(1) ಮಂಡಲಿಯ ಲೆಕ್ಕ ಪತ್ರಾಧಿಕಾರಿಯು ವಿಧಿಯ ಲೆಕ್ಕಪತ್ರಗಳನ್ನು ತಯಾರಿಸತಕ್ಕುದು ಮತ್ತು ಇಟ್ಟುಕೊಂಡು ಬರತಕ್ಕದು ಮತ್ತು ಅವುಗಳನ್ನು ವರ್ಷಕ್ಕೊಮ್ಮೆ ರಾಜ್ಯ ಲೆಕ್ಕಪತ್ರಗಳ ಇಲಾಖೆಯ ಕಂಟ್ರೋಲರನು ಪರಿಶೋಧಿಸತಕ್ಕದು. ವೆಲ್ ಫೇರ್ ಕಮೀಷನರನು ಲೆಕ್ಕಪರಿಶೋಧನಾ ಟಿಪ್ಪಣಿಯನ್ನು ವಿಲೆ ಮಾಡುವುದಕ್ಕಾಗಿ ಜವಾಬ್ದಾರನಾಗಿರತಕ್ಕುದು.
(2) ಮಂಡಲಿಯು ಸಂಪೂರ್ಣ ಮತ್ತು ನಿರ್ದಿಷ್ಟ ಲೆಕ್ಕಪತ್ರಗಳನ್ನು ಇಟ್ಟುಕೊಂಡು ಬರತಕ್ಕುದು ಮತ್ತು ಈ ಬಗ್ಗೆ ಪ್ರಕ್ರಿಯೆಯು, ಕರ್ನಾಟಕ ಹಣಕಾಸು ಸಂಹಿತೆಯಲ್ಲಿ ನಿರ್ಧಿಷ್ಟಪಡಿಸಿರುವಂತೆಯೇ ಇರತಕ್ಕುದು. ಲೆಕ್ಕಪತ್ರಗಳನ್ನು ಪ್ರತಿವರ್ಷ ಮಾರ್ಚ್ 31ರಂದು ಸರಿದೂಗಿಸತಕ್ಕುದು;
ಪರಂತು, ಮಂಡಲಿಯು ಮಾಡಿಕೊಂಡ ಅರ್ಜಿಯ ಮೇಲೆ ರಾಜ್ಯ ಸರ್ಕಾರವು ಸದರಿ ದಿನಾಂಕವನ್ನು ಮೂವತ್ತು ದಿವಸಗಳ ಮೀರದ ಅವಧಿಯಿಂದ ವಿಸ್ತರಿಸಬಹುದು.
(3) ವಾರ್ಷಿಕ ಲೆಕ್ಕಪತ್ರಗಳನ್ನು ವಿವರಿಸತಕ್ಕುದು ಮತ್ತು ಯಾವ ಹಣಕಾಸು ವರ್ಷಕ್ಕೆ ಅವು ಸಂಬಂಧಪಡುವವೋ ಆ ಹಣಕಾಸು ವರ್ಷವು ಮುಕ್ತಾಯವಾದ ತರುವಾಯ ಬರುವ ಪ್ರತಿ ಜೂನ್ 15ರಂದು ಅಥವಾ ಅದಕ್ಕೆ ಮುಂಚೆ ಪರಿಶೀಲನೆಗಾಗಿ, ರಾಜ್ಯ ಲೆಕ್ಕ ಪತ್ರಗಳ ಕಂಟ್ರೋಲರನ ಮುಂದೆ ಅಥವಾ ರಾಜ್ಯ ಲೆಕ್ಕ ಪತ್ರಗಳ ಕಂಟ್ರೋಲರನು ಅಧಿಕೃತಗೊಳಿಸಿದ ಯಾವನೇ ಅಧಿಕಾರಿಯ ಮುಂದೆ ಹಾಜರು ಪಡಿಸತಕ್ಕುದು.
ಪರಂತು, ಮಂಡಲಿಯು ಮಾಡಿಕೊಂಡ ಅರ್ಜಿಯ ಮೇಲೆ ರಾಜ್ಯ ಸರ್ಕಾರವು ಸದರಿ ದಿನಾಂಕವನ್ನು ಮೂವತ್ತು ದಿವಸಗಳನ್ನು ಮೀರಿದ ಅವಧಿಯಿಂದ ವಿಸ್ತರಿಸಬಹುದು.
(4) ಲೆಕ್ಕಪರಿಶೋಧನ ವರದಿಯ ಸಹಿತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಲಿಯ ಸಾಮಾನ್ಯ ಮೊಹರನ್ನು ಹಾಕುವ ಮೂಲಕ ಅಧಿಪ್ರಮಾಣಿಸತಕ್ಕುದು ಮತ್ತು ಅವುಗಳನ್ನು ನಾಲ್ಕು ಪ್ರತಿಗಳನ್ನು, ಅದು ಯಾವ ವರ್ಷಕ್ಕೆ ಸಂಬಂಧಪಟ್ಟಿದೆಯೋ ಆ ವರ್ಷದ ಮುಂದೆ ಬರುವ ನವೆಂಬರ್ ಒಂದನ್ನು ಮೀರದಂ೦ತೆ ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕದು.
(5) ಮಂಡಲಿಯ ಲೆಕ್ಕಪತ್ರಗಳ ವಾರ್ಷಿಕ ಲೆಕ್ಕಪರಿಶೋಧನೆಯನ್ನು ರಾಜ್ಯ ಲೆಕ್ಕಪತ್ರಗಳ ಕಂಟೋಲರನು ನಡೆಸತಕ್ಕುದು. ಈ ನಿಯಮಗಳಿಗನುಸಾರವಾಗಿ ನೇಮಕಗೊಂಡ ಲೆಕ್ಕ ಪರಿಶೋಧಕನ ಅಥವಾ ಲೆಕ್ಕ ಪರಿಶೋಧಕರು, ಲೆಕ್ಕಪತ್ರಗಳಿಗೆ ಸಂಂಬಂಧಪಟ್ಟಂತೆ ಮಂಡಲಿಯು ಇಟ್ಟುಕೊಂಡು ಬಂದ ಎಲ್ಲಾ ಪುಸ್ತಕಗಳು ಮತ್ತು ಅವುಗಳ ಬಗ್ಗೆ ವೋಚರುಗಳನ್ನು ನೋಡಲು ಅವರಿಗೆ ಅವಕಾಶ ಕೊಡತಕ್ಕುದು ಮತ್ತು ಆ ತರುವಾಯ ಅಥವಾ ಅವನಿಗೆ ಯಾವುದಕ್ಕೆ ಸಂಬಂಧಿಸಿದಂತೆ ಅವನು ಅಥವಾ ಅವರು ಲೆಕ್ಕಪತ್ರಗಳು ಸರಿಯಾಗಿಲ್ಲವೆಂದು ಭಾವಿಸುವರೋ ಪವೋಚರುಯಿಲ್ಲದಿರುವುದೋ ಅಥವಾ ನಿಯಮಗಳಿಗನುಸಾರವಾಗಿಲ್ಲದಿರುವುದೋ ಇವುಗಳನ್ನು ತೋರಿಸುವ ಅವನ ರುಜು ಅಥವಾ ಅವರ ರುಜುಗಳನ್ನು ಮಾಡಿ ಆ ನಮೂನೆಯ ಮೇಲೆ ಪ್ರತ್ಯೇಕವಾಗಿ ಸೂಚಿಸುವ ಲೆಕ್ಕ ಪರಿಶೋಧಕನ ಘೋಷಣೆಗೆ ರುಜು ಮಾಡತಕ್ಕುದು. ಈ ವಿವರ ಪತ್ರದಲ್ಲಿ ಕೊಟ್ಟಿರುವ ವಿವರಗಳು.
(ಕ) ಯಾವ ಸಂದಾಯವು ಅನಧಿಕೃತವೆಂದು ಅಥವಾ ಅಧಿನಿಯಮದ ಉಪಬಂ೦ದಗಳಿಗೆ ವಿರುದ್ಧವಾದುದು ಎಂದು ಕಂಡು ಬರುವುದೋ ಆ ಪ್ರತಿಯೊಂದು ಸಂದಾಯ;
(ಖ) ಯಾವನೇ ವ್ಯಕ್ತಿಯ ನಿರ್ಲಕ್ಷ್ಯತೆ ಅಥವಾ ದುರ್ನಡತೆಯಿಂದಾಗಿ.. ವಹಿಸಲಾಗಿರುವುದಾಗಿ ಕಂಡು ಬರುವಂಥ ಯಾವುದೇ ಕೊರತೆ ಅಥವಾ ನಷ್ಟದ ಮೊಬಲಗು; ಮತ್ತು
(ಗ) ಯಾವನೇ ವ್ಯಕ್ತಿಯ ಲೆಕ್ಕಕ್ಕೆ ತರಬೇಕಾಗಿದ್ದಂಥ ಆದರೆ ತಂದಿಲ್ಲದಂಥ ಯಾವುದೇ ಮೊತ್ತದ ಮೊಬಲಗು - ಇವುಗಳನ್ನುಸೂಚಿಸತಕ್ಕುದು.