಶ್ಯವೆಂದು ಪರ್ಯಾಲೋಚಿಸುವಂಂಥ ಬದಲಾವಣೆಗಳನ್ನು ಮಾಡಿದ ತರುವಾಯ ಪ್ರಸ್ತಾವಿತ ವೆಚ್ಚವನ್ನು ಅನುಮೋದಿಸಬಹುದು ಅಥವಾ ಅದನ್ನು ತಿರಸ್ಕರಿಸಬಹುದು.
(2) (1) ನೇ ಉಪನಿಯಮದ ಮೇರೆಗೆ ರಾಜ್ಯ ಸರ್ಕಾರವು ಮಾಡಿದ ಆದೇಶದ ಪ್ರತಿಯನ್ನು ಮಂಡಲಿಗೆ ಮತ್ತು ರಾಜ್ಯ ಸರ್ಕಾರವು ನೇಮಕ ಮಾಡಿದ ಲೆಕ್ಕ ಪರಿಶೋಧಕನು ಯಾವನಾದರೂ ಇದ್ದರೆ ಅವನಿಗೆ ಕಳುಹಿಸಿಕೊಡತಕ್ಕುದು.
(3) ಆ ವೆಚ್ಚವನ್ನು ಮಂಡಲಿಯ ಅನುಮೋದನೆಗೆ ಒಳಪಟ್ಟು ವಹಿಸತಕ್ಕುದು.